ರಾಯಚೂರು

ಸ್ವಾರ್ಥಕ್ಕಾಗಿ ಸಮಾಜ ಒಡೆಯುವ ಕೆಲಸ: ಕೋರವಿ

Published On :

ಕ.ಪ್ರ. ವಾರ್ತೆ    ಚಿತ್ತಾಪುರ    ಮೇ 4
ನಾಡಿನ ಅನೇಕ ಹೋರಾಟಗಾರರು ಸಮಾಜದಲ್ಲಿನ ಶೋಷಿತರ, ಆರ್ಥಿಕ ದುರ್ಬಲರಿಗೆ ಸೌಲಭ್ಯಗಳನ್ನು ಒದಗಿಸಿ ಮೀಸಲಾತಿಯನ್ನು ಒದಗಿಸಿಕೊಟ್ಟರೂ ನಾವು ಒಂದಾಗಿ ಬಾಳುವ ಬದಲು ಸ್ವಾರ್ಥಕ್ಕಾಗಿ ಸಮಾಜ ಒಡೆಯುವ ಕೆಲಸ ಮಾಡಿ ಸಮಾಜಕ್ಕೆ ಮೋಸ ಮಾಡುತ್ತಿದ್ದೇವೆ ಎಂದು ಉಪನ್ಯಾಸಕ ಸುಭಾಷ ಶೀಲವಂತ ಕೋರವಿ ಹೇಳಿದರು.
ಇಲ್ಲಿನ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಸಮುದಾಯದ ನೌಕರರ ಒಕ್ಕೂಟ ಮತ್ತು ಭಾರತ ಮುಕ್ತಿ ಮೋರ್ಚಾ ಹಾಗೂ ಭಾರತೀಯ ವಿದ್ಯಾರ್ಥಿ ಮೋರ್ಚಾ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾ ಪುರುಷರು ಮತ್ತು ಅವರ ನೈಜ್ಯ ಚಳುವಳಿಯ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹು ಮಹಾರಾಜರು ಸಮಾಜದಲ್ಲಿನ ಶೋಷಿತರು, ಹಿಂದುಳಿದವರು, ಆರ್ಥಿಕವಾಗಿ ದುರ್ಬಲವಾಗಿರುವವರು ಸಮಾಜದ ಮೇಲ್ಪಂಕ್ತಿಗೆ ಬರಲು ಪ್ರಥಮ ಬಾರಿಗೆ ಮೀಸಲಾತಿಯನ್ನು ಒದಗಿಸಿದರು. ಆದರೆ ಅದನ್ನು ಪಡೆದ ನಾವುಗಳು ಅದರ ದುರ್ಬಳಕ್ಕೆ ಮಾಡಿಕೊಂಡು ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆದು ಆಳುತ್ತಿದ್ದೇವೆ ಎಂದರು.
ಶಿವಣ್ಣ ಸಾತನೂರಕರ್, ಜಗದೀಶ ಸಂಗನ್, ವಿರುಪಾಕ್ಷಿ ಬೆಣ್ಣಿ, ಶಿವಶರಣಪ್ಪ ಜಮಾದಾರಮ ರವಿ ಕಾರ್ಪೇಂಟರ್, ಬಸವರಾಜ ಮುದ್ದಾ, ಅಶೋಕ ರಂಗನೋರ, ಪರಶುರಾಮ ಕಂದಗಲ್, ಪರಶುರಾಮ ರಾವುರ, ನರಸಪ್ಪ ಚಿನ್ನಾಕಟ್ಟಿ, ಮಾರುತಿ ಬುಡ್ಗ ಜಂಗಮ, ಎಸ್.ಎಂ. ಖಡೀಲ್ಕರ್, ಮರೆಪ್ಪ ಬೋಮ್ಮನಳ್ಳಿ, ಮಾರುತಿ ಬೂತಾಳೆ, ಶಿವಮೂರ್ತಿ ಕೋಟನೂರ ಸೇರಿದಂತೆ ಹಲವಾರು ಭಾಗವಹಿಸಿದ್ದರು.


