ರಾಯಚೂರು

812 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

Published On :

ಚಿಂಚೋಳಿ: ಪಟ್ಟಣದ ಚಂದಾಪುರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಸುಲೇಪೇಟ ಪಿಯು ಕಾಲೇಜಿನಲ್ಲಿ ನಡೆಯುತ್ತಿರುವ ಪಿಯು ದ್ವಿತೀಯ ವರ್ಷದ ರಾಜ್ಯಶಾಸ್ತ್ರ ವಿಷಯದ ಪರೀಕ್ಷೆಗೆ ಒಟ್ಟು 812 ವಿದ್ಯಾರ್ಥಿಗಳು ಹಾಜರಾಗಿದ್ದಾರೆಂದು ಪಿಯುಸಿ ಪರೀಕ್ಷಾ ಮುಖ್ಯ ಅಧೀಕ್ಷ ಡಾ. ಶಿವರಾಜ ಕುಲಕರ್ಣಿ ಮತ್ತು ಮಹ್ಮದ್ ಗೌಸೊದ್ದೀನ್ ತಿಳಿಸಿದ್ದಾರೆ.ತಾಲೂಕಿನ ಸುಲೇಪೇಟ ಪರೀಕ್ಷಾ ಕೇಂದ್ರದಲ್ಲಿ ರುದನೂರ ಪಿಯು ಕಾಲೇಜ್, ಚಿಂಚೋಳಿ ಪದ್ಮಾ ಪಿಯು ಕಾಲೇಜ್ ಮತ್ತು ಸುಲೇಪೇಟ ಪಿಯು ಕಾಲೇಜಿನ ಒಟ್ಟು 399 ವಿದ್ಯಾರ್ಥಿಗಳ ಪೈಕಿ 382 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಚಂದಾಪುರ ಪಿಯು ಪರೀಕ್ಷಾ ಕೇಂದ್ರದಲ್ಲಿ ಚಿಂಚೋಳಿ ಸರ್ಕಾರಿ ಕನ್ಯಾ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಸಿ.ಬಿ. ಪಾಟೀಲ್ ಮತ್ತು ಸರ್ಕಾರಿ ಪದವಿ ಪೂರ್ವ ಪಿಯು ಕಾಲೇಜ್ ಸೇರಿದಂತೆ ಒಟ್ಟು 472 ವಿದ್ಯಾರ್ಥಿಗಳ ಪೈಕಿ 430 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 42 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಅಧೀಕ್ಷಕ ಡಾ. ಶಿವರಾಜ ಕುಲ್ಕರ್ಣಿ ಮತ್ತು ಮಹ್ಮದ ಗೌಸೊದ್ದೀನ್ ತಿಳಿಸಿದ್ದಾರೆ.
ಚೈತನ್ಯ ಚಟುವಟಿಕೆ ಕಾರ್ಯಕ್ರಮ
ಗುಲ್ಬರ್ಗ: ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಡಿಯಲ್ಲಿ ಚೈತನ್ಯ ಚಟುವಟಿಕೆ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಸಂಯೋಜಕರಾಗಿ ಆಗಮಿಸಿದ ಪ್ರೊ. ಎಂ.ಎಸ್. ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಎ. ಉಡಚಾಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೇಣುಕಾ ಬಿರಾದಾರ, ಮಹಾಲಕ್ಷ್ಮೀ ಬೆಳಗುಂಪಿ ನಿರೂಪಿಸಿದರು. ಅಪೇಕ್ಷಾ ಕುಲಕರ್ಣಿ, ಪೂಜಾ ಪ್ರಾರ್ಥಿಸಿದರು. ಅಜಯದತ್ತ ಹೊನಗುಂಟಿಕರ್ ವಂದಿಸಿದರು.
ಯಮನೂರ ಜಾತ್ರಾ ಮಹೋತ್ಸವ
