ಶಿವಮೊಗ್ಗ

ಈಡಿಗರ ನೆಂಟಸ್ಥಿಕೆ ಕಳಚಿತೇ ಬಿಜೆಪಿ?

Published On :

ಕ.ಪ್ರ.ವಾರ್ತೆ, ಶಿವಮೊಗ್ಗ. ಏ.18
ಈಡಿಗರು ಶಿವಮೊಗ್ಗ ಜಿಲ್ಲೆಯ ಅತಿ ದೊಡ್ಡ ಸಮುದಾಯ. ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸುವುದು ಈ ಸಮುದಾಯದ ಜನರೇ.
  ಆದರೆ, ಬಿಜೆಪಿ ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲೂ ಈಡಿಗರಿಗೆ ಟಿಕೆಟ್ ನೀಡದಿರುವುದು ಈಡಿಗ ಸಂಘಟನೆಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಬಿರುಸಿನ ರಾಜಕೀಯ ಚಟುವಟಿಕೆ ನಡೆದಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (ಬೈಂದೂರು ಸೇರಿ) ಅಂದಾಜು 3.20 ಲಕ್ಷದಷ್ಟು ಈಡಿಗ ಮತದಾರರಿದ್ದು, ಮಾಹಿತಿಯಂತೆ ಸಂಖ್ಯಾ ದೃಷ್ಟಿಯಿಂದ ಈಡಿಗ ಸಮುದಾಯವೇ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಸೊರಬ, ಸಾಗರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಈಡಿಗರು ಶಿಕಾರಿಪುರ, ತೀರ್ಥಹಳ್ಳಿಯಲ್ಲೂ 2-3ನೇ ಸ್ಥಾನದಲ್ಲಿದ್ದಾರೆ. ಭದ್ರಾವತಿ- ಶಿವಮೊಗ್ಗ ನಗರ ಹೊರತುಪಡಿಸಿದರೆ ಶಿವಮೊಗ್ಗ ಗ್ರಾಮಾಂತರದಲ್ಲೂ ಈಡಿಗರೇ ನಿರ್ಣಾಯಕರು.
ಹಿನ್ನೋಟ: ಬಂಗಾರಪ್ಪನವರ ಕಾಲದಿಂದಲೂ ಈಡಿಗ ಸಮುದಾಯ ಬಹುಪಾಲು ಬಂಗಾರಪ್ಪನವರನ್ನೇ ಹಿಂಬಾಲಿಸಿತ್ತು. ಅವರು ಹೊಸ ಪಕ್ಷ ಕಟ್ಟಿದಾಗಲೂ ಅವರ ಬೆಂಬಲಕ್ಕೆ ನಿಂತು, ಗೆಲ್ಲಿಸಿತ್ತು. ಬಂಗಾರಪ್ಪ ಬಿಜೆಪಿ ಸೇರಿದಾಗಲೂ ಬಿಜೆಪಿ ಜಿಲ್ಲೆಯಲ್ಲಿ ಬಲವಾಗಿ ಬೆಳೆದಿತ್ತು. ಈ ಸಮುದಾಯಕ್ಕೆ ಸೇರಿದ ಹರತಾಳು ಹಾಲಪ್ಪ ಹಾಗೂ ಗೋಪಾಲಕೃಷ್ಣ ಬೇಳೂರು ಕ್ರಮವಾಗಿ ಸೊರಬ ಹಾಗೂ ಸಾಗರ ಕ್ಷೇತ್ರಗಳಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆರಸಿ ಬಂದಿದ್ದರೂ, ಈ ಚುನಾವಣೆಯಲ್ಲಿ ಇಬ್ಬರೂ ಆ ಪಕ್ಷದಲ್ಲಿಲ್ಲ.
    ಈ ಸಮುದಾಯಕ್ಕೆ ಸೇರಿದ ನಾಯಕರು ಬಿಜೆಪಿಯನ್ನು ಕೈಕೊಟ್ಟು ಹೊರ ಹೋದರೂ ಬಿಜೆಪಿ ಬಾವುಟವನ್ನೇ ಹಿಡಿದು ಓಡಾಡಿ ಪಕ್ಷವನ್ನು ಸಂಘಟಿಸುತ್ತಿದ್ದ ಹುಲ್ತಿಕೊಪ್ಪ ಶ್ರೀಧರ್‌ಗೆ ಬಿಜೆಪಿ ಕೊನೆ ಕ್ಷಣದಲ್ಲಿ ಬಿಜೆಪಿ ಕೈ ಎತ್ತಿತು.
  ಆ ಮೂಲಕ ಸೊರಬದಲ್ಲಿಯೂ ಕೆಜೆಪಿಯನ್ನು ಕಟ್ಟಿಹಾಕುವ ಧಾವಂತದಲ್ಲಿ ಈಡಿಗ ಸಮುದಾಯವನ್ನೇ ಎದುರುಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸೊರಬದಲ್ಲಿ ಬಿಜೆಪಿ ಲಿಂಗಾಯಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಕಳಚಿತೇ ನೆಂಟಸ್ಥಿಕೆ?: ಚುನಾವಣೆ ಜಾತಿ ಆಧಾರಿತವಾಗಿಯೇ ನಡೆದುಕೊಂಡು ಬರುತ್ತಿದೆ. ಇಂಥ ಹೊತ್ತಿನಲ್ಲಿ ಜಿಲ್ಲೆಯ ಅತಿದೊಡ್ಡ ಸಮುದಾಯದೊಂದಿಗೆ ಬಿಜೆಪಿ ನೆಂಟಸ್ಥಿಕೆ ಕಳಚಿರುವುದು ಈಡಿಗ ಸಮುದಾಯದ ಬಿಜೆಪಿ ಮುಖಂಡರಿಗೂ ನುಂಗಲಾರದ ತುತ್ತಾಗಿದೆ.
  ಜಿಲ್ಲಾ ಈಡಿಗ ಸಂಘಟನೆಯ ಅಧ್ಯಕ್ಷರಾಗಿರುವ ಹುಲ್ತಿಕೊಪ್ಪ ಶ್ರೀಧರ್ ಅವರನ್ನು “OÚ«Ú­sÚ®Úúڒ ಮಾತನಾಡಿಸಿದಾಗ, “¸e毾Úß ಈ ಬೆಳವಣಿಗೆ ಒಂದು ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ.
   ನನಗೆ ಟಿಕೆಟ್ ನೀಡದೇ ಇದ್ದರೂ ಪರವಾಗಿರಲಿಲ್ಲ, ಸಮಾಜದ ಮತ್ತೊಬ್ಬರನ್ನು ಗುರುತಿಸಿ ಟಿಕೆಟ್ ನೀಡಬಹುದಿತ್ತು, ಈ ಬೆಳವಣಿಗೆ ನೋವು }ÚM¦¥æ’ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಇಬ್ಬರು: ಈ ಚುನಾವಣೆಯಲ್ಲಿ ಕಾಂಗ್ರೆಸ್ ಈಡಿಗ ಸಮುದಾಯದಿಂದ ಸಾಗರದಿಂದ ಕಾಗೋಡು ತಿಮ್ಮಪ್ಪ ಹಾಗೂ ಸೊರಬದಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿದೆ.
    ಜೆಡಿಎಸ್ ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಮತ್ತು ಸೊರಬದಲ್ಲಿ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಿದೆ. ಕೆಜೆಪಿ ಹಾಲಪ್ಪನವರನ್ನು ಸೊರಬದಲ್ಲಿ ಅಭ್ಯರ್ಥಿಯಾಗಿ ಮಾಡಿದೆ.
-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.