ರಾಯಚೂರು

ಪುನರ್ವಸತಿ ಕ್ಯಾಂಪ್‌ಗಳಲ್ಲಿ ಡೆಂಘೀ ಭೀತಿ: ಸುಂಕದ್

Published On :

ಕ.ಪ್ರ. ವಾರ್ತೆ  ಸಿಂಧನೂರು  ಮಾ.19
ತಾಲೂಕಿನ ಬಾದರ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುನರ್ವಸತಿ ಕ್ಯಾಂಪ್‌ನಲ್ಲಿ ಕಳೆದ 25 ದಿನಗಳಿಂದ ಕಾಣಿಸಿಕೊಂಡಿರುವ ಡೆಂಘೀ ಜ್ವರದಿಂದ ಅಲ್ಲಿನ ನಿವಾಸಿಗಳು ಆತಂಕಗೊಂಡಿದ್ದಾರೆ.
  ಗ್ರಾಮ ಪಂಚಾಯಿತಿ ಸದಸ್ಯ ನಾರದ ಬೈರಾಗಿ ಅವರು ಹೇಳುವಂತೆ ಇಲ್ಲಿಯವರೆಗೆ ಸುಮಾರು 150ಕ್ಕೂ ಹೆಚ್ಚು ಜನರು ಶಂಕಿತ ಡೆಂಘೀ ಜ್ವರದಿಂದ ಬಳ್ಳಾರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನೂ 50 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ಇಲಾಖೆಯ ಮಾಹಿತಿಗಳ ಪ್ರಕಾರ- 18 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, 34 ಜನ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪುನರ್ವಸತಿ ಕ್ಯಾಂಪ್ 2ರ ವೈದ್ಯಾಧಿಕಾರಿ ಎಸ್.ಎಸ್. ಸುಂಕದ್ ಹೇಳಿದರು.
ಮನೆ ಮನೆಗೆ ತೆರಳಿ ಜಾಗೃತಿ: ಪ್ರತಿಯೊಂದು ಕುಟುಂಬದಲ್ಲಿ ಜ್ವರ, ತಲೆನೋವು ಕಾಣಿಸಿಕೊಂಡಾಕ್ಷಣ ಬಳ್ಳಾರಿಗೆ ತೆರಳಿ ಚಿಕಿತ್ಸೆ ಪಡೆಯುವುದು ಸಾಮಾನ್ಯವಾಗಿದೆ. ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಮಲೇರಿಯಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಣೆ ಮಾಡಿ ಹೋಗಿದ್ದಾರಾದರೂ ಡೆಂಘೀ ಜ್ವರ ನಿಯಂತ್ರಣ ಇನ್ನೂ ಸಾಧ್ಯವಾಗಿಲ್ಲ. ಕಳೆದ ಒಂದು ವಾರದಿಂದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತಿತರರು ಪ್ರತಿನಿತ್ಯ ಕ್ಯಾಂಪ್‌ನಲ್ಲಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.
  ನೀರಿನ ತೊಟ್ಟಿಗಳು, ಬ್ಯಾರೆಲ್, ಏರ್ ಕೂಲರ್‌ಗಳನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಿ ಸ್ವಚ್ಛಗೊಳಿಸಿ ನೀರು ತುಂಬಬೇಕು. ಪಾತ್ರೆಗಳನ್ನು ಮುಚ್ಚಿಡಬೇಕು. ನೀರನ್ನು ಸರಿಯಾಗಿ ಸೋಸಿ ಬಳಸಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ತೆಂಗಿನ ಚಿಪ್ಪು, ಒಡೆದ ಬಾಟಲಿಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ತಿಳಿವಳಿಕೆ ಮೂಡಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರ ಇಲ್ಲ: ಡೆಂಘೀ ಜ್ವರವನ್ನು ಪರೀಕ್ಷಿಸುವ ಪ್ರಯೋಗಾಲಯ ಸಿಂಧನೂರಿನಲ್ಲಿ ಇಲ್ಲದೇ ಇರುವುದರಿಂದ ಬಳ್ಳಾರಿಗೆ ಹೋಗಿಯೇ ಚಿಕಿತ್ಸೆ ಪಡೆಯಬೇಕಾಗಿದೆ ಎಂದು ಕ್ಯಾಂಪ್‌ನ ಯುವಕ ಸಮೇನ್ ಮಂಡಲ್ ಬಸರದಿಂದ ಹೇಳುತ್ತಾನೆ.
  ಕೆರೆಯ ನೀರನ್ನು ಕಳೆದ 6 ವರ್ಷಗಳಿಂದ ಸ್ವಚ್ಛಗೊಳಿಸದೇ ಇರುವುದೇ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣವಾಗಿದೆ ಎನ್ನುವುದು ಅಲ್ಲಿಯ ಯುವಕರ ಆರೋಪ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಅವರು ಹೇಳುವಂತೆ “¬ÞÁÚß ಅಶುದ್ಧವಾಗಿದ್ದರೆ ಕಾಲರಾ ಬರುತ್ತದೆ ಹೊರತು, ಡೆಂಐ್ಠ ಜ್ವರ ಬರುವುದಿಲ್ಲ. ಈಡಿಸ್ ಈಜಿಪ್ಟೈ ಸೊಳ್ಳೆಯೇ ಈ ರೋಗಕ್ಕೆ ಕಾರಣವಾಗಿದೆ. ತ್ಯಾಜ್ಯ ವಸ್ತುಗಳಲ್ಲಿ ಇರುವ ತಿಳಿನೀರಿನಲ್ಲಿ ಇದರ ರೋಗಾಣುಗಳು ಹುಟ್ಟುತ್ತವೆ. ಅವೇ ದೊಡ್ಡದಾಗಿ ರೋಗಕ್ಕೆ OÛÁÚyÈÛVÚß}Ú¡Èæ’ ಎಂದು ವಿವರಿಸಿದರು.
  ರೋಗಕ್ಕೆ ಕಾರಣ ಏನೇ ಇರಲಿ ಸಮರೋಪಾದಿಯಲ್ಲಿ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡೆಂಘೀ ಜ್ವರವನ್ನು ಶೀಘ್ರ ನಿಯಂತ್ರಣಕ್ಕೆ ತರಬೇಕೆನ್ನುವುದು ಪುನರ್ವಸತಿ ಕ್ಯಾಂಪ್‌ಗಳ ಜನರ ಒತ್ತಾಸೆಯಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.