ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸಲು ಕರೆ
ಸಿಂಧನೂರು: ತಾಲೂಕಿನ ಅರಗಿನಮರ ಕ್ಯಾಂಪ್ನಲ್ಲಿ ಈಚೆಗೆ ಜ್ಞಾನಜ್ಯೋತಿ ಪಬ್ಲಿಕ್ ಶಾಲೆಯ ಎರಡನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಭವಿಷ್ಯ ರೂಪಿಸಿ: ಸಮಾರಂಭದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಪ್ರಮುಖರಾದ ಪಿ.ವೈ. ದಂಡಿನ್ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ಭವಿಷ್ಯ ರೂಪಿಸುವಂತೆ ಕರೆ ನೀಡಿದರು.
ಸಂಸ್ಥೆಯ ಗೌರವಾಧ್ಯಕ್ಷ ಡಿ.ಎಚ್. ಕಂಬಳಿ ಸಮಾರಂಭ ಉದ್ಘಾಟಿಸಿ, ಪಾಲಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆಗ ಮಾತ್ರ ಅವರು ಮತ್ತಷ್ಟು ಸ್ಫೂರ್ತಿಗೊಂಡು ಓದಿನಲ್ಲಿ ಆಸಕ್ತಿ ಹೊಂದುತ್ತಾರೆ ಎಂದರು.
ಶಾಲೆಯ ನೂತನ ಕಟ್ಟಡವನ್ನು ಬಿಎಸ್ಆರ್ ಕಾಂಗ್ರೆಸ್ ಮುಖಂಡ ಕೆ. ಕರಿಯಪ್ಪ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಸಪ್ಪ ಹ್ಯಾಟಿ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಭಾಗವಹಿಸಿದ್ದರು.
ಸಾನ್ನಿಧ್ಯವನ್ನು ಅಂಕಲಿಮಠದ ಶ್ರೀಬಸವರಾಜ ಸ್ವಾಮಿ ವಹಿಸಿದ್ದರು. ಬೀರಪ್ಪ ಪೂಜಾರಿ, ಲಕ್ಷ್ಮಯ್ಯ ಕುರಿ, ಸುರೇಶ, ರಾಮಲಿಂಗಾ ರೆಡ್ಡಿ, ಪಂಪಾಪತಿ ನರೇಗಡದ, ಚಿನ್ನಸಾಬ, ರಾಮ ನಾಯಕ, ಪರಸಪ್ಪ ಬಿಂಗಿ, ನಿಂಗಪ್ಪ, ಅಂಬಣ್ಣ, ಕರಿಯಪ್ಪ ಎಂ, ಹನುಮಪ್ಪ.ಕೆ, ದುರುಗಪ್ಪ ಬಿಂಗಿ, ನಿಂಗಮ್ಮ ಶಿಕ್ಷಕಿ ಸೇರಿ ಅನೇಕರಿದ್ದರು.
ಶಿಬಿರ: ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಶಾಲಾ ಆವರಣದಲ್ಲಿ ಕಸ್ತೂರಿ ಕನ್ನಡಿಗರ ಜನಪರ ವೇದಿಕೆ, ಶ್ರೀಶಕ್ತಿ ರಕ್ತ ಭಂಡಾರ ಹಾಗೂ ಶಾಲೆಯ ಸಂಯುಕ್ತಾಶ್ರಯದಲ್ಲಿ ಉಚಿತ ರಕ್ತದಾನ ಹಾಗೂ ರಕ್ತ ಗುಂಪು ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 204 ಜನರ ರಕ್ತತಪಾಸಣೆ ನಡೆಸಿ ಗುಂಪಿನ ಮಾಹಿತಿ ತಿಳಿಸಲಾಯಿತು. 11ಜನರು ರಕ್ತದಾನ ಮಾಡಿದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