ಇಂದು ಮಹಾತ್ಮರ ಜಯಂತ್ಯುತ್ಸವ
ಆಳಂದ: ತಾಲೂಕಿನ ಸಾವಳೇಶ್ವರದಲ್ಲಿ ಮೇ 5ರಂದು ಮ.4 ಗಂಟೆಗೆ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್‌ರವರ ಜಯಂತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬೆ.11 ಗಂಟೆಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಭಾವಚಿತ್ರದ ಮೆರವಣಿಗೆ ನಂತರ ನಡೆಯುವ ಸಮಾರಂಭವನ್ನು ಶಾಸಕ ಬಿ.ಆರ್. ಪಾಟೀಲ್ ಉದ್ಘಾಟಿಸುವರು. ನಿವೃತ್ತ ಶಿಕ್ಷಕ ತುಕಾರಾಮ ಟೋಪೆ ಅಧ್ಯಕ್ಷತೆ ವಹಿಸುವರು. ಗ್ರಾಪಂ ಅಧ್ಯಕ್ಷೆ ಸುನೀತಾ ಪೂಜಾರಿ ಧ್ವಜಾರೋಹಣ ನೆರವೇರಿಸುವರು. ಗ್ರಾಪಂ ಸದಸ್ಯೆ ಹವಳಾಬಾಯಿ ಕೆರಮಗಿ ಮತ್ತು ಸಿಪಿಐ ಕೆ.ಎಚ್. ಹಟ್ಟಿ ಉಪಸ್ಥಿತರಿರುವರು. ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ. ಅಪುಗೇರೆ ಸೋಮಶೇಖರ, ಸಾಹಿತಿ ಡಾ. ಪ್ರಭು ಖಾನಾಪೂರೆ, ಸಮನ್ವಯಾಧಿಕಾರಿ ಬಸವಂತರಾವ ಜಿಡ್ಡೆ, ಸಮಾಜ ಕಾರ್ಯಕರ್ತ ಬಿ.ವಿ. ಚಕ್ರಮವರ್ತಿ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಪಂ ಇಒ ಲಕ್ಷ್ಮಣ ಶೃಂಗೇರಿ, ಪಶುವೈದ್ಯ ಸಂಗಮೇಶ ಪಡಶೆಟ್ಟಿ, ಪತ್ರಕರ್ತ ಮಹಾದೇವ ವಡಗಾಂವ, ಕರವೇ ಜಿಲ್ಲಾ ಉಪಾಧ್ಯಕ್ಷ ರೇವಣಸಿದ್ದಪ್ಪ ನಾಗೂರೆ, ಹಿರಿಯ ಮುಖಂಡ ಎಸ್.ಡಿ. ಸಾಗರಶೆಟ್ಟಿ, ದಲಿತ ಸೇನೆ ಅಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ವಿಠ್ಠಲ ಚಿಕಣಿ, ಮಲ್ಕಪ್ಪ ಕುದರೆ, ಪಿಡಿಒ ಅಂಬರಾಯ ಸೇರಿ ಇನ್ನಿತರರು ಪಾಲ್ಗೊಳ್ಳುವರು. ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಳ್ಳಬೇಕೆಂದು ಮುಖಂಡ ಶಶಿಕಾಂತ ಶಿಲವಂತ ಮತ್ತು ಚಂದ್ರಕಾಂತ ಘೋಡಕ್ಕೆ ತಿಳಿಸಿದ್ದಾರೆ.
