ಪರತಂತ್ರದ ಬದುಕಿನಿಂದ ವಿಮುಕ್ತರಾಗಿರಿ: ಶ್ರೀಗಳು
ಕ.ಪ್ರ. ವಾರ್ತೆ ಮುದಗಲ್ ಮಾ.20
ಸ್ವಾತಂತ್ರ್ಯ ಪಡೆದು 6 ದಶಕ ಕಳೆದರೂ ಮನುಕುಲವೆಲ್ಲಾ ಪರತಂತ್ರದ ಬದುಕನ್ನು ಸಾಗಿಸುತ್ತಿದ್ದು ಪರತಂತ್ರದ ಬದುಕಿನಿಂದ ವಿಮುಕ್ತರಾಗಿರಿ ಎಂದು ಇಳಕಲ್ ಮರಿಮಹಾಂತ ಸ್ವಾಮೀಜಿ ಹೇಳಿದರು.
ಸ್ಥಳೀಯ ವಿಜಯ ಮಹಾಂತೇಶ್ವರ ಮಠದಲ್ಲಿ ನಡೆದ ಬಸವ ಧರ್ಮ ಪ್ರವಚನದಲ್ಲಿ ಮಾತನಾಡಿ, ಯುವಕರೆಲ್ಲ ದುಶ್ಚಟಗಳಿಗೆ ದುಂಬಾಲು ಬಿದ್ದಿದ್ದು ಸಮಾಜವೆಲ್ಲಾ ಕೊಂಪೆಗುತ್ತಿದೆ ಎಂದು ವಿಷಾದಿಸಿದರು.
ಸ್ವಾವಲಂಬಿ ಜೀವನ ಸಾಗಿಸಲು ಮೂಢನಂಬಿಕೆಗಳನ್ನು ದೂರ ಇಟ್ಟು, ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ಅಂದಾಗಲೇ ಪರತಂತ್ರದ ಜೀವನದಿಂದ ವಿಮುಕ್ತರಾಗಲು ಸಾಧ್ಯ ಎಂದರು.
ಮನುಕುಲವೆಲ್ಲಾ ಸ್ವಚ್ಛವಾಗಬೇಕಾದರೆ ಅಧ್ಯಾತ್ಮಿಕ ಚಿಂತನೆ ಅಗತ್ಯ. ವಚನ ಸಾಹಿತ್ಯದ ಮೂಲಕ ನಾಡಿಗೆ ಬಸವಣ್ಣನವರು ವಿಶೇಷವಾದ ಕಾಯಕವೇ ಕೈಲಾಸ ಎನ್ನುವ ನುಡಿಯನ್ನು ನೀಡಿದ್ದಾರೆಂದು ಬಣ್ಣಿಸಿದರು. ನೆಮ್ಮದಿ ಜೀವನ ಸಾಗಿಸಬೇಕಾದರೆ ಶರಣರ, ಸಂತರ ಹಾಗೂ ದಾರ್ಶನಿಕರ ಪ್ರವಚನ ಹಾಗೂ ವಚನ ಸಾಹಿತ್ಯದ ಚಿಂತನ ಗೋಷ್ಠಿಗಳು ಅವಶ್ಯ ಎಂದು ಅಭಿಪ್ರಾಯಪಟ್ಟರು.
ಇಳಕಲ್ ಚಿತ್ತರಗಿ ಮಠದ ಪೀಠಾಧಿಪತಿ ಡಾ. ವಿಜಯ ಮಹಾಂತ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದರು. ಗುಳೇದಗುಡ್ಡದ ಶ್ರೀಗಳು ಸೇರಿದಂತೆ ವೀರಶೈವ ಸಮಾಜದ ನೂರಾರು ಶರಣರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

