ರಾಯಚೂರು

13 ಅಭ್ಯರ್ಥಿಗಳಿಂದ 22 ಉಮೇದುವಾರಿಕೆ

Published On :

ರಾಯಚೂರು: ರಾಯಚೂರು ಲೋಕಸಭೆ ಎಸ್ಟಿ ಮೀಸಲು ಕ್ಷೇತ್ರಕ್ಕೆ ಏ.17 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕಡೆಯ ದಿನ ಸೇರಿದಂತೆ ಒಟ್ಟು 13 ಜನ ಅಭ್ಯರ್ಥಿಗಳು 22 ನಾಮಪತ್ರ ಸಲ್ಲಿಸಿದ್ದಾರೆಂದು ಜಿಲ್ಲಾಡಳಿತ ತಿಳಿಸಿದೆ.
ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಬುಧವಾರ 9 ಜನ ಅಭ್ಯರ್ಥಿಗಳಿಂದ 12 ನಾಮಪತ್ರ ಸಲ್ಲಿಕೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ, ಜೆಡಿಎಸ್ ಅಭ್ಯರ್ಥಿ ಡಿ.ಬಿ.ನಾಯಕ ನಾಮಪತ್ರ ಸಲ್ಲಿಸಿದರು. ಅದೇ ರೀತಿ ಇದುವರೆಗೆ ಒಟ್ಟು ಕಣದಲ್ಲಿ ಸ್ಪರ್ಧೆ ಬಯಸಿ 13 ಜನ ಅಭ್ಯರ್ಥಿಗಳು ಒಟ್ಟು 22 ನಾಮಪತ್ರ ಸಲ್ಲಿಸಿದಂತಾಗಿದೆ. ಕಡೆಯ ದಿನದವರೆಗೆ ನಾಮಪತ್ರ ಸಲ್ಲಿಸಿದವರಲ್ಲಿ ಕಾಂಗ್ರೆಸ್‌ನ ಬಿ.ವಿ. ನಾಯಕ, ಬಿಜೆಪಿಯ ಶಿವನಗೌಡ ನಾಯಕ, ಜೆಡಿಎಸ್‌ನ ಡಿ.ಬಿ. ನಾಯಕ, ಬಿಎಸ್ಪಿಯ ರಾಜಾ ತಿಮ್ಮಪ್ಪ ನಾಯಕ, ಆಮ್ ಆದ್ಮಿ ಪಾರ್ಟಿಯ ಭೀಮರಾಯ, ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾದ ರಂಗನಾಯಕ, ಲೋಕಸತ್ತಾ ಪಾರ್ಟಿಯ ಭಗವಂತಪ್ಪ, ಎಸ್ ಯುಸಿಐ-ಸಿನಿಂದ ಸೋಮಶೇಖರ್, ಎನ್‌ಡಿಪಿ ಯ ಮಾರುತಿ, ಸಿಪಿಎಂಎಲ್‌ನ ನಾಗರಾಜ್, ಪಕ್ಷೇತರರಾಗಿ ಚಿನ್ನಯ್ಯ ನಾಯಕ, ಬಸವಂತಪ್ಪ, ಯಲ್ಲಯ್ಯ ಪಾಟೀಲ್ ಸೇರಿದ್ದಾರೆಂದು ಜಿಲ್ಲಾಡಳಿತ ತಿಳಿಸಿದೆ.

371 ಕಲಂ ತಿದ್ದುಪಡಿ; ಕಾಂಗ್ರೆಸಿಗೆ ಬಿಜೆಪಿ ತಿರುಗೇಟು
ಗುಲ್ಬರ್ಗ: ಹೈ-ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗುವಲ್ಲಿ ಬಿಜೆಪಿಯಿಂದ ಅದರಲ್ಲೂ ವಿಶೇಷವಾಗಿ ಎಲ್.ಕೆ. ಆಡ್ವಾಣಿಯವರಿಂದ ಯಾವುದೇ ಪ್ರಮಾದವಾಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಕೆ.ಬಿ ಶಾಣಪ್ಪ ಹೇಳಿದ್ದಾರೆ. ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತಂದು ಹೈ-ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ರಾಜ್ಯದ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತು. ಕೇಂದ್ರದಲ್ಲಿ ಗೃಹ ಮಂತ್ರಿಯಾಗಿದ್ದ ಎಲ್.ಕೆ. ಆಡ್ವಾಣಿಯವರು ಪ್ರಸ್ತಾವನೆ ಮರಳಿ ಕಳುಹಿಸಿದರು. ಪ್ರಸ್ತಾವನೆ ದೋಷಪೂರಿತವಾಗಿರುವುದೇ ಇದಕ್ಕೆ ಕಾರಣ. ತನ್ನ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್, ಆಡ್ವಾಣಿ ಹೈ-ಕ ಪ್ರದೇಶದ ಬೇಡಿಕೆ ತಿರಸ್ಕರಿಸಿದ್ದಾರೆಂದು ಅಪಪ್ರಚಾರ ಮಾಡುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಬಹುದಿನಗಳದಾಗಿತ್ತು. ಕೇಂದ್ರ ಸರ್ಕಾರ ಅದಕ್ಕೆ ಸ್ಪಂದಿಸದಿದ್ದರೆ ಈ ಭಾಗದಲ್ಲಿ ನಡೆದ ಹೋರಾಟ ಕಾರಣ. ಕಾಂಗ್ರೆಸಿಗೆ ಈ ಭಾಗದ ಬಗ್ಗೆ ಕಾಳಜಿಯಿದ್ದರೆ, ಆಂಧ್ರಪ್ರದೇಶದ ತೆಲಂಗಾಣ, ಮಹಾರಾಷ್ಟ್ರದ ವಿದರ್ಭ ಪ್ರದೇಶಗಳಿಗೆ ಸೌಲಭ್ಯ ದೊರೆತಾಗಲೇ ಈ ಪ್ರದೇಶಕ್ಕೂ ವಿಸ್ತರಿಸುತಿತ್ತು ಎಂದು ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.