ಶಿವಮೊಗ್ಗ

ನಾಮಪತ್ರ ಸ್ವೀಕರಿಸಲು ಕಚೇರಿ ಸಿದ್ಧ

Published On :

ಕ.ಪ್ರ.ವಾರ್ತೆ, ಸಾಗರ, ಏ.9 ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಏ.10ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಕ್ಷೇತ್ರದ ನಾಮಪತ್ರ ಸ್ವೀಕಾರಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಎಲ್ಲ ಸಿದ್ಧತೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ.ಬಿ. ಉದಯಕುಮಾರ್ ಶೆಟ್ಟಿ ಹೇಳಿದರು.
   ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸನಗರದ 2 ಹೋಬಳಿ ಸೇರಿದಂತೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 86,979 ಪುರುಷ ಮತ್ತು 86,661 ಮಹಿಳಾ ಮತದಾರರಿದ್ದು, 236 ಮತಗಟ್ಟೆ ನಿರ್ವಹಣೆಗೆ ಸಿದ್ಧತೆ ನಡೆದಿದೆ ಎಂದರು.
  ಇದರಲ್ಲಿ 79 ಸೂಕ್ಷ್ಮ, 21 ಅತಿಸೂಕ್ಷ್ಮ ಹಾಗೂ 17 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಒಟ್ಟು ಏಳು ಸೆಕ್ಟರಲ್ ಮ್ಯಾಜಿಸ್ಟ್ರೇಟ್‌ಗಳನ್ನು ಕ್ಷೇತ್ರ ನಿರ್ವಹಣೆಗಾಗಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಂಟ್ರೋಲ್ ರೂಂ: ಸಾಗರ ಹಾಗೂ ಹೊಸನಗರ ತಾಲೂಕು ಕಚೇರಿಯಲ್ಲಿ ತಲಾ ಒಂದು ಕಂಟ್ರೋಲ್ ರೂಂ ತೆರೆಯಲಾಗಿದ್ದು, ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಇಲ್ಲಿ ದಾಖಲಿಸಬಹುದು. ಎರಡೂ ಕಂಟ್ರೋಲ್ ರೂಂ ಹಗಲೂ ರಾತ್ರಿ ಕಾರ್ಯನಿರ್ವಹಿಸಲಿದ್ದು, ಸಾಗರದಲ್ಲಿ ದೂರವಾಣಿ 08183-229444, 948094622 ಮತ್ತು ಹೊಸನಗರದಲ್ಲಿ 08185-221125 ವಿಶೇಷವಾಗಿ ಅಳವಡಿಸಲಾಗಿದೆ.
 ಹಾಗೆಯೇ ಕ್ಷೇತ್ರದ ಗುಡ್ಡೇಕೌತಿ, ಗಡಿಕಟ್ಟೆ, ನಾಗೋಡಿ, ಚೂರಿಕಟ್ಟೆ ಹೀಗೆ ವಿವಿಧೆಡೆ ಆರು ಚೆಕ್‌ಪೋಸ್ಟ್‌ಗಳಿದ್ದು ವಾಹನ ತಪಾಸಣೆ, ಹಣ, ಮದ್ಯ ಸಾಗಾಟಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.
ವೀಡಿಯೋ ಚಿತ್ರೀಕರಣ: ಚುನಾವಣೆ ಅಕ್ರಮ ತಡೆಗಟ್ಟಲು ಕ್ಷೇತ್ರದಲ್ಲಿ ವಿಡೀಯೋ ಚಿತ್ರೀಕರಣ ಮತ್ತು ಅವುಗಳ ವೀಕ್ಷಣೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ಒಟ್ಟಾರೆ ಕಟ್ಟುನಿಟ್ಟಿನ ನಿಯಮ ಪಾಲನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
 ಚುನಾವಣಾ ಅಯೋಗದ ಸೂಚನೆ ಮೇರೆಗೆ ಆಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಹಾಗೂ ಪರಿಶೀಲನೆಗೆ ಆಗಮಿಸುವವರಿಗೂ ಮಿತಿ ಹೇರಲಾಗಿದೆ. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅಭ್ಯರ್ಥಿ ಸೇರಿದಂತೆ ಗರಿಷ್ಠ  ಐವರು ಹಾಗೂ ಪರಿಶೀಲನೆಯ ಸಂದರ್ಭದಲ್ಲಿ ಅಭ್ಯರ್ಥಿ ಸೇರಿದಂತೆ ಗರಿಷ್ಠ ನಾಲ್ವರು ಮಾತ್ರ ಇರಬಹುದು ಎಂದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.