ರಾಯಚೂರು

ಲಿಂಗಾರೆಡ್ಡಿ ಕೊಲೆ ಪ್ರಕರಣ; ಆರೋಪಿಗಳು ಖುಲಾಸೆ

Published On :

ಸಿಂಧನೂರು: ಗಂಗಾವತಿ ತಾಲೂಕಿನ ನಾಗನಕಲ್‌ನಲ್ಲಿ ಲಿಂಗಾರೆಡ್ಡಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿನ ಆರೋಪಿಗಳು ಖುಲಾಸೆಯಾಗಿದ್ದಾರೆ.
ಘಟನೆ ಹಿನ್ನೆಲೆ: ನಾಗನಕಲ್ ಗ್ರಾಮದ ಮೃತ ಲಿಂಗಾರೆಡ್ಡಿ ಪತ್ನಿ ಶ್ರೀದೇವಿ ತನ್ನ ತವರೂರಾದ ಸಿಂಧನೂರು ತಾಲೂಕಿನ ಗುಂಜಳ್ಳಿ ಗ್ರಾಮದ ಬಸವರಾಜ ಸಾಹುಕಾರ ಎಂಬುವರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಳು ಎಂಬ ಕಾರಣಕ್ಕಾಗಿ ಬಸವರಾಜ ಸಾಹುಕಾರ ಮತ್ತು ಆತನ ಸಹಚರ ಲಿಂಗಪ್ಪ ಗುಂಜಳ್ಳಿ ಎಂಬುವವರು ಒಳಸಂಚು ರೂಪಿಸಿ ಲಿಂಗಾರೆಡ್ಡಿಯನ್ನು ಕೊಲೆ ಮಾಡಿದ್ದಾರೆ ಎಂದು ಕಾರಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಮೃತನ ಪತ್ನಿ ಶ್ರೀದೇವಿ ಅಣ್ಣ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆಗೆ ಕೈಗೆತ್ತಿಕೊಂಡ ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ಕೂಲಂಕಷವಾಗಿ ವಾದ- ಪ್ರತಿವಾದಗಳನ್ನು ಆಲಿಸಿ ಆರೋಪಿಗಳನ್ನು ಆರೋಪದಿಂದ ಮಾ.20ರಂದು ತೀರ್ಪು ನೀಡಿ ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ಸಿಂಧನೂರು ನ್ಯಾಯವಾದಿ ಶಶಿಧರಗೌಡ ಕೆಲೂರು ವಾದ ಮಂಡಿಸಿದ್ದರು. ಈ ಪ್ರಕರಣ ಗಂಗಾವತಿ ತಾಲೂಕಿನ ನಾಗನಕಲ್‌ನಲ್ಲಿ ಲಿಂಗಾರೆಡ್ಡಿ ಕೊಲೆ ಪ್ರಕರಣ ತೀವ್ರ ಕುತೂಹಲ ಕೆರಳಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.