ಮೋಡ ಕವಿದ ವಾತಾವರಣ
ಚಿಂಚೋಳಿ: ತಾಲೂಕಿನಲ್ಲಿ ಕಳೆದ ಫೆ.28ರಿಂದ ಗುಡುಗು ಮಿಂಚು ಸಿಡಿಲಿನ ಆರ್ಭಟದಿಂದ ಅಕಾಲಿಕ ವ್ಯಾಪಕ ಮಳೆಯಾಗಿದೆ ಎಂದು ತಾಲೂಕ ಜಲ ಹವಾಮಾನ ಮಾಪನ ಇಲಾಖೆ ಕಲಿತ ಸಹಾಯಕ ಶ್ರೀಮಂತ ದುಕಾನದಾರ ತಿಳಿಸಿದ್ದಾರೆ. ತಾಲೂಕಿನ ಚಿಂಚೋಳಿ ವಲಯದಲ್ಲಿ 37.06 ಮಿಮೀ, ಚಿಮ್ಮನಚೋಡ- 44.8 ಮಿಮೀ, ಸುಲೇಪೇಟ-32.02ಮಿಮೀ, ಕುಂಚಾವರಂ- 34.04 ಮಿಮೀ, ಐನಾಪೂರ 58.04 ಮಿಮೀ, ಕೋಡ್ಲಿ-58.06 ಮಿಮೀ ಮಳೆಯಾಗಿದೆ. ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದ್ದು, ಮಾರ್ಚ್-10 ರವರೆಗೆ ಅಕಾಲಿಕ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ.
ಭೂಸನೂರ ಆಯ್ಕೆ
ಆಳಂದ: ತಾಲೂಕು ಕೋಲಿ ಸಮಾಜದ ಗೌರವ ಅಧ್ಯಕ್ಷರಾಗಿ ಕಲ್ಯಾಣಿ ಜಮಾದಾರ ಭೂಸನೂರ ಅವರನ್ನು ಆಯ್ಕೆ ಮಾಡಲಾಗಿದೆ. ಪಟ್ಟಣದ ಕೋಲಿ ಸಮಾಜದ ಭವನದಲ್ಲಿ ಕರೆದ ಸಭೆಯಲ್ಲಿ ಶನಿವಾರ ಗೌರವ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಮಾಜದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನೆರವೇರಿತು.
ಸೀಮೆ ಎಣ್ಣೆ ವಿತರಣೆ
ಗುಲ್ಬರ್ಗ: ಸೀಮೆಎಣ್ಣೆ ಖಾತ್ರಿ ಯೋಜನೆಯಡಿ ಎಎಐ ಹಾಗೂ ಬಿಪಿಎಲ್ ಅನಿಲರಹಿತ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳ 15ರಿಂದ 25ರ ವರೆಗೆ ಬೆ.8ರಿಂದ ರಾತ್ರಿ 8ರ ವರೆಗೆ ರಾಜ್ಯ ಸರ್ಕಾರದ ರಜಾ ದಿನಗಳನ್ನು ಹೊರತುಪಡಿಸಿ (ಮಂಗಳವಾರ ಒಳಗೊಂಡು) ಇನ್ನುಳಿದ ದಿನಗಳಲ್ಲಿ ಸೀಮೆಎಣ್ಣೆ ವಿತರಣೆ ಮಾಡಲಾಗುವುದೆಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಗುಲ್ಬರ್ಗ ಹಾಗೂ ಶಹಾಬಾದ್- ವಾಡಿ ಪಡಿತರ ಪ್ರದೇಶದ ಎಲ್ಲ ಅನಿಲರಹಿತ ಎಎಐ ಹಾಗೂ ಬಿಪಿಎಲ್ ಪಡಿತರ ಚೀಟಿದಾರರು ಈ ಯೋಜನೆಯಡಿ ಸೀಮೆ ಎಣ್ಣೆ ಪಡೆಯಬೇಕೆಂದು ಕೋರಲಾಗಿದೆ.
