ಭೇದ - ಭಾವವಿಲ್ಲದೆ ಬಣ್ಣದಲ್ಲಿ ಮಿಂದೆದ್ದರು
ಕ.ಪ್ರ. ವಾರ್ತೆ ಸಿಂಧನೂರು ಮಾ.17
ನಗರದಲ್ಲಿ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಓಕುಳಿ ಆಟಕ್ಕೆ ನಗರದ ಪ್ರಮುಖ ರಸ್ತೆಗಳು ವಿವಿಧ ಬಣ್ಣಗಳಿಂದ ರಂಗುರಂಗಾಗಿ ಕಂಡು ಬಂದವು.
ಸೋಮವಾರ ಬೆಳಗ್ಗೆ ನಗರದ ಪ್ರಮುಖ ರಸ್ತೆಯಲ್ಲಿ ಯುವಕರು, ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬ ಆಚರಿಸಿದರು. ಗಲ್ಲಿ ಗಲ್ಲಿಯಲ್ಲಿ ಯಾವುದೇ ಭೇದ- ಭಾವವಿಲ್ಲದೆ ಯವಕರು ಸೇರಿದಂತೆ ಮಹಿಳೆಯರು, ಪುರುಷರಕ್ಕಿಂತ ತಾವೇನು ಕಮ್ಮಿ ಇಲ್ಲವೆಂಬಂತೆ ಪರಸ್ಪರ ಓಕುಳಿ ಎರಚಿ ಹೋಳಿ ಹಬ್ಬವನ್ನು ಅಚರಿಸಿದರು. ಇನ್ನು ಚಿಣ್ಣರು ವಿವಿಧ ರೀತಿಯ ಓಕುಳಿ ಆಡಿದರು. ಮಾರವಾಡಿಗಳು ಓಕುಳಿಯೊಂದಿಗೆ ವಿವಿಧ ಬಗೆಯ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದು ನೋಡುಗರನ್ನು ಮನರಂಜಿಸಿತು.
ಚಿಣ್ಣರಿಂದ ವೃದ್ಧರವರೆಗೆ: ನಗರದ ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಹಳೆ ಬಜಾರ್, ಕಿತ್ತೂರು ಚನ್ನಮ್ಮ ವೃತ್ತ, ಆದರ್ಶ ಕಾಲೋನಿ, ಖದಿರೀಯಾ ಕಾಲೋನಿ, ಮರವಾಡಿಗಲ್ಲಿ ಸೇರಿದಂತೆ ಇನ್ನಿತರಡೆಗಳಲ್ಲಿ ಚಿಣ್ಣರಿಂದ ಹಿಡಿದು ವಯೋವೃದ್ಧರವರೆಗೂ ಹೋಳಿ ಆಡಿದರು. ಚುನಾವಣಾ ನೀತಿ ಸಂಹಿತೆ ಹಾಗೂ ಹೋಳಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿತ್ತು.
ನಗರದ ಸರ್ವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಯೋಗ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಯೋಗ ತರಬೇತಿಯಲ್ಲಿ ಶಿಬಿರಾರ್ಥಿಗಳು ಪರಸ್ಪರ ಬಣ್ಣ ಹಾಕಿ ಸಂತಸ ಪಟ್ಟರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಯುವ ಭಾರತ ಪ್ರಭಾರಿ ಎಂ.ಭಾಸ್ಕರ್, ಡಾ. ಎಸ್.ವಿ.ಪಾಟೀಲ್, ಅಮರೇಶಪ್ಪ ಮೈಲಾರ್, ವೀರೇಂದ್ರ ಪ್ರಸಾದ, ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ, ನಗರಸಭಾ ಮಾಜಿ ಸದಸ್ಯೆ ಸರಸ್ವತಿ ಪಾಟೀಲ್, ಮೂತರ್, ಶ್ರೀಶೈಲ ಪತ್ತಾರ, ಶಂಕರಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

