ರಾಯಚೂರು

ಯೋಗ, ಧ್ಯಾನದಿಂದ ಏಕಾಗ್ರತೆ: ಭಾಸ್ಕರ

Published On :

ಸಿಂಧನೂರು: ತಾಂತ್ರಿಕ ಯುಗ ಹಾಗೂ ವಿವಿಧ ಮಾಧ್ಯಮಗಳ ಪ್ರಭಾವದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಪ್ರತಿನಿತ್ಯವೂ ಯೋಗ, ಧ್ಯಾನಗಳನ್ನು ರೂಢಿಸಿಕೊಳ್ಳುವುದರಿಂದ ಮನಸ್ಸಿಗೆ ಏಕಾಗ್ರತೆ ಉಂಟಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿ  ರಾಜ್ಯ ಪ್ರಭಾರಿ ಎಂ. ಭಾಸ್ಕರ್ ಅಭಿಪ್ರಾಯಪಟ್ಟರು.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಚಾಲೆಂಚ್ ಕೋಚಿಂಗ್ ಸೆಂಟರ್ಸ್ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಉಚಿತ ಯೋಗ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಕೋಚಿಂಗ್ ಸೆಂಟರ್ಸ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಐದು ದಿನಗಳ ಕಾಲ ನೀಡಿದ ಈ ಯೋಗ ತರಬೇತಿ ಕೇವಲ ಸಾಂಕೇತಿಕ ಮಾತ್ರ. ದಿನಂಪ್ರತಿಯೂ ಯೋಗಭ್ಯಾಸವನ್ನು ಮಾಡುವ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಈ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಧ್ಯಾನ ಜೀವನದ ಕ್ರಮಗಳು: ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನಗರದ 3ನೇ ಮೈಲ್ ಕ್ಯಾಂಪಿನ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ, ಸನಾತನ ಪದ್ಧತಿಗಳಲ್ಲಿ ಒಂದಾಗಿರುವ ಯೋಗ ಮತ್ತು ಧ್ಯಾನಗಳು ನಮ್ಮ ಜೀವನಕ್ರಮವಾಬೇಕು ಎಂದರು.
ವಿದ್ಯಾಭ್ಯಾಸಕ್ಕೆ ಅನುಕೂಲ: ಹಿರಿಯ ನ್ಯಾಯವಾದಿ ಡಿ.ಎಸ್.ಕಲ್ಮಠ ಮಾತನಾಡಿ, ತಾಲೂಕಿನಲ್ಲಿ ಅಷ್ಟೆ ಅಲ್ಲ ರಾಜ್ಯದ ಮೂಲೆ- ಮೂಲೆಗಳಲ್ಲಿ ಎಂ. ಭಾಸ್ಕರ್ ಇವರ ಮಾರ್ಗದರ್ಶನದಲ್ಲಿ ಈಗಾಗಲೇ ಸಾಕಷ್ಟು ಯೋಗ ಶಿಬಿರಗಳು ನಡೆದಿವೆ. ಇಂತವರ ಮಾರ್ಗದರ್ಶನದಲ್ಲಿ ಕೋಚಿಂಗ್ ಸೆಂಟರ್ಸ್ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಉಚಿತ ಯೋಗ ತರಬೇತಿ ಹೇಳಿಕೊಡುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ ಎಂದು ಅಭಿನಂದಿಸಿದರು.  ಇಟಗಿಯ ಗುರುಶಾಂತ ಶ್ರೀಗಳು, ಪತಂಜಲಿ ಯೋಗ ಸಮಿತಿಯ ಶ್ರೀಶೈಲ ಪತ್ತಾರ, ಕನಕನಗರ ಸಿ.ಆರ್.ಪಿ ವೀರೇಶ ಗೋನವಾರ, ಹೊಸಳ್ಳಿ (ಇಜೆ) ಸಿಆರ್‌ಪಿ ರಾಮದಾಸ, ಶಾಲೆಯ ಮುಖ್ಯಗುರು ಬಸಯ್ಯ ಹಿರೇಮಠ ಮಾತನಾಡಿದರು.
ಸಂಸ್ಥೆ ನಿರ್ದೇಶಕ ಬಸವರಾಜ ವಲ್ಕಂದಿನ್ನಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಸಿದರೆಡ್ಡಿ  ಸ್ವಾಗತಿಸಿ, ಶಿಕ್ಷಕ ಪುಂಡಲೀಕ ಗೊರವರ ಕಾರ್ಯಕ್ರಮ ವಂದಿಸಿದರು. ಸೌಮ್ಯ, ಮಲ್ಲಿಕಾರ್ಜುನ, ಸ್ವಾತಿ ಮತ್ತು ಅನಿಲ ಅನಿಸಿಕೆಗಳನ್ನು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.