ತ್ರಿಮತಸ್ಥ ವಟುಗಳಿಗೆ ವಸಂತ ವೇದ ಶಿಬಿರ
ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾ ನಗರದ ಬ್ರಾಹ್ಮಣ ವಿದ್ಯಾರ್ಥಿನಿಲಯದಲ್ಲಿ ತ್ರಿಮತಸ್ಥ ವಟುಗಳಿಗೆ ವಸಂತ ವೇದ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರ ಉದ್ಘಾಟಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಟಿ.ವಿ. ಹೆಗಡೆ, ಬ್ರಾಹ್ಮಣರು ತಮ್ಮ ಕುಲ, ಮಾತಾ ಪಿತೃಗಳನ್ನು ಕುರಿತು ಅಭಿಮಾನ ಹೊಂದಿರಬೇಕು. ಬ್ರಾಹ್ಮಣ ಸಮುದಾಯ ಅನುಸಂಧಾನ, ಅಭಿಮಾನದ ಅಧ್ಯಯನ ಹಾಗೂ ಆಚರಣೆಯಲ್ಲಿ ತೊಡಗಿಕೊಂಡು ಸರ್ವತೋಮುಖ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಟರಾಜ ಭಾಗವತ್, ಇಂದು ಬಹಿರಂಗವಾಗಿ ವೇದಿಕೆ, ಸಮಾರಂಭಗಳಲ್ಲಿ ಬ್ರಾಹ್ಮಣ ಎಂದು ಹೇಳಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ, ಅಂತರಂಗದಲ್ಲಿ ಯಾವುದೇ ಸಾಧನೆ ಮತ್ತು ಸಂಸ್ಕಾರವನ್ನು ಮಾಡುತ್ತಿಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸುವ ದೃಷ್ಟಿಯಿಂದ ಬ್ರಾಹ್ಮಣರಲ್ಲಿ ಸಂಸ್ಕಾರವನ್ನು ಹೆಚ್ಚು ನಿರ್ಮಿಸುವಂತಹ ಕಾರ್ಯ ಈ ವಸಂತ ಶಿಬಿರದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋವಿಂದ ಸ್ವಾಮಿ ಮತ್ತು ಆರ್ಚಕ ಅ.ಪ. ರಾಮಭಟ್ ಮತ್ತಿತರರು ಇದ್ದರು. ಏಪ್ರಿಲ್ 15ರಿಂದ ಮೇ 15ರವರೆಗೆ ಬಳಿಗ್ಗೆ 5.30ರಿಂದ ಸಂಜೆ 5.30ರವರೆಗೆ ಶಿಬಿರ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

