ಶಿವಮೊಗ್ಗ

ಹಳ್ಳಿಗಳಲ್ಲಿ ಕೆಜೆಪಿ ಪರ ಒಲವು: ವಿದ್ಯಾಧರ್

Published On :

ಕ.ಪ್ರ.ವಾರ್ತೆ, ಹೊಸನಗರ, ಏ.17 ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆಗೈದ ಕೆಜೆಪಿ ಅಭ್ಯರ್ಥಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರ ಪರ ಹಳ್ಳಿಗಳಲ್ಲಿ ಒಲವು ವ್ಯಕ್ತವಾಗುತ್ತಿದೆ ಎಂದು ಕೆಜೆಪಿ ಪ್ರಮುಖ ಗುರುಶಕ್ತಿ ವಿದ್ಯಾಧರ್ ಹೇಳಿದರು.
 ತಾಲೂಕಿನ ಸೊನಲೆ ಗ್ರಾಪಂ ವ್ಯಾಪ್ತಿಯ ಮನೆಮನೆ ಪ್ರಚಾರದಲ್ಲಿ ಪಾಲ್ಗೊಂಡ ಅವರು, ಇದೆ ಮೊದಲ ಬಾರಿ ಚುನಾವಣ ರಾಜಕೀಯಕ್ಕೆ ಇಳಿದಿರುವ ಗೌಡರ ಬಗ್ಗೆ ವಿಶ್ವಾಸ ತೋರುತ್ತಿರುವ ಗ್ರಾಮೀಣರು ತಮ್ಮ ತಮ್ಮ ಗ್ರಾಮಗಳಲ್ಲಿ ತಾವೇ ಕಾರ್ಯಕರ್ತರಾಗಿ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
  ಸಹಕಾರಿ ಕ್ಷೇತ್ರವನ್ನು ಗಮನಾರ್ಹ ಪ್ರಗತಿಯತ್ತ ಮುನ್ನಡೆಸಿರುವ ಗೌಡರು ಶಾಸಕರಾದಲ್ಲಿ ಕ್ಷೇತ್ರದ ಅಭಿವೃದ್ಧಿ ಖಂಡಿತ ಸಾಧ್ಯ ಎಂಬ ಇಂಗಿತ ವ್ಯಕ್ತ ವಾಗಿರುವ ಹಿನ್ನಲೆಯಲ್ಲಿ ಅವರ ಸ್ಪರ್ಧೆ ಕ್ಷೇತ್ರಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಇದನ್ನು ಸಹಿಸದ ವಿಪಕ್ಷಗಳು ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
 ಗ್ರಾಪಂ ಸದಸ್ಯರಾದ ನಾಗವೇಣಿ, ಪ್ರಭುಶೆಟ್ಟಿ, ಪ್ರಮುಖರಾದ ವಾರಂಬಳ್ಳಿ ಕಿಟ್ಟ, ಗೊರಗೋಡು ನಾಗರಾಜ್, ಗೇರಗಲ್ಲು ಗಣೇಶ ಆಚಾರ್ ಗ್ರಾಮದ ಮಹಿಳೆಯರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.