15ರಂದು ರುದ್ರೇಗೌಡ ನಾಮಪತ್ರ ಸಲ್ಲಿಕೆ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.10
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್. ರುದ್ರೇಗೌಡರು ಏ.15ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಅಂದು ಬೆಳಗ್ಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಳದಲ್ಲಿ ಪೂಜೆ ಸಲ್ಲಿಸಿ ಗಾಂಧಿಬಜಾರ್,ನಿಂದ ಅಮೀರ್ ಅಹಮದ್ ವೃತ್ತ, ನೆಹರು ರಸ್ತೆ, ಗೋಪಿವೃತ್ತ, ಜೈಲ್ ವೃತ್ತ ನಂಜಪ್ಪ ಆಸ್ಪತ್ರೆ, ಪಾರ್ಕ್ ಬಡಾವಣೆ ಮೂಲಕ ನಗರಸಭೆ ತಲುಪಿ ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಶಿಗಳು ಪಾಲ್ಗೊಳ್ಳುವಂತೆ ಪಕ್ಷ ಕೋರಿದೆ.
ಬಷೀರ್ ಅಹ್ಮದ್ ಅಭ್ಯರ್ಥಿ
ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಯಾಗಿ ನಿವೃತ್ತ ಎಂಜಿನಿಯರ್ ಕೆ.ಬಿ. ಬಷೀರ್ ಅಹ್ಮದ್ ಸ್ಪರ್ಧಿಸಲಿದ್ದಾರೆ ಎಂದು ಕ್ಷೇತ್ರ ಚುನಾವಣಾ ಸಮಿತಿ ಅಧ್ಯಕ್ಷ ಅಬ್ಬುಲ್ ಮಜೀದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 9 ವಾರ್ಡ್,ಗಳಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳಲ್ಲಿ ಒಬ್ಬರು ವಿಜೇತರಾಗಿದ್ದಾರೆ. ಅಲ್ಲದೇ, 4500 ಮತಗಳು ಬಂದಿದ್ದು, 2 ವಾರ್ಡ್‌ಗಳಲ್ಲಿ 2ನೇ ಸ್ಥಾನ, 1 ವಾರ್ಡ್‌ನಲ್ಲಿ 3 ನೇ ಸ್ಥಾನ ಬಂದಿದೆ ಎಂದು ವಿವರಿಸಿದರು.
ಬಿಎಸ್‌ಆರ್ ಕಾಂಗ್ರೆಸ್‌ಗಿಂತಲೂ ಎಸ್‌ಡಿಪಿಐ ಪ್ರಬಲವಾಗಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ಮುಸ್ಲಿಂ, ದಲಿತರು ಹಾಗೂ ಹಿಂದುಳಿದ ವರ್ಗದವರು ದೊಡ್ಡ ಸಂಖ್ಯೆಯಲ್ಲಿದ್ದರೂ ಯಾವುದೇ ಪಕ್ಷ ಈ ಸಮುದಾಯಗಳಿಗೆ ಟಿಕೆಟ್ ನೀಡದಿರುವುದು ವಿಷಾದನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಬಿ. ಬಷೀರ್ ಅಹಮದ್, ಜಿಲ್ಲಾಧ್ಯಕ್ಷ ಎಂ. ಬಾಲಸುಬ್ರಹ್ಮಣ್ಯಂ, ಅಲ್ಲಾಭಕ್ಷಿ, ವೆಂಕಟೇಶ್ ಮತ್ತಿತರರು ಇದ್ದರು.
ಸ್ಪಷ್ಟ ಮಾಹಿತಿಗೆ ಒತ್ತಾಯ
ಮುಂಬರುವ ಚುನಾವಣಾ ನೀತಿ ಸಂಹಿತೆಗಳ ಪಾಲನಾ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ತೀವ್ರ ಗೊಂದಲ ಉಂಟಾಗಿದ್ದು, ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ನೀತಿ ಸಂಹಿತೆ ಅರ್ಥೈಸುವಿಕೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಅಶೋಕ ಜಿ. ಭಟ್ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಹೆಚ್ಚಿನ ಮಹತ್ವವಿದೆ ಎಂಬುದು ಎಲ್ಲರಿಗೆ ತಿಳಿದ ವಿಷಯ. ತಮ್ಮ ಜನಪ್ರತಿನಿಧಿಗಳು ಯಾರಾಗಬೇಕು ಎಂದು ಚರ್ಚಿಸಿ ನಿರ್ಣಯ ಕೈಗೊಳ್ಳುವುದು ವೈಯಕ್ತಿಕ ಹಾಗೂ ಸಾರ್ವಜನಿಕರ ಕರ್ತವ್ಯವಾಗಿದೆ.
ಒಂದು ಕಡೆ ಚುನಾವಣೆ ಕುರಿತಾದ ಸಭೆ ಸಮಾರಂಭಗಳು ನಡೆಯಲೇಬೇಕಾಗುತ್ತವೆ. ಇನ್ನೊಂದೆಡೆ ವಿವಾಹ, ಉಪನಯನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ನೇಹ ಮಿಲನ, ಶೈಕ್ಷಣಿಕ ಸಂಬಂಧಿ ವಿಷಯಗಳ ಕುರಿತು ಸಭೆ-ಸಮಾರಂಭ ನಡೆಸಬೇಕಾಗಿರುವುದೂ ಅನಿವಾರ್ಯವಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಈಗಿನ ಅಸ್ಪಷ್ಟ ಚುನಾವಣಾ ನೀತಿ ಸಂಹಿತೆ ಸಾರ್ವಜನಿಕರನ್ನು ಗೊಂದಲಕ್ಕೆ ನೂಕಿದೆ ಎಂದವರು ತಿಳಿಸಿದ್ದಾರೆ.
ರಾಜಕೀಯೇತರ ಕಾರ್ಯಕ್ರಮಗಳನ್ನು ತಾವು ಆಯೋಜಿಸುವುದಾಗಿ ಸಂಬಂಧಿಸಿದ ಚುನಾವಣಾ ಅಧಿಕಾರಿಯವರಿಂದ ಪರವಾನಗಿ ಪಡೆದು ಕಾರ್ಯಕ್ರಮ ಆಯೋಜಿಸಿದಾಗ ಆಗಮಿಸಿದವರಿಗೆ ಚಹಾ, ಕಾಫಿ, ತಿಂಡಿ, ಲಘು ಉಪಹಾರಗಳನ್ನು ನೀಡಿ ಆತಿಥ್ಯ ನೀಡುವುದು ದೇಶದ ಸಂಪ್ರದಾಯ.
ಈ ರೀತಿ ಮಾಡಿದರೆ ಚುನಾವಣಾ ಆಯೋಗದ ಸಿಬ್ಬಂದಿ ಧಿಡೀರ್ ಸ್ಥಳಕ್ಕೆ ಧಾವಿಸಿ ಅಲ್ಲಿರುವ ಪಾತ್ರೆ- ಪಗದಿ, ಅಡುಗೆ ಸಾಮಾನು ಸರಂಜಾಮುಗಳನ್ನು ವಶಪಡಿಸಿಕೊಂಡು ಹೋಗಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದು ರಾಜಕೀಯ ಸಭೆ, ಯಾವುದು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಭೆ ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟ ಪಟ್ಟಿ ಮಾಡಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವುದು ತುರ್ತು ಅವಶ್ಯ ಸಂಗತಿಯಾಗಿದೆ ಎಂದು ಅಶೋಕ ಭಟ್ ಪ್ರತಿಪಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

