ದಾಸೋಹ ಅಂಗಳದಲ್ಲಿ ಉಪನ್ಯಾಸ ಮಾಲಿಕೆ
ಗುಲ್ಬರ್ಗ: ಇಲ್ಲಿನ ಮಹಾದಾಸೋಹ ಅಂಗಳದಲ್ಲಿ ಈ ಬಾರಿ ಉಪನ್ಯಾಸ ಶ್ರಾವಣ ಶುರುವಾಗಲಿದೆ. ಜು.26ರಿಂದಲೇ ವೀರಶೈವ ಧರ್ಮದ ಹೊಸ ಹೊಸ ಸಂಗತಿಗಳ ಮೇಲೆ ಬೆಳಕು ಚೆಲ್ಲುವಂತಹ ಉಪನ್ಯಾಸ ಮಾಲಿಕೆ ಶುರುವಾಗಲಿದೆ.
ದಾಸೋಹ ಮಹಾಮನೆಯಲ್ಲಿ ಈ ಸಂಗತಿ ಪ್ರಕಟಿಸಿರುವ ದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ, ವೀರಶೈವ ಧರ್ಮ, ಸಂಸ್ಕೃತಿ, ಸಾಹಿತ್ಯದ ಸಂಗತಿಗಳೇ ಈ ಬಾರಿಯ ಉಪನ್ಯಾಸ ಮಾಲಿಕೆಯ ಪ್ರಧಾನ ಸಂಗತಿಗಳು ಎಂದು ಹೇಳಿದ್ದಾರೆ.
ಸುಲಫಲ ಮಠದ ಮಹಾಂತ ಶ್ರೀಗಳ ಅಧ್ಯಕ್ಷತೆಯಲ್ಲಿ ಮಾಲಿಕೆ ಆರಂಭವಾಗಲಿದ್ದು, ಡಾ. ಶರಣಬಸವಪ್ಪ ಅಪ್ಪ ಮಾಲಿಕೆಯ ಮೊದಲ ದಿನದ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ವಚನಾಂಜಲಿ, ಉಪನ್ಯಾಸ ಮಾಲಿಕೆ ಹಾಗೂ ಶರಣರ ಕಲಾಕೃತಿಗಳ ದರ್ಶನಗಳಂತಹ ಮೂರು ಹಂತದ ಪ್ರಮುಖ ಕಾರ್ಯಕ್ರಮಗಳೊಂದಿಗೆ ಈ ಬಾರಿಯ ಶ್ರಾವಣ ಇನ್ನೂ ಹೆಚ್ಚು ಸಮೃದ್ಧಿಯಾಗಲಿದೆ. ಈ ಉಪನ್ಯಾಸ ಮಾಲಿಕೆ ಕಳೆದ 60 ವರ್ಷದಿಂದ ಮುಂದುವರಿದುಕೊಂಡು ಹೊರಟಿದೆ ಎಂದು ಮಾಲಿಕೆಯ ಸಂಚಾಲಕ ಡಾ. ಶಿವರಾಜ ಶಾಸ್ತ್ರೀ ಹೆರೂರ್ ಹೇಳಿದ್ದಾರೆ.
ವೀರೇಶ ನಂದಗಾವ ಅವರು ವೀರಶೈವ ಧರ್ಮದ ಉಗಮ-ವಿಕಾಸ ಉಪನ್ಯಾಸದೊಂದಿಗೆ ಮಾಲಿಕೆ ಶುರುವಾಗಲಿದ್ದು, ವೀರಶೈವ ಸಂಶೋಧಕರು, ಮುದ್ರಕರು ವಿಷಯದ ಡಾ. ವಿದ್ಯಾಶಂಕರ, ಡಾ. ಪುಟ್ಟಮಣಿ ಇವರ ಉಪನ್ಯಾಸದೊಂದಿಗೆ ಮಾಲಿಕೆ ಕೊನೆಗೊಳ್ಳಲಿದೆ. ಜು.26ರಿಂದ ಶ್ರಾವಣದ 40 ದಿನ ಅನುಭವ ಮಂಟಪದ ಅಂಗಳದಲ್ಲಿ ರಾತ್ರಿ 6 ಗಂಟೆಗೆ ಉಪನ್ಯಾಸ ನಡೆಯುತ್ತದೆ ಎಂದು ಡಾ. ಸಿವರಾಜ ಶಾಸ್ತ್ರೀ, ಡಾ. ಪತಂಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

