ನವೀನ್ ಸ್ನಾತಕೋತ್ತರ ಅಭ್ಯಾಸಕ್ಕೆ ನೆರವು
ಕ.ಪ್ರ. ವಾರ್ತೆ ್ಣ ಸಿಂಧನೂರು ್ಣ ಮೇ 14
ಹೈ-ಕ ವಲಯಕ್ಕೆ ಪ್ರಥಮ ಬಾರಿ ರ್ಯಾಂಕ್ ತಂದುಕೊಟ್ಟ ಬಡವಿದ್ಯಾರ್ಥಿ ನವೀನಕುಮಾರ ಅವರನ್ನು ಸ್ನಾತಕೋತ್ತರ ಪದವಿವರೆಗೆ ತಾವೇ ಶುಲ್ಕ ಪಾವತಿಸಿ ಓದಲು ನೆರವು ನೀಡುವುದಾಗಿ ಕೃಷ್ಣದೇವರಾಯ ಸಂಸ್ಥೆ ಆಡಳಿತಾಧಿಕಾರಿ ವೈ. ನರೇಂದ್ರನಾಥ ಭರವಸೆ ನೀಡಿದರು.
ಇಲ್ಲಿಗೆ ಸಮೀಪದ ಇ.ಕೆ. ಹೊಸಳ್ಳಿ ಕ್ಯಾಂಪ್ನ ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ನವೀನ್ ಕುಮಾರ ಅವರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಶೇ.80 ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಜನೆ ಅವಕಾಶವನ್ನು ನಮ್ಮ ಸಂಸ್ಥೆ ನೀಡುತ್ತಿದ್ದು, ಇನ್ನು ಮುಂದೆಯೂ ಮುಂದುವರೆಸಲಾಗುವುದು. ಜೀವನದಲ್ಲಿ ಉದಾತ್ತ ಗುರಿ ಇಟ್ಟುಕೊಂಡು ಛಲದಿಂದ ಅಭ್ಯಾಸ ಮಾಡಿದರೆ ಯಶಸ್ಸು ಸಿಗುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಬಡತನ ಅಡ್ಡಿಯಾಗುವುದಿಲ್ಲ ಎಂದರು.
ನಿರೀಕ್ಷೆ ಇರಲಿಲ್ಲ: ಸನ್ಮಾನ ಸ್ವೀಕರಿಸಿ ಮಾತನಾಡಿದ ನವೀನ್ ಕುಮಾರ ತಾನು ರ್ಯಾಂಕ್ ಪಡೆಯುತ್ತೇನೆ ಎಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ಪಡೆಯಬೇಕೆನ್ನುವ ಉದ್ದೇಶವೂ ಹೊಂದಿರಲಿಲ್ಲ. ಜ್ಞಾನ ಪಡೆಯಬೇಕೆಂಬ ಬಯಕೆಯಿಂದ ಓದಿದೆ. ರ್ಯಾಂಕ್ ತಾನೇ ಒಲಿದು ಬಂದಿದೆ. ಪ್ರತಿದಿನ 12 ತಾಸಿಗೂ ಹೆಚ್ಚು ಅಭ್ಯಾಸ ಮಾಡುತ್ತಿದ್ದೆ. ಐದು ಜನ ಗೆಳೆಯರೊಂದಿಗೆ ಚರ್ಚೆ ಮಾಡುತ್ತಿದ್ದೆ. ಎಲ್ಲ ಗೆಳೆಯರು ಶೇ.78ರಿಂದ 80ರವರೆಗೆ ಅಂಕ ಪಡೆದಿದ್ದಾರೆ ಎಂದರು. ಸಾನ್ನಿಧ್ಯವನ್ನು ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು ವಹಿಸಿದ್ದರು. ಪ್ರಾಂಶುಪಾಲ ಷಣ್ಮುಖರಾವ್, ಸಂಸ್ಥೆ ನಿರ್ದೇಶಕ ಬೊಜ್ಜೆಯ್ಯ, ಜಿ. ಸತ್ಯನಾರಾಯಣ, ರಮಾದೇವಿ ಶಂಭೋಜಿ ಇದ್ದರು. ಎಚ್.ಜಿ. ಹಂಪಣ್ಣ ನಿರೂಪಿಸಿದರು. ಇದೇ ವೇಳೆ ಕಸಾಪ ತಾಲೂಕು ಘಟಕದಿಂದ ನವೀನಕುಮಾರ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

