ರಾಯಚೂರು

ಲಕ್ಷ್ಮೀ ಕ್ಯಾಂಪ್: ಮನೆ, ರಸ್ತೆ ನಿರ್ಮಾಣ ಪೂರ್ಣ

Published On :

ಸಿಂಧನೂರು: ಕೊಳಚೆ ಪ್ರದೇಶ ಅಭಿವೃದ್ಧಿ ಯೋಜನೆಯಡಿ 2009-10ರಲ್ಲಿ ಮಂಜೂರಾಗಿದ್ದರೂ ಗುತ್ತಿಗೆದಾರರ ವಿಳಂಬ ನೀತಿಯಿಂದ ನನೆಗುದಿಗೆ ಬಿದ್ದಿದ್ದ ನಗರದ ಲಕ್ಷ್ಮೀಕ್ಯಾಂಪ್ ನಿವಾಸಿಗಳ ಮನೆ ಮತ್ತು ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.
ನೂತನವಾಗಿ ನಿರ್ಮಾಣಗೊಂಡ ಮನೆಗಳನ್ನು ಶುಕ್ರವಾರ ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಕೊಳಚೆ ಪ್ರದೇಶ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿ.ಪಿ. ರಂಗವಲಿ ಪರಿಶೀಲಿಸಿದರು.
ಲಕ್ಷ್ಮೀಕ್ಯಾಂಪ್‌ಗೆ 105 ಮನೆಗಳನ್ನು ಮಂಜೂರು ಮಾಡಲಾಗಿತ್ತು. ಪ್ರತಿ ಮನೆಯನ್ನು 280 ಚದರ್ ಅಡಿಯಲ್ಲಿ ನಿರ್ಮಿಸಲು 1.35 ಲಕ್ಷ ಖರ್ಚು ಮಾಡಲು ಅಂದಾಜು ಪತ್ರಿಕೆಯಲ್ಲಿ ನಿಗದಿಪಡಿಸಲಾಗಿತ್ತು. ಅಲ್ಲದೆ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಗುತ್ತಿಗೆದಾರ ಪಿ.ಶ್ರೀನಿವಾಸ್ ಎಂಬವರಿಗೆ ಕೆಲಸದ ಆದೇಶ ನೀಡಲಾಗಿತ್ತು.
ಇತ್ತೀಚೆಗೆ 31ನೇ ವಾರ್ಡ್ ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತರುವ ಮೂಲಕ ಅರೆಬರೆ ಕಟ್ಟಲಾದ ಮನೆಗಳನ್ನು ಪೂರ್ಣಗೊಳಿಸುವ ಜೊತೆಗೆ 1 ಕಿಮೀ ಸಿಸಿ ರಸ್ತೆಯನ್ನು ಸಹ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಮೈಲ್‌ಕ್ಯಾಂಪಿನಲ್ಲಿ ಸುಮಾರು 40 ಮನೆಗಳು ಪ್ರಗತಿಯಲ್ಲಿವೆ. ಇಂದಿರಾನಗರದಲ್ಲಿ 150 ಮನೆ, ಗಂಗಾನಗರದಲ್ಲಿ 160, ಮುನಿಸಿಪಲ್ ಕಾಲೋನಿಯಲ್ಲಿ 120, ಲಕ್ಷ್ಮೀನಾರಾಯಣ ಕ್ಯಾಂಪ್‌ನಲ್ಲಿ 105 ಮನೆಗಳನ್ನು ನಿರ್ಮಿಸಲಾಗಿದೆ ಎಂದು ರಂಗವಲಿ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.