ಪ್ರಶಿಕ್ಷಣಾರ್ಥಿಗಳ ಪೌರತ್ವ ತರಬೇತಿ ಶಿಬಿರ
ಶಿವಮೊಗ್ಗ: ಜಿಲ್ಲಾ ಒಕ್ಕಲಿಗ ಸಂಘ (ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ) ಏ.14ರಿಂದ 16 ರವರೆಗೆ ಬೀರನಕೆರೆಯ ಮುಪ್ಪಿನಾರ್ಯ ಆಶ್ರಮದಲ್ಲಿ ಬಿಇಡಿ ಪ್ರಶಿಕ್ಷಣಾರ್ಥಿಗಳ ಪೌರತ್ವ ತರಬೇತಿ ಶಿಬಿರ ಏರ್ಪಡಿಸಿದೆ. 14ರಂದು ಬೆಳಗ್ಗೆ 9.15ಕ್ಕೆ, ಸಾನ್ನಿಧ್ಯವನ್ನು ಆಶ್ರಮದ ಶ್ರೀ ಗುರು ಬಸವರಾಜ್ ದೇಶೀಕೇಂದ್ರ ಶ್ರೀ ವಹಿಸಲಿದ್ದು, ಇದೇ ವೇಳೆ ವಿಶೇಷ ಉಪನ್ಯಾಸ ಕಾರ್ಯಕ್ರಮವಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಸ್. ಕುಮಾರ್ ರಾಷ್ಟ್ರ ಕಟ್ಟುವಲ್ಲಿ ಯುವ ಜನತೆಯ ಪಾತ್ರ, ಪತ್ರಕರ್ತ ಎಂ.ಎ. ಜಗದೀಶ್ ಸಂಪಳ್ಳಿಯವರು ಯವಜನತೆ ಮತ್ತು ಸಮೂಹ ಮಾಧ್ಯಮಗಳು ವಿಷಯ ಕುರಿತಂತೆ ಉಪನ್ಯಾಸ ನೀಡುವರು.
ಮುಖ್ಯ ಅತಿಥಿಯಾಗಿ ಸಂಘದ ನಿರ್ದೇಶಕ ಬಿ.ವಿ. ಶಾಮಯ್ಯ, ಬಿ.ಎಂ. ಸುಂದರೇಶ್, ಕೆ.ಎಸ್. ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಪ್ರೊ. ಟಿ.ಎಸ್. ಹೂವಯ್ಯಗೌಡ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಾಹಾವಿದ್ಯಾಲಯ ಪ್ರಾಂಶುಪಾಲರಾದ ಜೆ. ಶಾಲಿನಿ, ಸಂಘದ ಅಧ್ಯಕ್ಷ ಪ್ರೊ. ಜಿ.ಎಲ್. ಪದ್ಮನಾಭ್ ಉಪಸ್ಥಿತರಿರುವರು.
ಮಧ್ಯಾಹ್ನ 2.30ಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಡಾ.ವಿ.ಎಲ್.ಎಸ್. ಕುಮಾರ್ ಪ್ರಕೃತಿ ವಿಕೋಪಗಳ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ವಿಷಯ ಕುರಿತಂತೆ ಉಪನ್ಯಾಸ ನೀಡುವರು. ಸಂಜೆ 6ರಿಂದ ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
15ರಂದು ಬೆಳಗ್ಗೆ 9ರಿಂದ 10.30ರವರೆಗೆ ಪ್ರಶಿಕ್ಷಣಾರ್ಥಿಗಳಿಂದ ಗ್ರಾಮೀಣ ಸಮೀಕ್ಷೆ, 11ಗಂಟೆಯಿಂದ ನಿವೃತ್ತ ವಿಷಯ ಪರಿವೀಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಹನುಮಾನ್ ಹಾಗೂ ಶಿಕ್ಷಣ ಇಲಾಖೆ ನಿವೃತ್ತ ಮುಖ್ಯೋಪಾಧ್ಯಾಯ ಮೊಹಮ್ಮದ್ ಸಮೀಉಲ್ಲಾ ನಾಗರಿಕ ಜೀವನದಲ್ಲಿನ ಮೌಲ್ಯಗಳು ಬಗ್ಗೆ ಉಪನ್ಯಾಸ, 2.30ಕ್ಕೆ ರಂಗಕರ್ಮಿ ಬಿ.ಆರ್. ರೇಣುಕಪ್ಪ ಅವರು ಶಿಕ್ಷಣದಲ್ಲಿ ರಂಗ ಕಲೆ ವಿಷಯದ ಬಗ್ಗೆ ಉಪನ್ಯಾಸ, ಕಾರ್ಯಕ್ರಮದಲ್ಲಿ ಸಂಘದ ಸಹಕಾರ್ಯದರ್ಶಿ ಎಂ.ಎ. ರಮೇಶ್ ಹೆಗ್ಡೆ, ಸಂಘದ ನಿರ್ದೇಶಕ ಕಡ್ತೂರ್ ಮೋಹನ್, ಕೆ.ಎಂ. ಗೋಪಾಲಗೌಡ, ಡಾ.ಎಂ.ಸಿ. ಅನಿಲ್ ಉಪಸ್ಥಿತರಿರುವರು. 16ರಂದು ಬೆಳಗ್ಗೆ 8.30ರಿಂದ 10.30ರವರೆಗೆ ಶಿಬಿರಾರ್ಥಿಗಳ ಶ್ರಮದಾನ, 11ಕ್ಕೆ ವ್ಯಕ್ತಿತ್ವ ವಿಕಸನ ಮತ್ತು ಹೊಂದಾಣಿಕೆ ವಿಷಯ ಕುರಿತು ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ರಾಮಪ್ರಸಾದ್ ಉಪನ್ಯಾಸ, ಮುಖ್ಯ ಅತಿಥಿಯಾಗಿ ಸಂಘದ ನಿರ್ದೇಶಕರು ಉಪಸ್ಥಿತರಿರುವರು. ಮಧ್ಯಾಹ್ನ 2.30ಕ್ಕೆ ಸಮಾರೋಪ ಹಾಗೂ ರಾಷ್ಟ್ರೀಯ ಕಾನೂನು ಕಾಲೇಜು ಪ್ರಾಂಶುಪಾಲ ಡಾ. ಜಗದೀಶ ಮಾನವ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ಚಂದ್ರಶೇಖರಯ್ಯ ಹಾಗೂ ಸಂಘದ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

