ರಾಯಚೂರು

ರಂಗ ಪ್ರಶಸ್ತಿಗೆ ಅರ್ಜಿ ಆಹ್ವಾನ

Published On :

ಗುಲ್ಬರ್ಗ: ನಗರದಲ್ಲಿರುವ ರಂಗ ಸಂಗಮ ಕಲಾ ವೇದಿಕೆ ಜಂಗಮಶೆಟ್ಟಿ ಸ್ಮರಣಾರ್ಥ ನೀಡುವ ರಂಗ ಪ್ರಶಸ್ತಿಗೆ ಹಿರಿಯ ರಂಗ ಕಲಾವಿದರಿಂದ ಅರ್ಜಿಗಳನ್ನು ಅಹ್ವಾನಿಸಿದೆ.
ಕಳೆದ ಐದು ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಕ್ರೀಯಾಶೀಲವಾಗಿ ತೊಡಗಿಕೊಂಡಿರುವ ಈ ವೇದಿಕೆ ಪ್ರಸಕ್ತ ಸಾಲಿನಿಂದ ಎಸ್.ಬಿ. ಜಂಗಮಶೆಟ್ಟಿಯವರ ಸ್ಮರಣಾರ್ಥ ಹೈದರಾಬಾದ್ ಕರ್ನಾಟಕ ಪ್ರದೇಶದ ಹಿರಿಯ ರಂಗ ಕಲಾವಿದರನ್ನು ಗುರುತಿಸಿ ರಂಗ ಪ್ರಶಸ್ತಿ ನೀಡಲು ತೀರ್ಮಾನಿಸಿದೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
ಎಸ್.ಬಿ. ಜಂಗಮಶೆಟ್ಟಿ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತ್ಯ, ಸಂಗೀತ ಹಾಗೂ ರಂಗಭೂಮಿಯ ಪೋಷಕರಾಗಿದ್ದರು. ಅಸಂಖ್ಯಾತ ರಂಗಕರ್ಮಿಗಳನ್ನು ಜಾತಿ, ಮತ, ಭೇದವೆನಿಸದೆ ಪ್ರೋತ್ಸಾಹಿಸುತ್ತಿದ್ದರು. ಅವರ ಮೊದಲ ವರ್ಷದ ಪುಣ್ಯಸ್ಮರಣೆಗಾಗಿ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ನೀಡಲು ತಜ್ಞರ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ.
ಹೈದ್ರಾಬಾದ್ ಕರ್ನಾಟಕ ಭಾಗದ ರಂಗಾಸಕ್ತರು, ಹಿರಿಯ ರಂಗಕರ್ಮಿಗಳು ಹಾಗೂ ಸಾಹಿತಿಗಳು ಈ ಪ್ರಶಸ್ತಿಗೆ ಅರ್ಹವೆನಿಸಿರುವ ರಂಗಕರ್ಮಿಗಳ ಹೆಸರನ್ನು ಸೂಚಿಸಬೇಕೆಂದು ಸುಜಾತಾ ಜಂಗಮಶೆಟ್ಟಿ ಮನವಿ ಮಾಡಿದ್ದಾರೆ.
ಈ ರಂಗ ಪ್ರಶಸ್ತಿಗೆ ವೃತ್ತಿ ರಂಗಭೂಮಿ ಹಾಗೂ ಗ್ರಾಮೀಣ ಹವ್ಯಾಸಿ ರಂಗಭೂಮಿಯ ಕಲಾವಿದರು ಅರ್ಹರಾಗಿರುತ್ತಾರೆ ಎಂದರು. ಎಲ್‌ಬಿಕೆ ಆಲ್ದಾಳ ಆಯ್ಕೆ ಸಮಿತಿಯ ಅಧ್ಯಕ್ಷರು. ಈಶ್ವರಪ್ಪ ಫರಹತಾಬಾದ, ಪ್ರಭಾಕರ ಸಾತಖೇಡ, ವಜ್ರಕುಮಾರ ಕಿವಡೆ-ಸದಸ್ಯರು, ಮಹಿಪಾಲರೆಡ್ಡಿ ಮುನ್ನೂರ- ಪದನಿಮಿತ್ತ ಸದಸ್ಯರು, ಡಾ. ಸುಜಾತಾ ಜಂಗಮಶೆಟ್ಟಿ- ಸದಸ್ಯ ಕಾರ್ಯದರ್ಶಿ.
ಪ್ರಶಸ್ತಿ 10 ಸಾವಿರ ನಗದು, ಸ್ಮರಣಿಕೆ, ಫಲಕವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಗೆ ಸೂಚಿಸುವ ಹೆಸರು ಮತ್ತು ಸಮಗ್ರ ಮಾಹಿತಿಯನ್ನು ಜೂ.15ರೊಳಗೆ ಡಾ. ಸುಜಾತಾ ಜಂಗಮಶೆಟ್ಟಿ, ಕಾರ್ಯದರ್ಶಿ, ರಂಗಸಂಗಮ ಕಲಾ ವೇದಿಕೆ, ಮನೆ ನಂ.10-2/97, ಆನಂದ ನಗರ, ಎಸ್.ಬಿ. ಕಾಲೇಜ್ ರಸ್ತೆ, ಗುಲ್ಬರ್ಗ. ಇಲ್ಲಿಗೆ ಕಳುಹಿಸಿ. ಮಾಹಿತಿಗಾಗಿ 94804-09732ಗೆ ಸಂಪರ್ಕಿಸಬಹುದು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.