ಎಂಎಫ್ಎ ಪ್ರವೇಶಕ್ಕೆ ಅವಕಾಶ
ರಾಯಚೂರು: ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಎಫ್ಎ ಪ್ರವೇಶಕ್ಕೆ ಆಸಕ್ತರಿಂದ ಅರ್ಜಿ ಕರೆಯಲಾಗಿದೆ. 2014- 15ನೇ ಸಾಲಿಗೆ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ವಿಭಾಗದಲ್ಲಿ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದ್ದು, ಅಂಗೀಕೃತ ವಿಶ್ವವಿದ್ಯಾಲಯದ ಬಿಎಫ್ಎ ಅಥವಾ ತತ್ಸಮಾನ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿಗಾಗಿ 250 ಪಾವತಿಸಿ, ಖುದ್ದಾಗಿ ಅಥವಾ 275 ಡಿಡಿಯನ್ನು ಡೀನ್, ಕಾವಾ, ಮೈಸೂರು ಇವರ ಹೆಸರಿನಲ್ಲಿ ಪಡೆದು ಕಾಲೇಜಿನ ಡೀನ್ಗೆ ಸಲ್ಲಿಸಿ ಅರ್ಜಿ ಪಡೆಯಬಹುದು. ಅರ್ಜಿ ಸಲ್ಲಿಸಲು ಜೂ.30 ಕಡೆಯ ದಿನ. ಅರ್ಹತಾ ಪರೀಕ್ಷೆಯನ್ನು ಜು.4ರಂದು ಬೆ.11ಕ್ಕೆ ಆಯಾ ವಿಭಾಗದಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು, ಸಿಟಿಐ ಕಟ್ಟಡ, ಸಯ್ಯಾಜಿರಾವ್ ರಸ್ತೆ, ಮೈಸೂರಿನಲ್ಲಿ ನಡೆಸಲಾಗುತ್ತದೆ. ಶುಲ್ಕ ಪಾವತಿಗೆ ಜು.10 ಕಡೆಯ ದಿನ. ತರಗತಿಗಳು ಜು.14ರಿಂದ ಆರಂಭವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ. ದೂ. 0821-2438930, 31 ಸಂಪರ್ಕಿಸಿ.
ಡೆಂಘೀ ನಿಯಂತ್ರಣಕ್ಕೆ ಸಹಕರಿಸಿ: ಡಾ. ನರಸಿಂಹಲು
ಸಿಂಧನೂರು: ಮನುಷ್ಯನ ನಿಷ್ಕಾಳಜಿಯಿಂದ ಉಂಟಾಗುವ ಮಾರಕ ಡೆಂಘೀ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ. ನರಸಿಂಹಲು ಹೇಳಿದರು. ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಆರ್.ಎಚ್-2, ಗ್ರಾಮ ಪಂಚಾಯ್ತಿ, ಸ್ಥಳೀಯ ಮಹಿಳಾ ಸ್ತ್ರೀಶಕ್ತಿ ಸಂಘಗಳ ಸಹಕಾರದೊಂದಿಗೆ ತಾಲೂಕಿನ ಆರ್.ಎಚ್-2ರಲ್ಲಿ ಶಂಕಿತ ಡೆಂಘೀ ಜ್ವರ ನಿಯಂತ್ರಣದಲ್ಲಿ ಸಮುದಾಯ ಜವಾಬ್ದಾರಿಯ ಕುರಿತ ಜಾಗೃತಿಯಲ್ಲಿ ಮಾತನಾಡಿದರು. ಮೂಳೆ ತಜ್ಞ ಡಾ. ಸುದಾನ್ರಾಯ್ ಮಾತನಾಡಿದರು. ತಾಪಂ ಸದಸ್ಯೆ ಹೇಮಲತಾ ಸರ್ಕಾರ, ವೈದ್ಯಾಧಿಕಾರಿಗಳಾದ ಡಾ. ರಮ್ಯಾ ದೀಪಿಕಾ, ಡಾ. ಎಸ್.ಎಸ್. ಸುಂಕದ, ಜಿಲ್ಲಾ ಕೀಟಶಾಸ್ತ್ರಜ್ಞ ಪರುಶರಾಮ ನಾಯಕ, ಜಿಲ್ಲಾ ಮೇಲ್ವಿಚಾರಕ ಚಂದ್ರಯ್ಯ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಗ್ರಾಪಂ ಸದಸ್ಯರಾದ ಪ್ರಶಾಂತ ಮಹಲ್ದಾರ, ತುಳಸಿ ಮಂಡಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

