ಶಿವಮೊಗ್ಗ

ಆದಾಯ ತೆರಿಗೆ ಪ್ರಾಮಾಣಿಕತೆಯಿಂದ ಪಾವತಿಸಿ

Published On :

ಕ.ಪ್ರ ವಾರ್ತೆ, ಶಿವಮೊಗ್ಗ, ಏ.5
ಭಾರತ ಜಾಗತೀಕರಣದ ಆರ್ಥಿಕ ವ್ಯವಸ್ಥೆ ಮೇಲೆ ನಿಂತಿದೆ. ಇದು ಮತ್ತಷ್ಟು ಬಲಿಷ್ಟವಾಗಬೇಕಾದರೆ ಆದಾಯ  ತೆರಿಗೆಯನ್ನು ಪ್ರತಿಯೊಬ್ಬ ನಾಗರಿಕ ಪ್ರಾಮಾಣಿಕತೆಯಿಂದ ಪಾವತಿಸಬೇಕು ಎಂದು ಹುಬ್ಬಳ್ಳಿಯ ಆದಾಯ ತೆರಿಗೆ ಇಲಾಖೆ ಆಯುಕ್ತ ಬಿ.ಎನ್. ಮೀನಾ ಹೇಳಿದರು.
ಆದಾಯ ತೆರಿಗೆ ಇಲಾಖೆ ಶುಕ್ರವಾರ ಆಯೋಜಿಸಿದ್ದ ಆಯಕರ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಾಗತೀಕರಣದ ಆರ್ಥಿಕತೆಯಲ್ಲಿ ಸುಧಾರಣೆ ತರುವುದು ಅವಶ್ಯ. ಆದಾಯ ತೆರಿಗೆ  ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಿದೆ. ಅದರೊಂದಿಗೆ ಸಾರ್ವಜನಿಕರು ಸಹ ಸಹಕರಿಸಬೇಕು ಎಂದರು.
ಹುಬ್ಬಳ್ಳಿಯ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಎಸ್.ಕೆ. ಮಿಶ್ರ ಮಾತನಾಡಿ, ಆಯಕರ ಸೇವಾ ಕೇಂದ್ರ ಅಧುನಿಕ ಕೇಂದ್ರವಾಗಿದೆ. ಇಲ್ಲಿ ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸೌಲಭ್ಯಗಳನ್ನು  ಪಡೆಯಬಹುದು. ಇದರಲ್ಲಿ ಐ ಟ್ಯಾಕ್ಸ್‌ನೆಟ್ ಎಂಬ ತಂತ್ರಾಂಶ ಅಳವಡಿಸಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ತೆರಿಗೆ ಪಾವತಿ ಮಾಡುವಾಗ ಇದ್ದ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ತಿಳಿಸಿದರು.
ಈ ವ್ಯವಸ್ಥೆ ಕೇಂದ್ರ ಸರ್ಕಾರದ ನಾಗರಿಕ ಸನ್ನದು ಅಡಿಯಲ್ಲಿ ಸೇವೆ ಮಾಡಲಿದೆ. ಈ ತಂತ್ರಾಂಶದ ಬಗ್ಗೆ  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದರು.
ಮೊದಲ ಸ್ಥಾನ: ದಾವಣಗೆರೆ ವಿಭಾಗದ ಆದಾಯ ತೆರಿಗೆ ಇಲಾಖೆ ಆಯುಕ್ತ ಎಸ್. ರಾಧಾಕೃಷ್ಣ ಮಾತನಾಡಿ, ಶಿವಮೊಗ್ಗ ಕಳೆದ  ವರ್ಷದ ಅಭಿವೃದ್ಧಿ ದರದಲ್ಲಿ ಶೇ.16ರಷ್ಟು ಏರಿಕೆಯಾಗಿದೆ. ಅದೇ ರೀತಿ ದಾವಣಗೆರೆಯ ವಿಭಾಗ ಶೇ.47ರಷ್ಟು  ಅಭಿವೃದ್ಧಿ ದರವನ್ನು ಏರಿಕೆ ಮಾಡಿ ದೇಶದಲ್ಲೇ ದಾಖಲೆ ನಿರ್ಮಿಸುವುದರೊಂದಿಗೆ ಮೊದಲ ಸ್ಥಾನದಲ್ಲಿದೆ ಎಂದರು.
ಆದಾಯ ತೆರಿಗೆ ಇಲಾಖೆಯ(ಶಿವಮೊಗ್ಗ ಶಾಖೆ) ಜಂಟಿ ಆಯುಕ್ತ ಆರ್. ದೊರೈಪಾಂಡಿಯನ್ ಮಾತನಾಡಿ, ಪ್ರತಿಯೊಂದು ಕುಟುಂಬಕ್ಕೆ ಆದಾಯ ಎಂಬುದು ಮುಖ್ಯ. ಅದೇ ರೀತಿ ಆದಾಯ ತೆರಿಗೆಯನ್ನು ಪ್ರಮಾಣಿಕವಾಗಿ ಪಾವತಿ ಮಾಡುವುದು ಅಷ್ಟೇ ಮುಖ್ಯ ಎಂದರು.
ಬಹಳಷ್ಟು ಜನ ತೆರಿಗೆ ಪಾವತಿ ಮಾಡಲು ಹಿಂಜರಿಯುತ್ತಿದ್ದಾರೆ. ಇದು ತಪ್ಪು. ಆದಾಯ ತೆರಿಗೆ ಪಾವತಿ  ಪ್ರತಿಯೊಬ್ಬರಿಗೂ ಕಡ್ಡಾಯ. ಪ್ರತಿ ವರ್ಷ ನಿಮ್ಮ ಆದಾಯದ ಶೇಕಡ ಪ್ರಮಾಣದ ಆದಾಯ ತೆರಿಗೆಯನ್ನು  ಪಾವತಿ ಮಾಡಬೇಕು. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ನಗರದ ವಿವಿಧ ಬ್ಯಾಂಕ್‌ನ ವ್ಯವಸ್ಥಾಪಕರು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.