ಶಿವಮೊಗ್ಗ

ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಸಾಧ್ಯತೆ

Published On :

ಕ.ಪ್ರ ವಾರ್ತೆ, ಹೊಸನಗರ, ಏ.7
1977ರ ನಂತರ ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣ ಆಗುವ ಕಾಲ ಸನ್ನಿಹಿತವಾಗಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ನಗರ ಪಂಚಮುಖಿ ದೇಗುಲದ ಸಮೀಪದಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ, ರಾಜ್ಯದ ಜನತೆಗೆ ಹಲವಾರು ಜನಪರ ಯೋಜನೆಗಳನ್ನು ನೀಡುವ ಮೂಲಕ ಪ್ರಭಾವಿ ಜನನಾಯಕರಾಗಿ ಹೊಮ್ಮಿದ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸೀಮಿತವಾಗದಿರಲಿ: ತೀರ್ಥಹಳ್ಳಿ ರಾಜ್ಯದಲ್ಲೇ ವಿಶಿಷ್ಠ ಕ್ಷೇತ್ರವಾಗಿದ್ದು, ಕಳೆದ 2 ದಶಕದಿಂದ ಇಬ್ಬರು ವ್ಯಕ್ತಿಗಳು ಮತ್ತು ಅವರ ವಾಕ್ಸಮರಕ್ಕೆ ಮಾತ್ರ ಸೀಮಿತವಾಗುತ್ತಿರುವುದು ದುರಂತ ಎಂದು ಹಾಲಿ ಶಾಸಕ ಕಿಮ್ಮನೆ, ಮಾಜಿ ಶಾಸಕ ಆರಗ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಸದನಕ್ಕೆ ಹೋಗಿ ತಮ್ಮ ಟಿಎಡಿಎ ಏರಿಸಿಕೊಳ್ಳಲು ಮತ್ತು ಪಿಎಸ್‌ಐ ವಿರುದ್ಧ ಪಾದಯಾತ್ರೆ ನಡೆಸಲು ಮುಂದಾದ ಶಾಸಕರು ನಮಗೆ ಬೇಕೆ. ಮಾತೆತ್ತಿದರೆ ಶಾಂತವೇರಿ ಗೋಪಾಲಗೌಡ ಬಗ್ಗೆ ಮಾತನಾಡುವ ಇವರು ಅವರ ಸಂದೇಶವನ್ನು ಎಷ್ಟರಮಟ್ಟಿಗೆ ಪಾಲಿಸಿದ್ದಾರೆ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಿಂದ ನೂರಾರು ಕಾರ್ಯಕರ್ತರು ಕೆಜೆಪಿ ಸೇರ್ಪಡೆಗೊಂಡರು.
ತಾಲೂಕು ಕೆಜೆಪಿ ಅಧ್ಯಕ್ಷ ಬಿ. ಯುವರಾಜ್, ಪ್ರಮುಖರಾದ ಮಣಿ ಹೆಗ್ಡೆ, ಎನ್.ಆರ್. ದೇವಾನಂದ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ದೊಡ್ಲೆಪಾಲ್ ಚಂದ್ರಶೇಖರ್, ವಾಟಗೋಡು ಸುರೇಶ, ಗಾಯತ್ರಿ ಮಲ್ಲಪ್ಪ, ಸುಷ್ಮಾ ಸಂಜಯ್, ನಳಿನಿ, ಲೀಲಕೃಷ್ಣ, ಡಿ.ಟಿ. ಸತ್ಯನಾರಾಯಣ, ಗುರುಶಕ್ತಿ ವಿದ್ಯಾಧರ್, ಗುರುಶಂಕರ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.