ರಾಯಚೂರು

ವಚನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಲಿ

Published On :

ಚಿತ್ತಾಪುರ: 12ನೇ ಶತಮಾನದ ಬಸವಣ್ಣನ ವಚನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವುದು ಅವಶ್ಯಕ ಎಂದು ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಜೆ.ಎಸ್. ಪಾಟೀಲ್ ಹೇಳಿದರು.
ಚಿತ್ತಾಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತ್ಯುತ್ಸವ ಆಚರಣೆ ಸಮಿತಿ ಹಮ್ಮಿಕೊಂಡ ಬಸವ ಜಯಂತಿ ಉತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಬಸವ ತತ್ವ ಹೇಳುವುದು ಮುಖ್ಯವಲ್ಲ. ಅದರಂತೆ ನಡೆದುಕೊಂಡು ಆಚರಣೆಯಲ್ಲಿ ತರುವುದು ಮುಖ್ಯ ಎಂದರು.
ಕಂಭಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸಾನ್ನಿಧ್ಯವಹಿಸಿ ಮಾತನಾಡಿದರು. ತಾಲೂಕು ವೀರಶೈವ ಸಮಾಜ ಅಧ್ಯಕ್ಷ ಶಿವರಾವ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರ, ವರ್ತಕರ ಸಂಘದ ಅಧ್ಯಕ್ಷ ಅಣ್ಣಾರಾವ ಪಾಟೀಲ್ ಮುಡಬೂಳ, ನಾಗರಾಜ ಭಂಕಲಗಿ, ಶಿವುಕುಮಾರ ಸುಲ್ತಾನಪುರ, ವಿವಿಧ ಸಮಾಜಗಳ ಅಧ್ಯಕ್ಷರಾದ ಪೋಮು ರಾಠೋಡ, ವಿನೋದ ಗುತ್ತೇದಾರ, ಮಲ್ಲಿಕಾರ್ಜುನ ಕಾಳಗಿ, ಸೂರ್ಯಕಾಂತ ಪಲ್ಲೇದ, ರವೀಂದ್ರ ಸಜ್ಜನಶೆಟ್ಟಿ, ಶಶಿಕಾಂತ ಪಾಟೀಲ್, ಅಶೋಕ ನಿಪ್ಪಾಣಿ, ಎಸ್.ಪಿ. ಸಾತನೂರಕರ, ನಾಗರಾಜ ರೇಷ್ಮೀ, ವಿಜಯಕುಮಾರ ಲೊಡ್ಡೇನೋರ ವೇದಿಕೆಯಲ್ಲಿದ್ದರು.
ನ್ಯಾಯವಾದಿ ಚಂದ್ರಶೇಖರ ಅವಂಟಿ ಪ್ರಾಸ್ತಾವಿಕ ಮಾತನಾಡಿದರು. ನರಸಪ್ಪ ಚಿನ್ನಕಟ್ಟಿ ಪ್ರಾರ್ಥನೆ ಹಾಡಿದರು. ಅಂಬರೀಷ ಸುಲೇಗಾಂವ ಸ್ವಾಗತಿಸಿದರು. ವೀರಸಂಗಪ್ಪ ಸುಲೇಗಾಂವ ನಿರೂಪಿಸಿದರು. ಜಗದೀಶ ದಿಗ್ಗಾಂವಕರ್ ವಂದಿಸಿದರು.
ಮೆರವಣಿಗೆ: ರಥದಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯು ತಹಸೀಲ್ದಾರ್ ಕಚೇರಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಬೈಕ್‌ರ್ಯಾಲಿ, ಹಲಗೆ, ಡೊಳ್ಳು, ಲೇಜಿಮ, ಬಣ್ಣ ಬಣ್ಣದ ಧ್ವಜಗಳು ನೋಡುಗರ ಗಮನ ಸೆಳೆಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.