ರಾಯಚೂರು

ಜಾಲಹಳ್ಳಿ ಜಿಪಂ ಉಪಚುನಾವಣೆ: ಶೇ.65.50ರಷ್ಟು ಮತದಾನ

Published On :

ದೇವದುರ್ಗ: ತಾಲೂಕಿನ ಜಾಲಹಳ್ಳಿ ಜಿಲ್ಲಾ ಪಂಚಾಯತಿಯ ಎಸ್ಟಿ ಮೀಸಲು ಮಹಿಳಾ ಕ್ಷೇತ್ರಕ್ಕೆ ಭಾನುವಾರ ನಡೆದ ಉಪಚುನಾವಣೆಯ ಮತದಾನ ಒಟ್ಟಾರೆ ಶಾಂತಿಯುತವಾಗಿತ್ತು.
ಜಾಲಹಳ್ಳಿ ಜಿಪಂ ಸದಸ್ಯರಾಗಿದ್ದ ಹರ್ಷಿತಾ ಪಾಟೀಲ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು, ಜಿಪಂ ವ್ಯಾಪ್ತಿಯ ಗಾಣದಾಳ, ಚಿಂಚೋಡಿ, ಜಾಲಹಳ್ಳಿ, ಎಚ್. ಸಿದ್ದಾಪುರ ಮತ್ತು ಕರಡಿಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು. ಪ್ರಸಕ್ತ ಉಪ ಚುನಾವಣೆಯಲ್ಲಿ ಮತದಾರರು ಬೆಳಗ್ಗೆಯಿಂದಲೇ ಮತದಾನ ಕೇಂದ್ರಕ್ಕೆ ಆಗಮಿಸದೇ ನಿರಾಸಕ್ತಿ ತೋರಿದ್ದು ಕಂಡುಬಂದಿತು. ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಬೆಳಗ್ಗೆ 11ರವರೆಗೆ ಮತದಾನದ ಪ್ರಮಾಣ ಎರಡಂಕಿ ದಾಟಿರಲಿಲ್ಲ. ಮಧ್ಯಾಹ್ನದ ನಂತರವೇ ಮತದಾನ ಚುರುಕುಗೊಂಡು ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನಕ್ಕೆ ಆಸಕ್ತಿ ತೋರಿದ್ದು ಕಂಡುಬಂದಿತು. ಒಟ್ಟಾರೆಯಾಗಿ ಮತದಾನ ಶಾಂತಿಯುತವಾಗಿದ್ದು, ಶೇ.65.50ರಷ್ಟು ಮತದಾನವಾಗಿದೆ ಎಂದು ಮೂಲಗಳು ತಿಳಿಸಿವೆ.
ಭವಿಷ್ಯ ನಿರ್ಧಾರ: ಜಿಪಂ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಮಲ್ಲಮ್ಮ, ಬಿಜೆಪಿಯ ಮಹಾದೇವಮ್ಮ ಹಾಗೂ ಜೆಡಿಎಸ್‌ನಿಂದ ರಂಗಮ್ಮ ಕಣದಲ್ಲಿದ್ದು, ಮೂವರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಸೇರಿದಂತಾಗಿದೆ. ಮಾ.5ರಂದು ಮತಗಳ ಎಣಿಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.