ಮನದ ಭಾವನೆಗಳಿಗೆ ಸಾಹಿತ್ಯದ ರೂಪ ನೀಡಿ
ಸಿಂಧನೂರು: ಕವಿ, ಕವಯತ್ರಿ ಹಾಗೂ ಬರಹಗಾರರು ತಮ್ಮ ನೆಚ್ಚಿನ ಕವಿಯ ಕವಿತೆಯನ್ನು ವಾಚನ ಮಾಡುವಾಗ ಕವಿಯ ಮೂಲ ಉದ್ದೇಶ ತಿಳಿದುಕೊಳ್ಳಬೇಕು. ಆ ಕವಿತೆ ಮೆಚ್ಚಿಗೆಯಾಗಲು ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ತಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಒಂದೆಡೆ ಬರೆದಿಟ್ಟು ಸಮಯ ದೊರೆತಾಗಲೆಲ್ಲ ಬರೆದಿಟ್ಟಿರುವ ವಿಚಾರ ಭಾವನೆಗಳನ್ನು ಪುನಃ ಪುನಃ ಅವಲೋಕನ ಮಾಡಿಕೊಳ್ಳಬೇಕು. ಅವುಗಳಿಗೆ ಸಾಹಿತ್ಯದ ರೂಪ ನೀಡಿ ಕವನ, ಕಥೆ, ಲೇಖನ ಬರೆಯುವುದಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಸ್. ದೇವೇಂದ್ರಗೌಡ ಸಲಹೆ ನೀಡಿದರು.
ಕವನ ವಾಚನ: ಅವರು ನಗರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದಿ. ರಾಜಾಸಾಬ ಸಾಹುಕಾರ ಮುಳ್ಳೂರು ಸ್ಮಾರಕ ದತ್ತಿಯಲ್ಲಿ ನನ್ನ ನೆಚ್ಚಿನ ಕವಿ-ಕವಿತೆ, ಕವನ ವಾಚನದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಬಿ.ಬಿ. ಅಬ್ಬಾರ್ ದತ್ತಿ ಕಾರ್ಯಕ್ರಮವನ್ನು ದಿ. ರಾಜಾಸಾಬ ಮುಳ್ಳೂರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿದರು. ಜಿಐಓ ತಾಲೂಕು ಘಟಕದ ಅಧ್ಯಕ್ಷೆ ಪವರ್ನ ಜಾ, ಸಿಂಧೂರ ವಾಣಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಲಿಂಗಮ್ಮ ಬಿ. ಅಮರೇಶ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಇಂದುಮತಿ ಚೌಹಾಣ, ಆದರ್ಶ ಕಾಲೋನಿಯ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಶ್ಯಾಮಲಾ, ಶಿಕ್ಷಕಿ ರಾಧಾ ಕೌದಿ ಇದ್ದರು. ಮಹಾದೇವಿ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

