ರಾಮೋತ್ಸವ: ಇಂದು ಶ್ರೀಗಳ ಪುರಪ್ರವೇಶ
ಕ.ಪ್ರ ವಾರ್ತೆ, ಹೊಸನಗರ, ಏ.12
ತಾಲೂಕಿನ ಪ್ರಸಿದ್ಧ ರಾಮಚಂದ್ರಾಪುರಮಠದಲ್ಲಿ ಈ ಬಾರಿಯ ರಾಮೋತ್ಸವವನ್ನು ವಿಶೇಷವಾಗಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಏ.3ರ ಸಂಜೆ ರಾಘವೇಶ್ವರ ಸ್ವಾಮೀಜಿಗಳು ಪುರಪ್ರವೇಶ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎಂದು ರಾಮೋತ್ಸವ ನಿರ್ವಹಣಾ ಸಮಿತಿ ಅಧ್ಯಕ್ಷ ಸಂಪೇಕಟ್ಟೆ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏ.23ರಂದು ಶ್ರೀಗಳಿಗೆ ಅಡಕೆ ತುಲಾಭಾರ, ಅಡ್ಡಪಲ್ಲಕ್ಕಿ ಉತ್ಸವ, ಕಿರಿಟೋತ್ಸವ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀಗಳು ದಂತ ಸಿಂಹಾಸನಾರೋಹಣ ಮಾಡಲಿದ್ದಾರೆ ಎಂದರು.
5 ವರ್ಷಗಳ ಹಿಂದೆ ಶ್ರೀಮಠದಲ್ಲಿ ಕಿರೀಟೋತ್ಸವ ನಡೆದಿತ್ತು. ಈ ಬಾರಿ ರಾಮೋತ್ಸವ ಮುಕ್ತಾಯದ ನಂತರ ಈ ವಿಶೇಷ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಮಹಾಮಂಡಲದಿಂದ ವಿವಿಧ ಸೇವೆಗಳು ಸಂಪನ್ನಗೊಳ್ಳಲಿದೆ ಎಂದರು.
ಪ್ರಶಸ್ತಿ ಪ್ರದಾನ: ರಾಮೋತ್ಸವದಲ್ಲಿ ವಿಶೇಷ ಶ್ರೀರಾಮಕಥಾ ವೈಭವ ಏ.14ರಿಂದ 18ರವರೆಗೆ ಸಂಜೆ ನಡೆಯಲಿದೆ. ಏ.19ಶ್ರೀಮಠದಲ್ಲಿ ಪ್ರತಿವರ್ಷ ಕೊಡಮಾಡುವ ಶ್ರೀಮಾತಾ ಮತ್ತು ಪುರುಷೋತ್ತಮ ಪ್ರಶಸ್ತಿ, ಏ.20ರಂದು ಧನ್ಯಸೇವಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಶ್ರೀಗಳ ಸಂಕಲ್ಪದಂತೆ ಜೀವನದಾನ, ಯೋಗ ಪಟ್ಟಾಭಿಷೇಕ, ಪುಷ್ಪ ರಥೋತ್ಸವ, ರಾಮಜನ್ಮೋತ್ಸವ, ಸೀತಾ ಕಲ್ಯಾಣೋತ್ಸವ, ರಾವಣ ದಹನ, ರಾಮಲೀಲಾ, ಗುರುಕುಲದ ಜಾತ್ರೋತ್ಸವ, ಶ್ರೀರಾಮಚಂದ್ರ ಪಟ್ಟಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪ್ರಧಾನಮಠದ ವ್ಯವಸ್ಥಾಪಕ ರಾಮಚಂದ್ರ ಭಟ್, ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರೇಬೈಲು ವೆಂಕಟೇಶ್, ವಡ್ಡಿನಬೈಲು ವೆಂಕಟೇಶ್, ಶ್ರೀಕರ, ಪಿ.ಡಿ. ಶ್ರೀಧರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

