ವೃತ್ತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಶಿವಮೊಗ್ಗ: ಅಖಿಲ ಭಾರತ ವೃತ್ತಿ ಪರೀಕ್ಷೆ (ಎಟಿಎಸ್) ಏಪ್ರಿಲ್ 23ರಿಂದ ಮೇ 1ರವರೆಗೆ ನಡೆಯಲಿದ್ದು, ಪರೀಕ್ಷಾರ್ಥಿಗಳು ಮಾಹಿತಿಗಾಗಿ ದೂ-08282 2266316ನ್ನು ಸಂಪರ್ಕಿಸುವಂತೆ ಸರ್ಕಾರಿ ಭದ್ರಾವತಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ತಿಳಿಸಿದ್ದಾರೆ.
ಎಸ್ಸಿ ಮೋರ್ಚಾಕ್ಕೆ ತಿಪ್ಪೇಶ್ ನೇಮಕ
ಶಿವಮೊಗ್ಗ: ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಆನವೇರಿಯ ತಿಪ್ಪೇಶ್ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ನೇಮಕ ಮಾಡಿದ್ದಾರೆ. ಅದೇ ರೀತಿ ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ಅಧ್ಯಕ್ಷರಾಗಿ ಕೊಪ್ಪಲು ಮಂಜುನಾಥ್, ಉಪಾಧ್ಯಕ್ಷರಾಗಿ ನಾಗನಗೌಡ ಮುಳಕೊಪ್ಪ, ನೂರ್ ಅಹ್ಮದ್ ಬಳ್ಳಿಗಾವಿ, ಪ್ರೇಮಾ ಚಂದ್ರಶೇಖರಪ್ಪ ಶಿಕಾರಿಪುರ, ಎನ್.ಸಿ. ಬಸವರಾಜಪ್ಪ ಹಳೇಗೊದ್ದನಕೊಪ್ಪ, ವಿ. ಚಂದ್ರಪ್ಪ ಅರಿಶಿಣಗೆರೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ಕುಲಕರ್ಣಿ ಮುತ್ತಗಿ, ಗಿರೀಶ್ ಧಾರವಾಡ್, ಕಾರ್ಯದರ್ಶಿಯಾಗಿ ಮುರುಗೇಶಪ್ಪ ಕಣಸೋಗಿ, ಗಣೇಶಪ್ಪ ಗಾಮ, ಮಂಜಪ್ಪ ಮಲ್ಲೇನಹಳ್ಳಿ, ರಾಮಾನಾಯ್ಕ ದೊಡ್ಡಜೋಗಿಹಳ್ಳಿ, ಶಶಿಕಲಾ ಶಿರಾಳಕೊಪ್ಪ ಅವರನ್ನು ನೇಮಿಸಲಾಗಿದೆ. ಖಜಾಂಚಿಯಾಗಿ ರುದ್ರಗೌಡ ಸುಣ್ಣದಕೊಪ್ಪ ಆಯ್ಕೆಯಾಗಿದ್ದಾರೆ. ಚಂದ್ರಪ್ಪ, ನಾರಾಯಣ ರಾವ್, ಶೇಖರಯ್ಯ, ರಾಮಪ್ಪ, ಪಂಚಾಕ್ಷರಯ್ಯ, ತಿಮ್ಮಣ್ಣ, ನಾಗರಾಜ್, ಶಿವಕುಮಾರ್, ಚಂದ್ರಪ್ಪ, ಮಂಜಪ್ಪ, ಪುನೀತ್, ನಾಗರಾಜ್, ಬಸವರಾಜಪ್ಪ, ವೀರೇಶ್, ಗೋವರ್ಧನರಾವ್, ಬಸವರಾಜ್, ದಾದಾಪೀರ್ ಸದಸ್ಯರಾಗಿದ್ದಾರೆ.
ನೆರವು ನೀಡುವುದೇ ರೋಟರಿ ಧ್ಯೇಯ
ಶಿವಮೊಗ್ಗ: ಕಷ್ಟದಲ್ಲಿರುವವರಿಗೆ ನೆರವು ನೀಡುವುದೇ ರೋಟರಿ ಸಂಸ್ಥೆಯ ಉದ್ದೇಶ ಎಂದು ರೋಟರಿ ಉತ್ತರ ಘಟಕದ ಅಧ್ಯಕ್ಷ ಎನ್. ಮಂಜುನಾಥ್ ಹೇಳಿದ್ದಾರೆ. ರೋಟರಿ ಉತ್ತರ ಹಾಗೂ ಇನ್ನರ್ವೀಲ್ ಕ್ಲಬ್ವತಿಯಿಂದ ಗರ್ಭಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ, ಬಡತನದಲ್ಲಿರುವ ಬೊಮ್ಮನಕಟ್ಟೆಯ ಗಿರಿಜಮ್ಮನವರಿಗೆ ಆರ್ಥಿಕ ನೆರವು ನೀಡಿ ಮಾತನಾಡಿದರು.ನಮ್ಮ ಕೈಲಾದ ಮಟ್ಟಿಗೆ ಸಮಾಜದ ಜೊತೆಗೆ ಸೇವೆ ಮಾಡುವುದರ ಮುಖಾಂತರ ಸಾರ್ಥಕತೆ ಕಂಡುಕೊಳ್ಳಬೇಕೆಂದರು. ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಸುಗಂಧಿ ಮಂಜುನಾಥ್, ಮಾಜಿ ಅಧ್ಯಕ್ಷೆ ಹೇಮಾ ಸತೀಶ್,ಕಾವ್ಯ ಸತೀಶ್, ಜಿ. ವಿಜಯಕುಮಾರ್ ಉಪಸ್ಥಿತರಿದ್ದರು.
---
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

