ವಿದ್ಯಾರ್ಥಿಗಳ ಚಿತ್ತ ಅಧ್ಯಯನದತ್ತ ಮಾತ್ರ ಇರಲಿ
ಕ.ಪ್ರ. ವಾರ್ತೆ ಗುಲ್ಬರ್ಗ ಮೇ 1
ಡಾ. ಅಂಬೇಡ್ಕರ್ ಅವರ ತತ್ತ್ವ, ಸಿದ್ಧಾಂತ ಮತ್ತು ಚಿಂತನೆಗಳನ್ನು ಎಲ್ಲ ಹಂತದ ವಿದ್ಯಾರ್ಥಿ ಸಮುದಾಯ ಸಂಪೂರ್ಣ ಅಧ್ಯಯನ ಮಾಡಿ ಗ್ರಹಿಸಬೇಕು. ಅಂಬೇಡ್ಕರರ ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆಯ ಕನಸು ಸಾಕಾರಗೊಳಿಸಲು ಪ್ರಯತ್ನಿಸಬೇಕೆಂದು ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಎಂಜಿನಿಯರ್ ಶಂಕರ್ ದೇವನೂರ್ ಹೇಳಿದರು.
ಗುರುವಾರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್‌ರ 123ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿ ಸಮುದಾಯದ ಚಿತ್ತ ಸದಾ ಅಧ್ಯಯನದತ್ತ: ವಿದ್ಯಾರ್ಥಿ ಸಮುದಾಯದ ಚಿತ್ತ ಸದಾ ಅಧ್ಯಯನದತ್ತ ಮಾತ್ರ ಇರಬೇಕಲ್ಲದೆ ದಯೆ, ಕರುಣೆ, ಅಂತಃಕರಣ, ಪ್ರೀತಿ, ಸಾಂತ್ವನ ಮತ್ತು ಮಾನವೀಯತೆಯ ಗುಣಗಳನ್ನು ರೂಢಿಸಿಕೊಂಡು ಸಾರ್ಥಕ ಬದುಕನ್ನು ರೂಪಿಸಿಕೊಳ್ಳಬೇಕು. ಇದೇ ಉನ್ನತ ಶಿಕ್ಷಣದ ಮೂಲ ಉದ್ದೇಶವಾಗಿದೆ. ಡಾ. ಅಂಬೇಡ್ಕರ್ ಮತ್ತು ಬಸವಣ್ಣನವರು ರೈತ ಮತ್ತು ಕಾರ್ಮಿಕ ಸಮುದಾಯದ ಕಣ್ಣಾಗಿದ್ದು, ಅರ್ಥ ವ್ಯವಸ್ಥೆಯನ್ನು ಬಲಪಡಿಸಲು ಇವರು ಪ್ರತಿಪಾದಿಸಿದ ಶ್ರಮ ಮತ್ತು ಕಾಯಕ ಸಂಸ್ಕೃತಿಯನ್ನು ಆದರ್ಶವಾಗಿರಿಸಿಕೊಳ್ಳಬೇಕು. ಇದರಿಂದ ಆರ್ಥಿಕ ಅಸಮಾನತೆ ದೂರವಾಗುವುದೆಂದು ದೇವನೂರ ಅಭಿಪ್ರಾಯಪಟ್ಟರು.
ಅಂಬೇಡ್ಕರ್ ವಿಚಾರಧಾರೆಗಳು ಈಗಲೂ ಪ್ರಸ್ತುತ: ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಚಂದ್ರಕಾಂತ್ ಯಾತನೂರ್ ಗೌರವ ಅತಿಥಿಯಾಗಿ ಮಾತನಾಡಿ, ಡಾ. ಅಂಬೇಡ್ಕರ್ ಅವರ ವಿಚಾರಧಾರೆಗಳು ಈಗಿನ ಆಧುನಿಕ ತಂತ್ರಜ್ಞಾನದ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಪ್ರಸ್ತುತವಾಗಿದ್ದು, ಈ ವಿಚಾರಧಾರೆಗಳನ್ನು ಈಗಲೂ ಚಿಂತನೆ ಮತ್ತು ಅಧ್ಯಯನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಕುಲಪತಿ ಪ್ರೊ. ಎಂ.ಎನ್. ಸುಧೀಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ. ಎನ್. ನಾಗರಾಜು, ವಿದ್ಯಾರ್ಥಿ ಕಲ್ಯಾಣದ ಡೀನ್ ಡಾ. ಗಣೇಶ್ ಪವಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

