ಕಾಮಗಾರಿ ಹಣ ನೀಡದೆ ವಂಚಿಸಿದ ಅಧಿಕಾರಿ: ಆರೋಪ
ಮುದಗಲ್: ಪಟ್ಟಣ ಸಮೀಪದ ಹಡಗಲಿ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದರೂ ಅನುದಾನ ನೀಡದೇ ವಂಚಿಸಿದ್ದಾರೆಂದು ಗ್ರಾಪಂ ಸದಸ್ಯ ಅಮರೇಶ ವಿಟ್ಲಾಪೂರ ಹಾಗೂ ಗ್ರಾಮದ ಮುಖಂಡರು ಆರೋಪಿಸಿದ್ದಾರೆ. ಹಡಗಲಿ ತಾಪಂ ಕ್ಷೇತ್ರದ ಸದಸ್ಯ ತಿಮ್ಮಣ್ಣ ನಾಯಕ ತಾಪಂನ ಬಿಆರ್ಜಿಎಫ್ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸುಮಾರು 3.60 ಲಕ್ಷ ಅನುದಾನ ಮಂಜೂರು ಮಾಡಿಸಲಿದ್ದರು. ಸದರಿ ಕಟ್ಟಡದ ನಿರ್ಮಾಣ ಉಸ್ತುವಾರಿಯನ್ನು ಪಿಆರ್ಇ ಇಲಾಖೆಯ ಅಧಿಕಾರಿ ವೆಂಕಟೇಶ ತನ್ನ ಸಹೋದರನ ಹೆಸರಿಗೆ ಗುತ್ತಿಗೆ ಪಡೆದು ಉಪಗುತ್ತಿಗೆಯನ್ನು ಹಡಗಲಿ ತಿಮ್ಮನಗೌಡ ದಳಪತಿ ಹಾಗೂ ಅಮರೇಶ ವಿಟ್ಲಾಪುರ ಎಂಬುವರಿಗೆ ನೀಡಿದ್ದರು. ಉಪಗುತ್ತಿಗೆದಾರರು ನಿಯಮದಂತೆ ಕಾಮಗಾರಿ ಮಾಡಿ ತಿಂಗಳು ಕಳೆದಿದೆ. ಆದರೆ ಕಟ್ಟಡ ಕಾಮಗಾರಿಗೆ 3.60 ಲಕ್ಷ ಮೊತ್ತದಲ್ಲಿ ಕೇವಲ 2.17 ಲಕ್ಷ ಮಾತ್ರ ನೀಡಿದ್ದಾರೆ. ಬಾಕಿ ಹಣ ಕೇಳಿದರೆ ಸಬೂಬು ಹೇಳಿ ಪಾರಾಗಲು ಯತ್ನಿಸಿದ್ದಾರೆಂದು ಗ್ರಾಪಂ ಸದಸ್ಯ ಅಮರೇಶ, ಬಸಪ್ಪ, ಯಂಕಣ್ಣ ಇತರರು ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

