ಹೆಣ್ಣು ಭ್ರೂಣಹತ್ಯೆಗೆ ವರದಕ್ಷಿಣೆ ಕಾರಣ
ಕ.ಪ್ರ. ವಾರ್ತೆ ಮುದಗಲ್ ಮಾ.30
ದೇಶದಲ್ಲಿ ಹೆಣ್ಣು ಭ್ರೂಣಹತ್ಯೆಗೆ ಮೂಲ ಕಾರಣ ವರದಕ್ಷಿಣೆ ಪಿಡುಗು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಗುರಮ್ಮ ಸಂಕೀನ್ ಶಿರೂರ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ್ವರ ಮಠದಲ್ಲಿ ಏರ್ಪಡಿಸಲಾದ ಬಸವ ಧರ್ಮ ಪ್ರವಚನ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಮಾತನಾಡಿ, ವರದಕ್ಷಿಣೆ ಪಿಡಗು ಹೆಮ್ಮರವಾಗಿ ಬೆಳೆಯಲು ಆರಂಭವಾಗಿದ್ದರಿಂದ ಬಡವರು, ಮಧ್ಯಮ ವರ್ಗದವರು ಹೆಣ್ಣು ಹುಟ್ಟಿದರೆ ಕಷ್ಟ ಎನ್ನುವಂತಾಯಿತು. ಇದು ಹೆಣ್ಣು ಭ್ರೂಣಹತ್ಯೆಗೆ ಕಾರಣವಾಯಿತು. ಆದ್ದರಿಂದ ಹೆಣ್ಣು ಸಂತಾನ ಕಡಿಮೆಯಾಗಿದೆ ಎಂದು ವಿಷಾದಿಸಿದರು.
ಮೀಸಲಾತಿ: ಮಹಿಳೆಯರಿಗೆ ಶೇ. 33 ಮೀಸಲಾತಿಯನ್ನು ನೀಡಲು ತೀರ್ಮಾನಿಸಿದೆ. ಆದರೆ ಸಮರ್ಪಕವಾಗಿ ಮೀಸಲಾತಿ ಜಾರಿಯಾಗುತ್ತಿಲ್ಲ. ಮಹಿಳೆಯರಿಗೆ ಶೇ.50 ಮೀಸಲಾತಿಯನ್ನು ನೀಡಬೇಕು ಎಂದರು.
ಮಹಿಳೆಯರಿಗೆ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಇಂದಿರಾಗಾಂಧಿಯಂತವರು ಸ್ಫೂರ್ತಿಯಾಗಬೇಕು. ಅಂದಾಗಲೇ ಸ್ತ್ರೀ ಕುಲಕ್ಕೆ ಗೌರವ ಬರುತ್ತದೆ ಎಂದರು.
ಯುವಕ, ಯುವತಿಯರು ಕಾಲೇಜು ಶಿಕ್ಷಣ ಮುಗಿಯುವರೆಗೆ ಮೊಬೈಲ್ ಬಳಕೆ ಮಾಡಬಾರದು. ದುಶ್ಚಟಗಳಿಗೆ ಬಲಿಯಾಗದೆ ಸದೃಢ ಆರೋಗ್ಯವನ್ನು ಬೆಳೆಸಿಕೊಂಡು ದೇಶಪ್ರೇಮಿಗಳಾಗಬೇಕು. ಆಗಲೇ ದೇಶ ಮುಂದೆ ಬರುತ್ತದೆ ಎಂದರು.
ಮತ ಅಮೂಲ್ಯ: ಮತದಾನ ಎನ್ನುವುದು ಅಮೂಲ್ಯವಾದುದು. ಅದನ್ನು ಯಾರೂ ಹಣ, ಹೆಂಡಕ್ಕೆ ಮಾರಾಟ ಮಾಡಬಾರದು. ಸಮರ್ಥ, ಸಮಾಜ ಸೇವಕರನ್ನು ಗುರುತಿಸಿ ಮತ ಹಾಕಿದಲ್ಲಿ, ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆ ಬರುತ್ತದೆ. ಇಲ್ಲದಿದ್ದರೆ ನೈತಿಕತೆ ಉಳಿಯುವುದಿಲ್ಲ. ಆದ್ದರಿಂದ ಮತಗಳನ್ನು ಮಾತ್ರ ಯಾರೂ ಮಾರಿಕೊಳ್ಳಬೇಡಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