ಮಣ್ಣು ಮಾದರಿ ಸಂಗ್ರಹ ಆಂದೋಲನ
ಜೇವರ್ಗಿ: ತಾಲೂಕಿನ ರೈತರ ಹೊಲಗಳಲ್ಲಿರುವ ಮಣ್ಣು ಪರೀಕ್ಷಿಸಿ, ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆ ಅರಿತು ಚಿಕಿತ್ಸಾ ಕ್ರಮ ಕೈಗೊಳ್ಳುವುದಕ್ಕೆ ಕೃಷಿ ಇಲಾಖೆ ಏ.24ರಿಂದ ಮೇ 15ರವರೆಗೆ ಮಣ್ಣಿನ ಮಾದರಿ ಸಂಗ್ರಹಣಾ ಆಂದೋಲನ ಪ್ರಾರಂಭಿಸಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಪವನಕುಮಾರ ತಿಳಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕರು ಎ.ರಾಜಣ್ಣ ಮಾರ್ಗದರ್ಶನದಲ್ಲಿ ಇಜೇರಿ ಹೋಬಳಿಯಲ್ಲಿ ಮಣ್ಣಿನ ಮಾದರಿ ಸಂಗ್ರಹಿಸಲಾಯಿತು. ಸಹಾಯಕ ಕೃಷಿ ಅಧಿಕಾರಿ ಪವನಕುಮಾರ, ಅನುಗಾರರಾದ ಬಸನಗೌಡ, ದೇವಿಂದ್ರ, ನಿಂಗಪ್ಪ, ಹಣಮಂತ ಸೇರಿದಂತೆ ಇತರರು  ಉಪಸ್ಥಿತರಿದ್ದರು. ಇಜೇರಿ ಹೋಬಳಿಯಲ್ಲಿ 80 ಮಣ್ಣಿನ ಮಾದರಿ ಸಂಗ್ರಹಿಸುವ ಗುರಿ ಹೊಂದಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಕಾಯಕ ರತ್ನ ಪ್ರಶಸ್ತಿ ಪ್ರದಾನ
ಗುಲ್ಬರ್ಗ: ರೋಟರಿ ಕ್ಲಬ್ ಮತ್ತು ಇನ್ನರ್‌ವ್ಹೀಲ್ ಕ್ಲಬ್ ಸಂಯಕ್ತಾಶ್ರಯದಲ್ಲಿ ಪಾಲ್ ಹ್ಯಾರೀಸ್ ಸಭಾಂಗಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರ್.ಆರ್. ಜಹಾಗೀರದಾರ, ದಶರಥರಾವ ಸೋಲನಕೆರೆ, ಅನಂತರಾವ ಹರಸೂರ, ಚನ್ನಬಸವ ನಾಡಗೌಡ, ಡಾ. ವಿಜಯಲಕ್ಷ್ಮಿ ಕೋಸಗಿ, ಚಂದ್ರಕಾಂತ ಪಾಟೀಲ, ನಮ್ರತಾ ರಾಠೋಡ, ವಿಜಯಕುಮಾರ ಹಂಗರಗಿ, ಶ್ರೀನಿವಾಸ ಪಾತ್ರಾ, ಗಿರಿಜಾ ಖೇಣಿ, ವಿಷ್ಣು ಮೂರ್ತಿನಾಯಕ ಅವರಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜ ಸೇವಕ ಲಕ್ಷಣರಾವ್ ಗೋಗಿ ಅತಿಥಿಗಳಾಗಿ ಆಗಮಿಸಿದ್ದರು. ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿಶ್ವನಾಥ ಎಕ್ಕೆಳ್ಳಿ, ಗುಂಪುನಾಯಕ ಸದಾಶಿವ ಜೀಡಗೇಕರ್ ಮತ್ತು ವೈಜಯಂತಿ ಮಾಲಾ, ಸೀಮಾ ಭಟ್ ಇದ್ದರು.
ಐಐಟಿ- ಜೆಇಇಗೆ ಅರ್ಹತೆ
ಗುಲ್ಬರ್ಗ: ನಗರದ ಸರ್ವಜ್ಞ ವಸತಿ ವಿಜ್ಞಾನ ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಐಐಟಿ-ಜೆಇಇ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ದೇವರಾಜ ಗೊಲ್ಲಾಳಪ್ಪ, ಭರತ ರಾಠೋಡ, ಮಂಜುನಾಥ ಬಸವರಾಜ, ಗಂಗಮ್ಮ ರವೀಂದ್ರನಾಥ, ಶ್ರದ್ಧಾಂಜಲಿ ಶಿವಪುತ್ರಪ್ಪ ಹಳ್ಳಿಖೇಡ, ಸುನೀಲಕುಮಾರ ಕೊಳ್ಳಿ, ಕಾರ್ತಿಕ ಪವಾರ, ರಾಜಶೇಖರ ರಾಠೋಡ, ಅವಿನಾಶ ಚಂದ್ರಕಾಂತ, ಅಜಯ ಯಾದಗಿರಿ, ಶ್ರೀಶೈಲ ಬುರಾನ್ಪೂರ, ಮಿರಾಸ್ ದಾರ ಪವನಕುಮಾರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆ ಸಂಸ್ಥಾಪಕ ಪ್ರೊ. ಚನ್ನಾರೆಡ್ಡಿ ಪಾಟೀಲ, ಗೀತಾ ಪಾಟೀಲ, ಪ್ರಾಚಾರ್ಯ ಎಂ.ಸಿ. ಕಿರೇದಳ್ಳಿ, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.