ರಾಯಚೂರು

ಜಂಗೀರಾಂಪುರ ತಾಂಡಾ: ದುರ್ಗಾದೇವಿ ದೇವಸ್ಥಾನ ಉದ್ಘಾಟನೆ

Published On :

ಕ.ಪ್ರ. ವಾರ್ತೆ ್ಣ ಲಿಂಗಸ್ಗೂರು ್ಣ ಜೂ.2
ತಾಲೂಕಿನ ಜಂಗೀರಾಂಪುರ ತಾಂಡಾದಲ್ಲಿ ನೂತನ ದುರ್ಗಾದೇವಿ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಹಾಗೂ ಗದ್ದೆಮ್ಮ ದೇವಿಯ ಉಡಿ ತುಂಬುವ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ಜರುಗಿತು.
ದೇವರಗಡ್ಡಿ ದೇವಸ್ಥಾನದಿಂದ ಭಾನುವಾರ ಸಂಜೆ ಗದ್ದೆಮ್ಮ ದೇವಿ ಮೂರ್ತಿಯನ್ನು ಜಂಗೀರಾಂಪುರ ತಾಂಡಾಕ್ಕೆ ಸಂಗೀತ ವಾದ್ಯಗಳ ಸಮೇತ ತರಲಾಯಿತು. ಸೋಮವಾರ ಬೆಳಗ್ಗೆ 7 ಗಂಟೆಗೆ 33 ಕಳಸಗಳ ಸಮೇತ ಗಂಗಾ ಸ್ಥಳ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಧಾರ್ಮಿಕ ಸಮಾರಂಭ ಜರುಗಿತು. ಸಂಜೆ ದುರ್ಗಾದೇವಿ ಹಾಗೂ ಗದ್ದೆಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮಗಳು ಜರುಗಿದವು. ನಂತರ ರಾತ್ರಿ ಭಜನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಅಂಕಲಿಮಠದ ಶ್ರೀಗಳು, ಶಾಸಕ ಮಾನಪ್ಪ ವಜ್ಜಲ್, ಡಿವೈಎಸ್‌ಪಿ ಅನಿತಾ ಹದ್ದಣ್ಣವರ್, ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಜೀವಲಪ್ಪ ನಾಯ್ಕ, ಮುಖಂಡರಾದ ಈರಣ್ಣ ನಾಯ್ಕ, ಧನಶೆಟ್ಟಿ ಹಳಪ್ಪ, ಪುಲ್ಲಪ್ಪ ಶಿಕ್ಷಕರು, ಗ್ರಾಪಂ ಸದಸ್ಯ ಶೇಠೆಪ್ಪ, ಅಮರಪ್ಪ, ಪೂರಪ್ಪ ಪೂಜಾರಿ, ಲಾಲಪ್ಪ ಪೂಜಾರಿ, ಲಾಲಸಿಂಗಪ್ಪ ಪೂಜಾರಿ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.