ರಾಯಚೂರು

ಮಠಗಳು ಶಿಕ್ಷಣ ಸಂಸ್ಥೆ ಆರಂಭಿಸಲಿ: ಬಾದರ್ಲಿ

Published On :

ಕ.ಪ್ರ. ವಾರ್ತೆ ್ಣ ಸಿಂಧನೂರು ್ಣ ಜೂ.2
ಮಠ ಮಾನ್ಯಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತಿವೆ. ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಜನರಲ್ಲಿ ಹೆಚ್ಚು ಹೆಚ್ಚು ಪ್ರಜ್ಞೆ ಮೂಡಿಸುತ್ತಿವೆ. ಅದರೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಸಲಹೆ ನೀಡಿದರು.
ತಾಲೂಕಿನ ಮೂರುಮೈಲ್ ಕ್ಯಾಂಪ್‌ನ ಖಾಸಾಶಾಖಾ ಮಠದಲ್ಲಿ ಸೋಮನಾಥ ಶಿವಾಚಾರ್ಯ ಸ್ವಾಮಿ ನೇತೃತ್ವದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವ ಸನ್ಮಾನ ಮತ್ತು ಬೇಸಿಗೆ ವೇದಾಧ್ಯಯನ ಸಂಸ್ಕಾರ ಶಿಬಿರದ ಮಂಗಲ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪರಿಪೂರ್ಣತೆ: ಮಠಾಧೀಶರ ಗುರುಬೋಧನೆಯಿಂದ ಭಕ್ತರು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ನಾವು ಪರಿಪೂರ್ಣ ಭಕ್ತರಾಗಲು ಸಾಧ್ಯ. ತಾಲೂಕಿನ ಧಾರ್ಮಿಕ ಕೇಂದ್ರಗಳಿಗೆ ಸರ್ಕಾರದಿಂದ ಹಣ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.  
ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ವಾಗೇಶ ಪ್ರಸಾದ ಮಾತನಾಡಿ, ವೀರಶೈವ ಮಠಗಳಿಂದ ಸಂಸ್ಕೃತಿಯೂ ದೇಶಾದ್ಯಂತ ಹೆಚ್ಚುತ್ತಿದೆ. ಇಂತಹ ಸಂಸ್ಕಾರ ಮಠಗಳಿಗೆ ಪ್ರತಿಯೊಬ್ಬರು ಸಹಾಯ ಸಹಕಾರ ನೀಡುತ್ತಾ, ವೀರಶೈವರ ಸಂಘಟನೆ ಬಲಪಡಿಸಬೇಕಾಗಿದೆ. ಇತರ ಸಮಾಜದವರ ಸಹಾಯ ಸಹಕಾರವೂ ಅಗತ್ಯವಿದೆ. ವೀರಶೈವ ಸಮಾಜದ ಯುವಕರು ವಿದ್ಯಾವಂತರಾಗಿ, ಜೊತೆಗೆ ವೀರಶೈವ ಧರ್ಮಗ್ರಂಥದ ಬಗ್ಗೆ ಪ್ರಚಾರ ಹೆಚ್ಚು ಮಾಡಬೇಕೆಂದರು.
ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮಿ, ರೌಡಕುಂದ, ಬಾಳೆ ಹೊನ್ನೂರು ಖಾಸಾ ಶಾಖಾಮಠದಲ್ಲಿ ಸೋಮನಾಥ ಶಿವಾಚಾರ್ಯ ಸ್ವಾಮಿ, ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮಿ, ನವಲಕಲ್ಲು, ಅಭಿನವ ಚಂದ್ರಶೇಖರ ಶಿವಾಚಾರ್ಯ ಮುದೇನೂರು, ನೀಲಕಂಠ ಶಿವಾಚಾರ್ಯ ಸ್ವಾಮಿ ಚಿಮ್ಮಲಗಿ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ರಾಯಚೂರಿನ ಅಧ್ಯಾಪಕ ಪರಮೇಶ್ವರ ಸಾಲಿಮಠ ಮಾತನಾಡಿದರು. ಸಾನ್ನಿಧ್ಯವನ್ನು ರಾಯಚೂರಿನ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ವಹಿಸಿದ್ದರು.
ರುದ್ರಮುನಿ ದೇವರು ಮಸ್ಕಿ, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಅಮರಗುಂಡ ದೇವರು ತುರ್ವಿಹಾಳ, ಸಿದ್ದರಾಮೇಸ್ವರ ಶರಣರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.