ಚುನಾವಣಾ ಅಕ್ರಮ: ಕಂಟ್ರೋಲ್ ರೂಂ ಸಂಪರ್ಕಿಸಿ
ಶಿವಮೊಗ್ಗ: ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ಯಾರು ಬೇಕಾದರೂ ದೂರು ನೀಡಬಹುದು. ದೂರವಾಣಿ ಮೂಲಕ ಕಂಟ್ರೋಲ್ ರೂಂ ಸಂಪರ್ಕಿಸಿ ದೂರು ನೀಡಿದರೆ ಇದಕ್ಕೆ ಸಂಬಂಧಿಸಿ ವಿಶೇಷ ಸಂಖ್ಯೆಯನ್ನು ನೀಡಲಾಗುತ್ತದೆ. ಇದರಿಂದ ದೂರಿನ ವಿಚಾರಣೆಯ ಪ್ರಗತಿ ದೊರೆಯುತ್ತದೆ.
ಇದಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಹಾಗೂ ಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಹೇಳಿದ್ದಾರೆ. 12 ರಿಂದ 15 ಬೂತ್ಗಳಿಗೆ ಒಬ್ಬರಂತೆ ಸೆಕ್ಟರಲ್ಮ್ಯಾಜಿಸ್ಟ್ರೇಟ್ಗಳನ್ನು ನೇಮಿಸಲಾಗಿದೆ. ಮತದಾನಕ್ಕಿಂತ ಮೂರು ದಿನ ಮುಂಚೆ ಇವರ ಕೆಲಸ ಆರಂಭವಾಗುತ್ತದೆ ಎಂದರು.
ಮತಪಟ್ಟಿ: ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏ.7 ಕೊನೆಯ ದಿನ. ನಂತರವೂ ಅರ್ಜಿ ಸ್ವೀಕರಿಸಲಾಗುತ್ತದೆ. ಆದರೆ ಮತಪಟ್ಟಿಗೆ ಅವರ ಹೆಸರು ಸೇರುವುದಿಲ್ಲ ಎಂದು ಜಿಲ್ಲಾಧಿಕಾರಿ ಬನ್ಸಾಲ್ ಹೇಳಿದರು.
ಜನವರಿಯಲ್ಲಿ ಮತಪಟ್ಟಿ ಸಿದ್ಧಗೊಂಡ ನಂತರ ಈವರೆಗೆ 37 ಸಾವಿರ ಅರ್ಜಿಗಳು ಹೆಸರು ಸೇರ್ಪಡೆಗಾಗಿ ಬಂದಿವೆ. ಇದರಲ್ಲಿ 33 ಸಾವಿರ ಅರ್ಜಿಗಳು ಸ್ವೀಕೃತಗೊಂಡಿದ್ದು, 2,500 ತಿರಸ್ಕೃತವಾಗಿವೆ. 2,300 ಅರ್ಜಿಗಳ ಪರಿಶೀಲನೆ ನಡೆದಿದೆ. ಹೆಸರು ಕೈಬಿಡುವುದಕ್ಕಾಗಿ 13 ಸಾವಿರ ಅರ್ಜಿಗಳು ಬಂದಿವೆ. ತಿದ್ದುಪಡಿಗಾಗಿ 12 ಸಾವಿರ ಅರ್ಜಿಗಳಿವೆ ಎಂದು ಅವರ ವಿವರಣೆ ನೀಡಿದರು.
ಮತದಾರರ ಹೆಸರು ಒಂದು ಕಡೆ ಮಾತ್ರ ಇರಬೇಕು. ಎರಡು ಕಡೆ ಹೆಸರು ಇದ್ದರೆ ಅದು ಶಿಕ್ಷಾರ್ಹ ಅಪರಾಧ. 6 ತಿಂಗಳು ಜೈಲು ಶಿಕ್ಷೆ ಆಗಬಹುದು ಎಂದರು.
ಕಂಟ್ರೋಲ್ ರೂಂ
ಜಿಲ್ಲಾಧಿಕಾರಿ ಕಚೇರಿ- 08182 220255
ಶಿವಮೊಗ್ಗ ಗ್ರಾಮಾಂತರ- 08182 279312
ಭದ್ರಾವತಿ- 08282 263466
ಶಿವಮೊಗ್ಗ- 08182 220588
ತೀರ್ಥಹಳ್ಳಿ- 08181 228120
ಶಿಕಾರಿಪುರ- 08187 222239
ಸೊರಬ- 08184 272241
ಸಾಗರ- 08183 226074
ಫ್ಲೆಕ್ಸ್ರಹಿತ ಚುನಾವಣೆ
ಈ ಬಾರಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಫ್ಲೆಕ್ಸ್ಗಳನ್ನು ಬಳಸುವುದಿಲ್ಲ ಎಂದು ಸ್ವಯಂನಿಯಂತ್ರಣ ಹಾಕಿಕೊಂಡಿವೆ.
ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಬನ್ಸಾಲ್, ಹಾಕಬಾರದೆಂದು ಕಡ್ಡಾವಿಲ್ಲ. ಆದರೆ ರಾಜಕೀಯ ಪಕ್ಷಗಳೇ ಹಾಕುವುದಿಲ್ಲ ಎಂದು ಹೇಳಿವೆ, ಅಭ್ಯರ್ಥಿಗಳು ಖಾಸಗಿ ಕಾಯಕ್ರಮಗಳಿಗೆ ಹೋಗಿ ಮತ ಯಾಚನೆ ಮಾಡಬಹುದು. ಆದರೆ ಹಣ ನೆರವು ನೀಡುವಂತಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

