ದೇವಸ್ಥಾನಗಳು ಭಾವನಾತ್ಮಕ ಕೇಂದ್ರಗಳು
ಕನ್ನಡಪ್ರಭ ವಾರ್ತೆ ಮುದಗಲ್ ಮಾ.19
ದೇವಸ್ಥಾನಗಳು, ಮಠಗಳು, ಐತಿಹಾಸಿಕ ಸ್ಥಳಗಳು ಮನುಷ್ಯನ ಭಾವನಾತ್ಮಕ ಕೇಂದ್ರಗಳಾಗಿವೆ ಎಂದು ಕೊಪ್ಪಳದ ಜಗದ್ಗರು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದ ನೂತನ ಕಳಸಾರೋಹಣ, ನಂದಿ ಮೂರ್ತಿ ಪ್ರತಿಷ್ಠಾಪನೆ, ಶ್ರೀಶೈಲ ಪಾದಯಾತ್ರಿಗಳ ದಾಸೋಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಬಿಂಬಿಸುವ ಶಕ್ತಿ ಕೇಂದ್ರಗಲೇ ಮಠ- ಮಂದಿರಗಳು. ಇದರಿಂದಾಗಿಯೇ ದೇಶ ಶ್ರೀಮಂತವಾಗಿದೆ. ಹಣ, ಬಂಗಾರ, ಭೂಮಿ ಇದ್ದವರಷ್ಟೇ ಶ್ರೀಮಂತರಲ್ಲ. ಶ್ರೀಮಂತ ಮನಸ್ಸು ಇದ್ದವರೂ ಶ್ರೀಮಂತರೇ ಆಗಿರುತ್ತಾರೆ. ಕೇವಲ ಮನೆಗಳು, ಮಂದಿರಗಳು ವಾಸ್ತವದಲ್ಲಿದ್ದರೆ ಸಾಲದು, ಮನುಷ್ಯನು ವಾಸ್ತವನಾಗಿರಬೇಕು. ಅಂದಾಗಲೇ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದರು.
ಪಾದಯಾತ್ರಿಗಳಿಗೆ ಅನ್ನದಾಸೋಹ- ಶ್ಲಾಘನೆ: ಸೇವೆಯಲ್ಲಿ ದೊಡ್ಡದು ದಾಸೋಹ. ಈ ದಾಸೋಹ ಎನ್ನುವ ಪದ ಅಪ್ಪಟ ಕನ್ನಡದ್ದು. ಇದನ್ನು ಯಾವ ಭಾಷೆಗಳೂ ತರ್ಜುಮೆ ಮಾಡಲು ಸಾಧ್ಯವಿಲ್ಲ. ಶರಣರು ವಚನದಲ್ಲಿ ನೀಡಿದ ಶ್ರೀಮಂತ ಪದ ಇದಾಗಿದೆ. ಇಂತಹ ಕಾರ್ಯವನ್ನು ಮುದಗಲ್ ಭಕ್ತರು ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನದಾಸೋಹ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದು ಎಂದರು.
ಮಹಾಂತಸ್ವಾಮೀಜಿ ಸಾಲಿಮಠ ಮಾತನಾಡಿ ನಮ್ಮ ನಾಡು, ಸಂಸ್ಕೃತಿ, ಪರಂಪರೆಗೆ ಇತಿಹಾಸವಿದೆ. ನಮ್ಮ ಭಾರತ ದೇಶವನ್ನು ಭೂಮಿ ತಾಯಿಗೆ ಹೋಲಿಕೆ ಮಾಡುವ ಮೂಲಕ ತಾಯಿ ಸ್ಥಾನವನ್ನು ನೀಡಿದ್ದೇವೆ. ಪ್ರಪಂಚದ ಯಾವ ದೇಶಗಳೂ ಭೂಮಿಯನ್ನು ತಾಯಿಗೆ ಹೋಲಿಕೆ ಮಾಡಿಲ್ಲ ಎಂದು ತಿಳಿಸಿದರು.
ದೇವಸ್ಥಾನಗಳು ಶ್ರದ್ಧಾ ಕೇಂದ್ರಗಳಾಗಿ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ ಮೂಲಕ ಜೀವನದ ಮೌಲ್ಯಗಳನ್ನು ಹೆಚ್ಚಿಸುತ್ತವೆ. ಆದ್ದರಿಂದ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಇಂತಹ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ತೊಡಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾಂತಲಿಂಗ ಶಿವಾಚಾರ್ಯರು ನಂದವಾಡಗಿ, ಗುರುಬಸವ ಸ್ವಾಮೀಜಿ ಸಂತೆಕೆಲ್ಲೂರು, ಬಸವರಾಜ ಸ್ವಾಮೀಜಿ ಅಂಕಲಿಮಠ, ಶರಣಯ್ಯ ತಾತನವರು ಹುನಕುಂಟಿ ಉಪಸ್ಥಿತರಿದ್ದರು. ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಗ್ರಾನೈಟ್ ಉದ್ಯಮಿ ಶರಣಗೌಡ ಬಯ್ಯಾಪುರ, ಸಿದ್ದರಾಮಪ್ಪ ಸಾಹುಕಾರ, ಚಂದ್ರಶೇಖರ ಪಾಟೀಲ್ ಯರದಿಹಾಳ, ಅಶೋಕಗೌಡ ಪಾಟೀಲ್, ಅಮರೇಗೌಡ ಮಟ್ಟೂರು, ಸುರೇಂದ್ರಗೌಡ ಪಾಟೀಲ್, ಶಿವಪ್ಪ ಸುಂಕದ್ ಮುಂತಾದವರು ಭಾಗವಹಿಸಿದ್ದರು. ನಿರೂಪಣೆ ಮಹಾಂತೇಶ ಪಾಟೀಲ್, ಪಂಪಯ್ಯ ಮಠ ವಂದನಾರ್ಪಣೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

