ರಾಯಚೂರು

ಸಂತೆಕೆಲ್ಲೂರು ಹಾಸ್ಟೆಲ್ಗೆ ತಾಪಂ ಅಧ್ಯಕ್ಷ ಭೇಟಿ

Published On :

ಲಿಂಗಸ್ಗೂರು: ತಾಲೂಕಿನ ಸಂತೆಕೆಲ್ಲೂರು ಗ್ರಾಮದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಹಿಂದುಳಿದ ವರ್ಗದ ವಸತಿ ನಿಲಯಕ್ಕೆ ತಾಪಂ ಅಧ್ಯಕ್ಷ ರುದ್ರಗೌಡ ತುರಡಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 8 ಜನ ಶಿಕ್ಷಕರಲ್ಲಿ ಮೂವರು ಶಿಕ್ಷಕರು ರಜೆ ಮೇಲೆ ತೆರಳಿದ್ದು, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದ್ದನ್ನು ಪ್ರಶ್ನಿಸಿದರು. ನಂತರ ಪ್ರೌಢಶಾಲೆಗೆ ಭೇಟಿ ನೀಡಿದಾಗ ಶಾಲಾ ಕಂಪೌಂಡ್ಗೆ ಗೇಟ್ ಇಲ್ಲದ ಪ್ರಯುಕ್ತ ಜಾನುವಾರು, ನಾಯಿಗಳು ಹಾಗೂ ವಾಹನ, ಸಾರ್ವಜನಿಕರ ಸಂಚಾರದಿಂದ ಮೈದಾನದಲ್ಲಿ ಗಿಡಗಳು ಹಾಳಾಗುತ್ತಿವೆ. ಕಂಪೌಂಡ್ ಮತ್ತು ಗೇಟ್ ನಿರ್ಮಿಸುವಂತೆ ಮುಖ್ಯಗುರುಗಳು ಮನವಿ ಮಾಡಿದರು. ಮನವಿ ಆಲಿಸಿದ ತಾಪಂ ಅಧ್ಯಕ್ಷರು, ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸುವಂತೆ ಗ್ರಾಪಂ ಪಿಡಿಒ ಉಮೇಶರಿಗೆ ಸೂಚಿಸಿದರು. ನಂತರ ಬಿಸಿಯೂಟ, ಶಿಕ್ಷಕರ ಕೊರತೆ, ಮಕ್ಕಳ ಆಸನ, ಪಠ್ಯಪುಸ್ತಕ ಪರಿಶೀಲನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಗೌಡ ಪಾಟೀಲರಿಗೆ ಶಾಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ದೂರವಾಣಿ ಮೂಲಕ ಹೇಳಿದರು. ಊಟ ಸರಿ ಇಲ್ಲ. ಪೆಟ್ಟಿಗೆ, ಸಾಬೂನು, ತಟ್ಟೆ, ಲೋಟ, ಕ್ಷೌರಕ್ಕೆ ಹಣ ನೀಡದ ಬಗ್ಗೆ ದೂರಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಈ ವೇಳೆ ಡಾ. ಸುರೇಶ ಹೂನೂರ, ಎಸ್ಡಿಎಂಸಿ ಅಧ್ಯಕ್ಷ ಮೌನೇಶ ಪತ್ತಾರ, ಶಿವಗ್ಯಾನಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.