ರಾಯಚೂರು

ನಂದೀಶನ ಕಾಲಡಿ ಬಿದ್ದು ಭಕ್ತಿ ಮೆರೆದರು

Published On :

ಮುದಗಲ್: ಜೀವಂತ ನಂದೀಶ(ಎತ್ತು)ನ ಮೇಲೆ ಮೂರು ಅಡಿ ಎತ್ತರದ ಕಳಸವನ್ನು ಹೊತ್ತು ತರುವ ಮೂಲಕ ಪಟ್ಟಣದ ಜನರ ಭಕ್ತಿಯ ಪರಾಕಾಷ್ಠೆ ಹೆಚ್ಚಿಸಿದ ಪ್ರಸಂಗ ಜರುಗಿತು.
  ಐತಿಹಾಸಿಕ ಪ್ರಸಿದ್ಧ ರಾಮಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ನಂದೀಶ ಕಳಸ ಹೊತ್ತು ಬಸವೇಶ್ವರ ದೇವಸ್ಥಾನದಿಂದ ರಾಮಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ಕೈ ಮುಗಿಯದ ಜನರಿಲ್ಲ.
ನಂದೀಶನ ಕಾಲಡಿಗೆ ಬಿದ್ದ ಭಕ್ತರು: ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ರಾಜ ವೈಭವದಲ್ಲಿ ಹೊರಟ ನಂದೀಶನ ಕಾಲ ಕೆಳಗೆ ಬೀಳದವರಿಲ್ಲ. ಚಿಕ್ಕ ಮಕ್ಕಳು, ಮಹಿಳೆಯರು, ಪುರುಷರು ಸಹಿತ ನಂದೀಶನ ಕಾಲ ಕೆಳಗೆ ಬಿದ್ದರೆ ಯಾರೊಬ್ಬರನ್ನೂ ತುಳಿಯದೆ ದಾಟಿಕೊಂಡು ಹೋಗುವ ಮೂಲಕ ಜನರಲ್ಲಿ ಭಕ್ತಿ ಭಾವನೆಗಳನ್ನು ಹೆಚ್ಚಿಸಿತು.     
ಈ ನಂದೀಶ ಕಳೆದ ನಾಲ್ಕು ವರ್ಷಗಳಿಂದ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾನೆ. ಕುಂಭ, ಕಳಸ, ದೇವರ ಭಾವಚಿತ್ರಗಳನ್ನು ಹೊತ್ತು ಮೇರವಣಿಗೆ ಮಾಡಲಾಗುತ್ತದೆ ಎಂದು ನಂದೀಶನ ಸೇವಕರಾದ ಶೇಖರ ಯಾವಗಲ್, ಬಸವರಾಜ ಬಂಡಿ ಹೇಳಿದರು.
ಮಂತ್ರಮುಗ್ಧರನ್ನಾಗಿಸಿದ ನಂದಿ ಸೇವಕ: ಮೆರವಣಿಗೆ ಸಮಯದಲ್ಲಿ ಸೇವಕ ಶೇಖರ್ ನಂದೀಶನ ಕಾಲ ಕೆಳಗೆ ತೂರುವುದು, ಕಾಲನ್ನು ತಲೆಯ ಮೇಲೆ, ಹೊಟ್ಟೆಯ ಮೇಲೆ, ಕೈಬೆರಳ ಮೇಲೆ ನಿಲ್ಲಿಸಿಕೊಳ್ಳುವ ದೃಶ್ಯಗಳು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. ಇಂತಹ ಕಾರ್ಯಕ್ರಮಗಳು ಮುದಗಲ್ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದರಿಂದ ಜನ ಮನ ಸೊರೆಗೊಳ್ಳುವಂತೆ ಮಾಡಿತು.
  ಮೆರವಣಿಗೆಯಲ್ಲಿ ಪಪಂ ಮಾಜಿ ಅಧ್ಯಕ್ಷ ಅಶೋಕಗೌಡ, ಸುರೇಶಗೌಡ, ಮಹಾಂತೇಶ ಪಾಟೀಲ್, ಯಮನಪ್ಪ, ಚನ್ನಬಸನಗೌಡ, ಅಮರೇಗೌಡ ಮಟ್ಟೂರು, ಶಿವಪ್ಪ ಸುಂಕದ್, ವಿರುಪಾಕ್ಷಯ್ಯ, ಅಮರಯ್ಯ, ಮಹೇಶ ವಸ್ತ್ರದ್, ಶಂಕ್ರಗೌಡ, ಸುರೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.