ರಾಯಚೂರು

ವಿದೇಶಗಳಲ್ಲಿ ವಚನ ಅಧ್ಯಯನ ಕೇಂದ್ರ ಸ್ಥಾಪಿಸಿ

Published On :


ಕ.ಪ್ರ. ವಾರ್ತೆ    ಸಿಂಧನೂರು    ಮೇ 4
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಚನ ಅಧ್ಯಯನ ಕೇಂದ್ರ ರಚನೆಗೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದು, ಶೀಘ್ರದಲ್ಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎಂದು ಬಸವ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ನಗರದ ಬಸವಚೇತನ ಟ್ರೇಡರ್ಸ್ ಸಭಾಂಗಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬಸವಣ್ಣನ ವಚನಗಳು ಹೆಚ್ಚು ಹೆಚ್ಚು ಪ್ರಚಾರವಾಗಬೇಕಾಗಿದೆ. ಮೊದಲು ಬಸವಾಭಿಮಾನಿಗಳು ಅಧ್ಯಯನಶೀಲರಾಗಬೇಕು. ಆಗ ಮಾತ್ರ ಶ್ರೇಷ್ಠ ವಚನಕಾರನ ವಚನಗಳು ದೇಶ ಮತ್ತು ಇತರ ದೇಶಗಳಲ್ಲಿ ಇನ್ನು ಹೆಚ್ಚು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕಳವಳ: ರಾಜಸ್ಥಾನದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಅಲ್ಲಿನ ಜನರು ಬಸವಣ್ಣನ ಬಗ್ಗೆ ಅಧ್ಯಯನ ಮಾಡಿ ಅವರಲ್ಲಿನ ತತ್ವಾದರ್ಶ ಮೈಗೂಡಿಸಿಕೊಂಡಿದ್ದಾರೆ. ಕಮ್ಯುನಿಸ್ಟ್ ನಾಡು ಕೇರಳದಲ್ಲೂ ವಚನ ಸಾಹಿತ್ಯ ಅಧ್ಯಯದಲ್ಲಿ ಅಲ್ಲಿನ ವಿಚಾರವಂತರು ಆಸಕ್ತಿ ತೋರುತ್ತಿದ್ದು ಬಸವ ಪ್ರಜ್ಞೆ ಜಾಗ್ರತಗೊಳ್ಳುತ್ತಿದೆ. ಆದರೆ ಬಸವಣ್ಣನವರ ನಾಡಿನಲ್ಲಿ ವಚನಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಯುವಕರು ಇಂದಿನ ದಿನಮಾನಗಳಲ್ಲಿ ಹೆಚ್ಚು ಹೆಚ್ಚು ಬಸವಣ್ಣನವರ ಆದರ್ಶಗಳನ್ನು ಪಾಲಿಸುವುದರ ಜೊತೆಗೆ ವಚನಗಳ ಬಗ್ಗೆ ಆಸಕ್ತಿ ತೋರಬೇಕು. ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರು ಎಲ್ಲ ವರ್ಗದವರಿಗೂ ಬೆಳಕಾಗಿರುವ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಬಸವ ಸಮಿತಿ ಉದ್ದೇಶ: ಇಂದು ದಕ್ಷಿಣ ಭಾರತ ಅಲ್ಲದೆ ಉತ್ತರ ಭಾರತದಲ್ಲೂ ಬಸವ ತತ್ವವನ್ನು ಪ್ರಚಾರಪಡಿಸುವ ಮಹಾನ್ ಉದ್ದೇಶದೊಂದಿಗೆ 25 ಭಾಷೆಗಳಲ್ಲಿ ಬಸವಣ್ಣ ಮತ್ತು ಸಮಕಾಲೀನ ಶರಣರ ವಚನಗಳನ್ನು ಅನುವಾದಿಸುವ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಚುರ ಪಡಿಸುವ ಉದ್ದೇಶ ಬಸವ ಸಮಿತಿಯದ್ದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಸಮಿತಿ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ, ತಾಲೂಕು ಬಸವ ಸಮಿತಿ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ, ಉಪಾಧ್ಯಕ್ಷ ವೀರೇಶ ಅಂತರಗಂಗಿ, ಮಾನವಿ ತಾಲೂಕಾಧ್ಯಕ್ಷ ಬಸವರಾಜ ನೀರಮಾನವಿ, ನಾರಾಯಣಪ್ಪ ಮಾಡಶಿರವಾರ, ಬಸವರಾಜ ತೆಂಗಿನಕಾಯಿ, ಮಹಾಂತೇಶ, ಶಿವಕುಮಾರ ಜವಳಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.