ರಾಯಚೂರು

ಏ.25ರಿಂದ ಪೇಠಶಿರೂರ ಶ್ರೀ ಪಟ್ಟಾಧಿಕಾರ ಮಹೋತ್ಸವ

Published On :

ಶಹಾಬಾದ್: ಪೇಠಶಿರೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ವಿರಕ್ತ ಮಠ ಪಂಚಾಕ್ಷರೇಶ್ವರರ ಪುಣ್ಯ ಸ್ಮರಣೋತ್ಸವ, ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಪಟ್ಟಾಧಿಕಾರದ 5ನೇ ವರ್ಷದ ಕಾರ್ಯಕ್ರಮಗಳು ಮಾ.25ರಿಂದ ಏ.9ರ ವರೆಗೆ ನಡೆಯಲಿದೆ ಎಂದು ಮಠದ ಪ್ರಕಟನೆ ತಿಳಿಸಿದೆ. ಮಾ.25ರಂದು ಸಂಜೆ 8ಕ್ಕೆ ನಾಲತವಾಡ ವೀರೇಶ್ವರ ಶರಣರ ಪುರಾಣ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಏ.8ರಂದು ಪುರಾಣ ಮಂಗಲ, ಕಾಯಕಯೋಗಿ ಸಿದ್ಧಲಿಂಗ ಸ್ವಾಮೀಜಿಗಳ 'ಶಾಂತಮೂರ್ತಿ ಸಂಭ್ರಮ' ಕಿರು ಪುಸ್ತಕ ಬಿಡುಗಡೆ ನಡೆಯಲಿದೆ. ಏ.9ರಂದು ಬೆ.6ಕ್ಕೆ ಸಿದ್ದಲಿಂಗೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭೀಷೇಕ, ದೀಕ್ಷಾ ಕಾರ್ಯಕ್ರಮ ವಿವಿಧ ಮಠಾಧೀಶರಿಂದ ಅಷ್ಟಾವರಣ, ಷಟಸ್ಥಳಗಳ ಭೋಧನೆ. 11ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಕೃಷ್ಣ ರಥದಲ್ಲಿ ಪೀಠಾಧಿಪತಿಗಳ ಭವ್ಯ ಮರೆವಣಿಗೆ. ಸಾಯಂಕಾಲ 7.30ಕ್ಕೆ ಶ್ರೀಮಠದ ಅವರಣದಲ್ಲಿ ಕಾಯಕಯೋಗಿ ಬಸವೇಶ್ವರ ವೇದಿಕೆಯಲ್ಲಿ ಧರ್ಮಸಭೆ, ಭಕ್ತರಿಂದ ಬೆಳ್ಳಿಯ ಪಂಚಕೀರಿಟ ಧಾರಣೆ, ತುಲಾಭಾರ ನಡೆಯಲಿದೆ.
'ಛಲವಿದ್ದರೆ ಸಾಧನೆ ಸಾಧ್ಯ'
ಚಿತ್ತಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮತ್ತು ಛಲ ಹೊಂದಿ ವಿದ್ಯಾಭ್ಯಾಸವನ್ನು ಮಾಡಿದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಸಹಶಿಕ್ಷಕ ರವೀಂದ್ರ ಅಡಿವೇರ ಹೇಳಿದರು. ಪಟ್ಟಣದ ರಿಕ್ರಿಯೇಷನ್ ಹಿ.ಪ್ರಾ. ಶಾಲೆಯಲ್ಲಿ 7ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳು ಶ್ರದ್ಧೆಯಿಂದ ಅಭ್ಯಾಸ ಮಾಡಿ ಉತ್ತಮ ಅಂಕಗಳನ್ನು ಪಡೆದು ಶಾಲೆಗೆ, ಹಾಗೂ ಶಿಕ್ಷಕರಿಗೆ ಮತ್ತು ತಂದೆ- ತಾಯಿ ಹೆಸರಿಗೆ ಕೀರ್ತಿ ತರಬೇಕೆಂದು ಹೇಳಿದರು. ಸಹ ಶಿಕ್ಷಕ ದೇವಪ್ಪ ನಂದೂರಕರ್, ವಿದ್ಯಾರಾಣಿ, ಬೋಜು ರಾಠೋಡ ಮಾತನಾಡಿದರು. ಸಹ ಶಿಕ್ಷಕಿ ಬೇಬಿ ಅಣವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಗು ನಾಗಪ್ಪ ಜಮಾದಾರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ರಾವುರ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.