ಗುಲ್ಬರ್ಗ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಚಾಂಗದೇವ ಉರುಫ್ ರಾಜಬಾಗ ಸವಾರ ಯಮನೂರ ಜಾತ್ರಾ ಮಹೋತ್ಸವ ಮಾ.19ರಿಂದ 23ರವರೆಗೂ ನಡೆಯಲಿದೆ.  20ರಂದು ಗಂಧಾಭಿಷೇಕ, ಪುಣ್ಯತಿಥಿ ಮುಖ್ಯ ಉರುಸ್ ನಡೆಯಲಿದೆ. ದೇವರಿಗಾಗಿನ ಹರಕೆ, ಹಸ್ತ, ಕುದುರೆ, ಸರಗಿ ಕಾಣಿಕೆ, ಸಕ್ಕರೆ ಮುಂತಾದವಸ್ತುಗಳನ್ನು ಗದ್ದುಗೆ ಮೇಲೆ ಇಡಬೇಕೆಂದು ಸಮಿತಿ ತಿಳಿಸಿದೆ.
ಪದಾಧಿಕಾರಿಗಳ ಅಯ್ಕೆ
ಚಿತ್ತಾಪುರ: ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಸೂರ್ಯಕಾಂತ ಸುಜ್ಯಾತ ರವರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ತಾಲೂಕಿನಲ್ಲಿ ಎಲ್ಲಾ ಸಾಹಿತ್ಯ ಆಸಕ್ತರು, ಚಿಂತಕರ, ಮಾರ್ಗದರ್ಶಕರ ಸಲಹೆ ಮೇರೆಗೆ ತಾಲೂಕಿನಲ್ಲಿ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಲಿಂಗಣ್ಣ ಮಲ್ಕನ್, ಅಧ್ಯಕ್ಷರಾಗಿ ನರಸಪ್ಪ ಚಿನ್ನಕಟ್ಟಿ, ಉಪಾಧ್ಯಕ್ಷರಾಗಿ ಶರಣಪ್ಪ ರಾಮತೀರ್ಥಕರ್, ಪಿ.ಅರ್. ಪಾಂಡು, ಪ್ರಧಾನ ಕಾರ್ಯದರ್ಶಿ ಶಂಕರ ಮಂಗಲಗಿ, ಸಹ ಕಾರ್ಯದರ್ಶಿ ರವಿ ಕುಲಕುಂದಾ, ಕೋಶಾಧ್ಯಕ್ಷ ಅನಂದ ಕಲ್ಲಕ್ಸ್, ಸಂಘಟನಾ ಕಾರ್ಯದರ್ಶಿ ನಾಗರಾಜ ಓಂಕಾರ, ಮಹಿಳಾ ಪ್ರತಿನಿಧಿ ಕವಿತಾ ರಾಠೋಡ, ಜಯಶ್ರೀ, ಗೌರವ ಸಲಹೆಗಾರರಾಗಿ ಶಿವಕಾಂತ ಬೆಣ್ಣೂರಕರ್, ಶಂಕರ ಮೋದಲೆ, ಶ್ರೀಮಂತ ಹೋಸ್ಮನಿ, ವಿಜಯಕುಮಾರ ಲೋಡ್ಡನೋರ, ಶಿವಮೂರ್ತಿ ಶಾಸ್ತ್ರೀ, ಮಲ್ಲಿಕಾರ್ಜುನ ಬೋಮ್ಮನಳ್ಳಿ, ಶರಣಪ್ಪ ಬಜಂತ್ರಿ, ಕಾನೂನು ಸಲಹೆಗಾರರಾಗಿ ಉದಯಕುಮಾರ ಸಾಗರ, ಎಸ್.ಪಿ. ಸಾತನೂರ, ಸಾಹಿತಿಕ ಸಲಹೆಗಾರರಾಗಿ ಡಾ. ವಿಜಯಕುಮಾರ ಸಾಲಿಮನಿ, ಬಿ.ಕೆ. ಪಂಡಿತ, ಪತ್ರಿಕೆ ಸಲಹೆಗಾರರಾಗಿ ರವಿಶಂಕರ ಬುರ್ಲಿ, ಸಂಜಯ ಬೂಳಕರ್, ನಿರ್ದೇಶಕರಾಗಿ ಮಲ್ಲಿಕಾರ್ಜುನ ಮುಡಬೂಳಕರ್, ಶ್ರೀಕಾಂತ ಶಿಂಧೆ, ಮಲ್ಲಿಕಾರ್ಜುನ ಬೆಣ್ಣೂರಕರ್, ಮಲ್ಲಿಕಾರ್ಜುನ ಹಳಿಪೇಠ, ನರಸಿಂಹ ಅಲಮೇಲಕರ್, ರಾಜಕುಮಾರ ಘಾವರಿಯಾ, ರಂಗನಾಥ ದೋರೆ, ಮರಿಯಪ್ಪ ಬಾಯಿನ್, ಗುರುಲಿಂಗಪ್ಪ ದೋಡ್ಮನಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೂರ್ಯಕಾಂತ ಜಗದೆ, ಮಲ್ಲಿಕಾರ್ಜುನ ಮರಗೋಳ, ರಾಜಕುಮಾರ ರಂಜೋಳಕರ್, ಶಿವಯೋಗಿ ರಾವುರ, ಅನಂದ ಶರ್ಮ, ತಿಪ್ಪಣ್ಣ ದೊಡ್ಮನಿ, ಮಹೇಶ ಸಾತನೂರ, ಬಸವರಾಜ ಮುಡಬೂಳ, ಶಂಕರ ರಾಠೋಡ, ಯೇಸುಮಿತ್ರ ಕರದಾಳ, ರಮೇಶ ಕಾಶಿ, ಪರಶುರಾಮ ದೋರೆ, ಶಿವಕುಮಾ ರಾಠೋಡ, ರವಿಶಂಕರ ಬುರ್ಲಿ, ಸಂಜಯ ಬುಳಕರ್‌ರವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.