ಬಿಸಿಲಿನ ತಾಪ: ಕುಡಿವ ನೀರಿಗೆ ಹಾಹಾಕಾರ
ಕ.ಪ್ರ ವಾರ್ತೆ, ಶಿರಾಳಕೊಪ್ಪ, ಏ.2
ಏರುತ್ತಿರುವ ಬಿಸಿಲಿನ ತಾಪದಿಂದ ನಾಗರಿಕರು ಕುಡಿವ ನೀರಿಗೆ ಹಾತೊರೆಯುತ್ತಿದ್ದಾರೆ. ಶಿಕಾರಿಪುರದ ಕುಮುಧ್ವತಿ ನದಿ ನೀರಿನ ಪೈಪ್ಲೈನ್ ಮುಖಾಂತರ ಶಿರಾಳಕೊಪ್ಪಕ್ಕೆ ಬರುವ ನೀರನ್ನು ಪೈಪ್ ಒಡೆದು ಅಕ್ರಮವಾಗಿ ಬೇಸಿಗೆ ಬತ್ತದ ನಾಟಿಗೆ ಉಪಯೋಗಿಸುತ್ತಿರುವ ಘಟನೆ ನಡೆದಿದೆ.
ಶಿರಾಳಕೊಪ್ಪದಿಂದ ಶಿಕಾರಿಪುರಕ್ಕೆ ಹೋಗುವ ಮಾರ್ಗಮಧ್ಯೆ ಕೊಟ್ಟಕ್ರಾಸ್ ಬಳಿ ಇರುವ ಜಮೀನಿಗೆ ಕ್ರಾಸ್ ಬಳಿ ಇರುವ ವಾಲ್ವ್ ಛೇಂಬರ್ ಪಕ್ಕದ ಬಳಿ ಪೈಪ್ ಒಡೆದು ಅದರಿಂದ ಬರುವ ನೀರಿನಿಂದ ಬೇಸಿಗೆ ಬತ್ತದ ನಾಟಿ ಮಾಡಲಾಗಿದೆ.
ಮಾಲೀಕನಿಗೆ ಎಚ್ಚರ: ಕಳೆದ ವಾರ ಕ್ರಮ ಕೈಗೊಂಡು ಒಡೆದ ಪೈಪನ್ನು ರು. 25 ಸಾವಿರ ವೆಚ್ಚದಲ್ಲಿ ಸರಿಪಡಸಿ ಜಮೀನಿನ ಮಾಲೀಕನಿಗೆ ಎಚ್ಚರಿಕೆ ನೀಡಿ ದುರಸ್ತಿಪಡಿಸಿದ್ದಾರೆ.
ಆದರೆ ಸರಿಪಡಿಸಿ ಎರಡೇ ದಿನದಲ್ಲಿ ಬತ್ತ ನಾಟಿ ಮಾಡಿದ ಜಮೀನಿನವರು ಪುನಹ ಪೈಪ್ ಒಡೆದು ನಾಟಿ ಮಾಡಿದ ಜಮೀನಿಗೆ ನೀರು ಬಿಟ್ಟಿದ್ದಾರೆ.
ಇದರಿಂದ ಶಿರಾಳಕೊಪ್ಪ ಪಪಂ ಜಮೀನಿನ ಮಾಲಿಕರ ವಿರುದ್ಧ ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಅಧಿನಿಯಮ ಅಡಿಯಲ್ಲಿ ದುರಸ್ತಿ ವೆಚ್ಚ, ದಂಡದೊಂದಿಗೆ ಸಾರ್ವಜನಿಕರಿಗೆ ಪೂರೈಕೆ ಮಾಡುತ್ತಿರುವ ಕುಡಿವ ನೀರನ್ನು ಅಕ್ರಮವಾಗಿ ಪಡೆಯುತ್ತಿರುವ ಆರೋಪ ಮತ್ತು ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಶಿಕಾರಿಪುರ ಠಾಣೆಗೆ ದೂರು ನೀಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.
ಕುಡಿವ ನೀರಿನ ವ್ಯವಸ್ಥೆ: ಶಿರಾಳಕೊಪ್ಪದಲ್ಲಿ ಕೊಳವೆ ಬಾವಿಯಿಂದ ಕುಡಿವ ನೀರಿನ ವ್ಯವಸ್ಥೆಯನ್ನು ಇಲ್ಲಿನ ಪಪಂ ವ್ಯವಸ್ಥೆಗೊಳಿಸಿತ್ತು.
ಆದರೆ ಬೇಸಿಗೆಯಲ್ಲಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿ ಮೇಲಿಂದ ಮೇಲೆ ನೀರಿನ ಸಮಸ್ಯೆ ಎದುರಾಗುತ್ತಿದ್ದ ಸಂಗತಿಯನ್ನು ಅರಿತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಶಿಕಾರಿಪುರದಲ್ಲಿ ಹರಿಯುತ್ತಿರುವ ಕುಮದ್ವತಿ ನದಿಯಿಂದ ಜಾಕ್ವೆಲ್ ಪಂಪ್ಹೌಸ್ ಮೂಲಕ ಶಿರಾಳಕೊಪ್ಪ ಪಟ್ಟಣಕ್ಕೆ ರು. 10 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿದರು.
ಅಂದಿನಿಂದ ಶಿರಾಳಕೊಪ್ಪ ಪಟ್ಟಣದಲ್ಲಿ ಬೇಸಿಗೆಯಲ್ಲಿಯೂ ಉತ್ತಮ ಕುಡಿವ ನೀರನ್ನು ಕಲ್ಪಿಸಲಾಗುತ್ತಿದೆ. ಪಟ್ಟಣದಲ್ಲಿ ಶಾಶ್ವತ ವ್ಯವಸ್ಥೆ ಆಗಿ ನೀರಿನ ಸಮಸ್ಯೆ ಇಲ್ಲದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

