ಕಬ್ಬು ಬಾಕಿ ಪಾವತಿರೈತರ ಗಡುವು
ಆಳಂದ: ತಾಲೂಕಿನ ಭೂಸನೂರ ಹತ್ತಿರದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಹಣವನ್ನು ಮೇ 12ರೊಳಗೆ ಪಾವತಿಸದಿದ್ದರೆ ರೈತರೊಂದಿಗೆ ಕಾರ್ಖಾನೆಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಧರ್ಮರಾಜ ಸಾಹು ರೇವಣಸಿದ್ದಪ್ಪ ಪಟ್ನೆ ಭೂಸನೂರ ಎಚ್ಚರಿಸಿದ್ದಾರೆ.
ಕಳೆದ ಜ.15ರಿಂದ ಇಲ್ಲಿಯವರೆಗೆ ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಸಿಲ್ಲ. ಪ್ರತಿ ಟನ್ ಕಬ್ಬಿಗೆ 2650 ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಿದರೂ ಆಡಳಿತ ಮಂಡಳಿ ಕ್ರಮಕೈಗೊಂಡಿಲ್ಲ. ರೈತರು ಸಾಲ ಮಾಡಿ ಕಾರ್ಖಾನೆಗೆ ಕಬ್ಬು ಪೂರೈಸಿರುವರು. ಅನೇಕ ಸಮಸ್ಯೆಗಳಲ್ಲಿ ರೈತರು ಜೀವನ ನಡೆಸುತ್ತಿದ್ದಾರೆ. ಆದರೆ ಕಾರ್ಖಾನೆಯ ಅಧಿಕಾರಿಗಳು ಮಾತ್ರ ರೈತರ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದರು. ಕಾರ್ಖಾನೆಯ ಒಪ್ಪಂದದ ನಿಯಮಗಳಂತೆ ಕಬ್ಬು ಪೂರೈಸಿದ ರೈತರಿಗೆ 15 ದಿನದೊಳಗೆ ಹಣ ಪಾವತಿಸಬೇಕು. ಇದನ್ನು ಕಾರ್ಖಾನೆ ಅಧಿಕಾರಿಗಳು ಉಲ್ಲಂಘಿಸಿ ರೈತರನ್ನು ಕಡೆಗಣಿಸಲಾಗುತ್ತಿದೆ. ಮೇ 12ರೊಳಗೆ ಸಂಪೂರ್ಣ ಕಬ್ಬಿನ ಬಾಕಿ ಬೆಂಬಲ ಬೆಲೆಯನ್ನು ಸಂಬಂಧಿಸಿದ ರೈತರಿಗೆ ಪಾವತಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಅದಕ್ಕೆ ಮುಂದಾಗುವ ಅನಾಹುತಗಳಿಗೆ ಆಡಳಿತ ಮಂಡಳಿ ಜವಾಬ್ದಾರಿಯಾಗಲಿದೆ ಎಂದು ಗುಡುಗಿದರು.
ಸಕ್ಕರೆ ಉತ್ಪಾದನೆ: ಪ್ರಸಕ್ತ ಹಂಗಾಮಿನಲ್ಲಿ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯು 7.33 ಮೆ. ಟನ್ ಕಬ್ಬು ನುರಿದು 7.82 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ. ಇದುವರೆಗೆ 34 ಮೆಗಾ ವ್ಯಾಟ್ ವಿದ್ಯುತ್ ಕಾರ್ಖಾನೆಯಲ್ಲಿ ಉತ್ಪಾದಿಸಲಾಗಿದೆ. ಇದರಲ್ಲಿ 18ರಿಂದ 20 ಮೆ. ವ್ಯಾಟ್ ವಿದ್ಯುತ್ನ್ನು ಕೆಪಿಟಿಸಿಎಲ್ಗೆ ಸರಬರಾಜು ಮಾಡಲಾಗುತ್ತದೆ. ಹಾಗೂ 45 ಸಾವಿರ ಟನ್ ಮೋಲಾಸಿಸ್(ಕಾಕಂಬಿ) ಉತ್ಪಾದಿಸಲಾಗಿದೆ. ಸದ್ಯ ಕಾರ್ಖಾನೆಗೆ ಕಡಿಮೆ ಪ್ರಮಾಣದಲ್ಲಿ ಕಬ್ಬು ಬರುವುದರಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಲಾಗಿದೆ. ಕಳೆದ ಸಾಲಿಗಿಂತ ಈ ವರ್ಷ ಹೆಚ್ಚಿನ ಕಬ್ಬನ್ನು ನುರಿಸಲಾಗಿದೆ ಎಂದು ಮೂಲಗಳು ಹೇಳಿಕೊಂಡಿವೆ.
ರೋಗಿಗಳಿಗೆ ಹಣ್ಣು ವಿತರಣೆ
ಗುಲ್ಬರ್ಗ: ಅಶ್ವಿನಿ ಆಸ್ಪತ್ರೆ ಗುಲ್ಬರ್ಗ ಶಾಖೆಯ 4ನೇ ವಾರ್ಷಿಕೋತ್ಸವ ಅಂಗವಾಗಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಪ್ರತಿ ತಿಂಗಳ 2ನೇ ಶನಿವಾರ ಉಚಿತ ತಪಾಸಣಾ ಹಾಗೂ ಅದೇ ದಿನ ದಾಖಲಾದ ರೋಗಿಗಳಿಗೆ ಶೇ.10ರಷ್ಟು ರಿಯಾಯ್ತಿ ಕೊಡಲಾಗುವುದು. ಈ ಆಸ್ಪತ್ರೆಯಲ್ಲಿ ಮೆಡಿಸನ್, ಜನರಲ್ ಸರ್ಜರಿ, ಅರ್ಥೋಪೆಡಿಕ್, ಪಿಡಿಯಾಟ್ರಿಕ್, ಸ್ಕಿನ್, ಇಎನ್ಟಿ, ಪ್ಯಾತೋಲಜಿ, ರೆಡಿಯೋಲಾಜಿ ವಿಭಾಗಗಳು ಹಾಗೂ ಆ್ಯಂಬುಲೆನ್ಸ್ ಸೇವೆ ಇದೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಸ್ಥಳೀಯ ವೈದ್ಯಾಧಿಕಾರಿ ಡಾ. ಎಂ.ಎಸ್. ಪಾಟೀಲ್ ತಿಳಿಸಿದ್ದಾರೆ.
ಆಸ್ಪತ್ರೆ ಹಿರಿಯ ವೈದ್ಯರಾದ ಡಾ. ವೆಂಕಟೇಶ ದೇಸಾಯಿ, ಡಾ. ಇಂದಿರಾ ಲೋಯಾ, ಡಾ. ಸಂಜೀವ ಚಿಂಚೋಳಿ, ಡಾ. ಮೈಮದ್ ಶೇಖ, ಡಾ. ಅಹ್ಮದ ಖಾನ್, ಡಾ. ಎಯಸಾನ್ ಖಾದ್ರಿ, ಡಾ. ಜ್ಯೋತಿ ಪಾಟೀಲ್, ಡಾ. ವೀರಣ್ಣ ಅಳ್ಳಗಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

