ಇಬ್ಬರಿಂದ 1.22 ಲಕ್ಷ ವಸೂಲಿಗೆ ಸಿಇಒ ಆದೇಶ
ಗುಲ್ಬರ್ಗ: ತಾಲೂಕಿನ ಪಾಣೆಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ದೃಢಪಟ್ಟಿರುವುದರಿಂದ ಒಂಬುಡ್ಸಮನ್ ವರದಿ ಆಧಾರದಲ್ಲಿ ಇಲ್ಲಿನ ಸಿಇಒ ಅವರು ಹಗರಣದ ಹಣವನ್ನು ಅದರಲ್ಲಿ ಒಳಗೊಂಡಿರುವ ಸಿಬ್ಬಂದಿ, ಅಧಿಕಾರಿಗಳಿಂದ ವಸೂಲಿಗೆ ಆದೇಶ ಮಾಡಿದ್ದಾರೆ.
2009- 10ನೇ ಸಾಲಿನಲ್ಲಿ ಪಾಣೆಗಾಂವ್ ಪಂಚಾಯಿತಿ ವ್ಯಾಪ್ತಿಯಲ್ಲಿನ ಖಾತ್ರಿ ಯೋಜನೆ ಕಾಮಗಾರಿಗಳಲ್ಲಿ ಅವ್ಯವಹಾರಗಳಾಗಿವೆ ಎಂದು ದೂರುಗಳು ಬಂದಾಗ ಒಂಬುಡ್ಸಮನ್ ತನಿಖೆಯೂ ಆಗಿತ್ತು. ಸಂಬಂಧಪಟ್ಟಂತಹ ಅಧಿಕಾರಿಗಳಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ನಿವೃತ್ತರಾಗಿದ್ದಾರೆ) ಸಿದ್ದಯ್ಯ ಹಿರೇಮಠ ಹಾಗೂ ಪಿಆರ್ಇ ವಿಭಾಗದ ಸಹಾಯಕ ಎಂಜಿನಿಯರ್ ಕಂಠೆಪ್ಪ ಬಾವಗಿ ಇವರಿಂದ ತಲಾ 61,486ರಂತೆ ಒಟ್ಟು 1.22 ಲಕ್ಷ ವಸೂಲಾತಿಗೆ ಸಿಇಒ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.
ಇಬ್ಬರು ಅಧಿಕಾರಿಗಳಿಂದ ವಸೂಲಿಯಾದ ಸದರಿ ಹಗರಣದ ಹಣ ಸರ್ಕಾರಕ್ಕೆ ಜಮಾ ಮಾಡಿ ತಕ್ಷಣ ವರದಿಯನ್ನು ಕಚೇರಿಗೆ ಸಲ್ಲಿಸುವಂತೆಯೂ ಸಿಇಒ ಅವರು ಮಾ.11ರಂದು ಹೊರಡಿಸಿರುವ ಆದೇಶದಲ್ಲಿ ಗುಲ್ಬರ್ಗ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸಂಬಂಧ ಪಟ್ಟಂತಹ ಎಲ್ಲರಿಗೂ ಆದೇಶದ ಪ್ರತಿಗಳನ್ನು ನೀಡಿ ಸೂಚನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