ಬಹುಮಾನ
ಗುಲ್ಬರ್ಗ: ನೂತನ ವಿದ್ಯಾಲಯ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಮಹಿಳಾ ಪಾಲಿಟೆಕ್ನಿಕ್ ಮಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್, ಮಹಿಳಾ ಟೆಬಲ್ ಟೆನ್ನಿಸ್ ಕ್ರೀಡಾಕೂಟದಲ್ಲಿ ಸೌಮ್ಯಶ್ರಿ.ಪಿ.ಕೆ 2ನೇ ಸೆಮೆಸ್ಟರ್ ಇಸಿಇ ವಿಭಾಗ ದ್ವೀತಿಯ ತೃತೀಯ ಬಹುಮಾನ, ಸುಪ್ರಿಯಾಗೆ ತೃತೀಯ ಬಹುಮಾನ, ಟೆಬಲ್ ಟೆನ್ನಿಸ್ ಪುರುಷ ವಿಭಾಗದಲ್ಲಿ ಸಿದ್ಧಾರ್ಥ ಕೊವಿ ಎಂ.ಇ ವಿಭಾಗ ತೃತೀಯ ಬಹುಮಾನ, ವಿನೋದ.ಕೆ ಇ.ಇ ವಿಭಾಗ ತೃತೀಯ ಬಹುಮಾನ ಪಡೆದಿದ್ದಾರೆಂದು ಪ್ರಾಚಾರ್ಯ ಜೆ.ಎಲ್. ಶುಕ್ಲಾ ತಿಳಿಸಿದ್ದಾರೆ. ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ ಹಾಗೂ ಪರಿಷತ್ ಸದಸ್ಯರು, ಕ್ರೀಡಾಧ್ಯಕ್ಷ ಡಾ. ಗೌತಮ್, ಸಲಹೆಗಾರ ಶಿವಕುಮಾರ ಆರ್.ಓಕಳಿಕರ್, ದೈಹಿಕ ನಿರ್ದೇಶಕ ಕೃಷ್ಣ ರಾವುತ್, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಅಶೋಕ ಸನ್ಮಾನ
ಗುಲ್ಬರ್ಗ: ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆಯಡಿಯಲ್ಲಿ ನಗರದ ಅಪ್ಪಾ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಹೈದ್ರಾಬಾದ್ ಕರ್ನಾಟಕ 371(ಜೆ) ಕಲಂ ಜಾರಿಗೆ ತರಲು ಸತತವಾಗಿ ಪ್ರಯತ್ನಿಸಿದ ಹಲವರಲ್ಲಿ ಭಾಗವಹಿಸಿದ ಜಿಲ್ಲಾ ಸಂಚಾಲಕ ಅಶೋಕ ಕಣ್ಣಿಗೆ ವೇದಿಕೆ ಸನ್ಮಾನಿಸಲಾಯಿತು ಎಂದು ರಮೇಶ ಸರಡಗಿ ತಿಳಿಸಿದ್ದಾರೆ.
ಸಂದೇಶ ಯಾತ್ರೆ
ಗುಲ್ಬರ್ಗ: ಅಖಿಲ ಕರ್ನಾಟಕ ಹೇಳವ ಸಮಾಜ ಸಂಘದಡಿ ಶಂಕರಲಿಂಗ ಮಹಾಸ್ವಾಮಿ, ಬಸವ ಮುಕ್ತಿನಾಥ ಮಠ, ದುಮ್ಮನಸೂರ ಸಾನಿಧ್ಯದಲ್ಲಿ ಬಿದ್ದಾಪುರ ಕಾಲೋನಿಯಲ್ಲಿ ಬಸವಾದಿ ಪ್ರಮಥರ ತತ್ವ ಸಂದೇಶ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷ ಸಿದ್ಧರಾಮ ಟಿ. ಭೈರಾಮಡಗಿ, ಮುಖಂಡರು, ಪದಾಧಿಕಾರಿಗಳು, ಯುವ ಶಕ್ತ ಪದಾಧಿಕಾರಿಗಳು, ಮಹಿಳಾ ಸಂಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರೆಂದು ಕಾರ್ಯದರ್ಶಿ ಸಾಯಬಣ್ಣ ಎಸ್. ಹೆಳವರ ತಿಳಿಸಿದ್ದಾರೆ.
ದಿ. ಬಂಡೆ ಹೆಸರಿಡಿ
ಗುಲ್ಬರ್ಗ: ಬಸವೇಶ್ವರ ಯುವಕ ಮತ್ತು ಭಜನಾ ಮಂಡಳಿ ಖರ್ಗೆ ಪೆಟ್ರೋಲ್ ಪಂಪ್ ಹತ್ತಿರದಲ್ಲಿರುವ ರಿಂಗ್ರಸ್ತೆ ವೃತ್ತಕ್ಕೆ ಹುತಾತ್ಮ ಮಲ್ಲಿಕಾರ್ಜುನ ಬಂಡೆಯೆಂದು ಹೆಸರಿಡಲು ಮಹಾನಗರ ಪಾಲಿಕೆಗೆ ಮನವಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

