ರಾಯಚೂರು

ಇಂದು ಶರಣಬಸವೇಶ್ವರ ಜಾತ್ರೆ

Published On :

ಕ.ಪ್ರ. ವಾರ್ತೆ   ಗುಲ್ಬರ್ಗ   ಮಾ.20
ಇಲ್ಲಿನ ಐತಿಹಾಸಿಕ ಶ್ರೀ ಶರಣಬಸವೇಶ್ವರರ 192ನೇ ಪುಣ್ಯತಿಥಿ ಮಹಾದಾಸೋಹ ಜಾತ್ರಾ ಮಹೋತ್ಸವ ಮಾ.21ರಂದು ನಗರದಲ್ಲಿರುವ ದಾಸೋಹ ಮಹಾಮನೆಯ ವಿಶಾಲ ಅಂಗಳದಲ್ಲಿ ವೈಭವದಿಂದ ನಡೆಯಲಿದೆ.
192ನೇ ಪುಣ್ಯತಿಥಿ ಅಂಗವಾಗಿ ನಡೆಯುವ ರಥೋತ್ಸವ ಸಂದರ್ಭದಲ್ಲಿ ಸಂಸ್ಥೆಯ ಈಗಿನ ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅಪ್ಪ ಅವರು ಶರಣರು 200 ವರ್ಷಗಳ ಹಿಂದೆ ಬಳಸಿರುವಂತಹ ಪ್ರಸಾದ ಬಟ್ಟಲನ್ನು ಭಕ್ತರಿಗೆ ಸಾರ್ವಜನಿಕವಾಗಿ ದರ್ಶನ ಮಾಡಿಸುತ್ತಾರೆ. ಈ ಬಟ್ಟಲು ದರ್ಶನದ ನಂತರವೇ ರಥೋತ್ಸವ ಶುರುವಾಗುತ್ತದೆ. ಶರಣಬಸವೇಶ್ವರರ ದಾಸೋಹದ ಈ ನೆಲದಲ್ಲಿ ಭಕ್ತರೆಲ್ಲರೂ ಇಡೀ ದಿನ ಉಪವಾಸವಿರುತ್ತಾರೆ. ರಥೋತ್ಸವದ ನಂತರವಷ್ಟೇ ಭಕ್ತರು ಪ್ರಸಾದ ಸೇವನೆ ಮಾಡುವುದು ಪರಂಪರೆ.
ದಾಸೋಹ ಮನೆಯಂಗಳದಲ್ಲಿ ಗುರುವಾರ ಉಚ್ಚಾಯಿ ಕಾರ್ಯಕ್ರಮ ನಡೆಯಿತು. ಉಚ್ಚಾಯಿಯಲ್ಲಿಯೂ ಸಾವಿರಾರು ಭಕ್ತರು ಭಾಗವಹಿಸಿ ಶರಣರ ದರ್ಶನ ಪಡೆದು ಪುನೀತರಾದರು.
ಮಾ.21ರಂದು ಸಂಜೆ 6ಕ್ಕೆ ಡಾ. ಶರಣಬಸವಪ್ಪ ಅಪ್ಪ ಅವರು ಭಕ್ತಾದಿಗಳಿಗೆ ಪರುಷ ಬಟ್ಟಲು ತೋರಿಸುವುದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ಜಾತ್ರಾ ಮೈದಾನದಲ್ಲಿ ಸಾವಿರಾರು ಮಳಿಗೆಗಳು, ಮನೋರಂಜನೆ ಸಾಮಗ್ರಿಗಳು ಈಗಾಗಲೇ ಕ್ಯಾಂಪ್ ಹಾಕಿವೆ. ಈ ಬಾಗದಲ್ಲಿ ಶರಣಬಸವೇಶ್ವರರ ಜಾತ್ರೆ ಬಹುದೊಡ್ಡ ಪ್ರಮಾಣದ ಜಾತ್ರಾ ಸ್ವರೂಪ ಪಡೆದುಕೊಂಡು ಜನಮನದಲ್ಲಿ ಪರಂಪರೆ, ಉತ್ಸವ ರೂಪದಲ್ಲಿ ಸ್ಥಾಪಿತವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.