ಎರಡು ನಾಮಪತ್ರ
ಬೆಂಗಳೂರು/ನವದೆಹಲಿ:
ಚಿನ್ನದ ದರ ಕಳೆದ ಒಂದು ವರ್ಷದಲ್ಲೇ ಅತಿ ದೊಡ್ಡ ಕುಸಿತ ದಾಖಲಿಸಿದೆ. ಚಿನ್ನ ಕೊಳ್ಳಲು ಪ್ಲ್ಯಾನ್ ಹಾಕಿಕೊಂಡವರಿಗಂತೂ ಇದರಷ್ಟು ಖುಷಿಯ ಸಮಾಚಾರ ಮತ್ತೊಂದಿರಲಿಕ್ಕಿಲ್ಲ. ಏರುತ್ತಲೇ ಸಾಗಿದ್ದ ಹಳದಿ ಲೋಹದ ಬೆಲೆ ಭಾರಿ ಕುಸಿತ ಕಂಡಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿದಿದ್ದೇ ಇದಕ್ಕೆ ಕಾರಣ. ಬೆಂಗಳೂರು ಚಿನಿವಾರ ಪೇಟೆಯಲ್ಲಿ ಶನಿವಾರ ಒಂದೇ ದಿನ ಹಳದಿ ಲೋಹದ ಬೆಲೆ 10 ಗ್ರಾಂಗೆ 934 ಇಳಿಕೆಯಾಗಿದ್ದು, 28,326 ಆಗಿದೆ. ಆಭರಣ ಚಿನ್ನದ ದರ ಗ್ರಾಂಗೆ 2,620 ತಲುಪಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಒಂದೇ ದಿನ ಚಿನ್ನದ ದರ 10 ಗ್ರಾಂಗೆ ಬರೋಬ್ಬರಿ 1,250ರಷ್ಟು ಕುಸಿತವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದರ ಇಳಿಕೆಯಾಗಿದ್ದು ಕಳೆದ ವರ್ಷದ ಏಪ್ರಿಲ್ನಲ್ಲಿ. ದೆಹಲಿಯಲ್ಲಿ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ 28,350 ಆಗಿದೆ. ಮುಂಬೈನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. 10 ಗ್ರಾಂ ಸ್ಟ್ಯಾಂ. ಚಿನ್ನದ ದರ 27,880, ಶುದ್ಧ ಚಿನ್ನದ ದರ 28,015 ಆಗಿದೆ.
ಇಂದು ಬಿಜೆಪಿ ಕಾರ್ಯಕರ್ತರ ಸಮಾವೇಶ
ಶಿವಮೊಗ್ಗ: ಬಿಜೆಪಿ ಜಿಲ್ಲಾ ಘಟಕವು ಭಾನುವಾರ ನಗರ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದೆ.
ಈ ಭಾರಿಯ ಚುನಾವಣೆ ವಿಶಿಷ್ಟವಾಗಿದೆ. ಬಿಜೆಪಿ ವಿಚಾರ ಮತ್ತು ಬಲಪರೀಕ್ಷೆಯ ಸಮಯ. ಸಂಘಟನಾತ್ಮಕ ಸವಾಲಾಗಿರುವ ಈ ಸಂದರ್ಭದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಇದನ್ನು ಎದುರಿಸಿ ಯಶಸ್ವಿಯಾಗಿಸುವ ದಿಕ್ಕಿನಲ್ಲಿ ನಗರದಲ್ಲಿ ಭಾನುವಾರದಂದು 10 ಗಂಟೆಗೆ ಕೋಟೆ ರಸ್ತೆಯಲ್ಲಿರುವ ವಾಸವಿ ವಿದ್ಯಾಲಯದ ಆವರಣದಲ್ಲಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ. ಸಮಾವೇಶದಲ್ಲಿ ಉಪಮುಖ್ಯಮಂತ್ರಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಕೆ. ಸಿದ್ಧರಾಮಣ್ಣ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ಮಾಜಿ ಸೂಡಾ ಅಧ್ಯಕ್ಷ ಎಸ್. ಜ್ಞಾನೇಶ್ವರ್, ಮಾಜಿ ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ನಗರಘಟಕದ ಅಧ್ಯಕ್ಷ ಎ.ಎನ್. ನಟರಾಜ್ ಮತ್ತಿತರರು ಉಪಸ್ಥಿತರಿರುವರು.
ಈ ಕಾರ್ಯಕ್ರಮಕ್ಕೆ ಪಕ್ಷದ ಶಿವಮೊಗ್ಗ ನಗರದ ಎಲ್ಲಾ ಬೂತ್ಗಳ ಸಂಚಾಲಕರು, ಸಹ ಸಂಚಾಲಕರು, ನಗರದಲ್ಲಿರುವ ಪಕ್ಷದ ಎಲ್ಲಾ ಪ್ರಮುಖರು, ಪದಾಧಿಕಾರಿಗಳು ಮತ್ತು ಕಾರ್ಯರ್ಕರು ಆಗಮಿಸಬೇಕೆಂದು ನಗರಸಮಿತಿ ಪ್ರಧಾನಕಾರ್ಯದರ್ಶಿ ಎನ್.ಜೆ. ನಾಗರಾಜ್, ಸೋಮಸುಂದರ್ ಮತ್ತಿತರರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

