ದ್ವೇಷದ ರಾಜಕಾರಣ ಹೆಚ್ಚು ದಿನ ನಿಲ್ಲುವುದಿಲ್ಲ
ಕನ್ನಡಪ್ರಭ ವಾರ್ತೆ, ಸೊರಬ, ಏ.19
ದ್ವೇಷದ ರಾಜಕಾರಣ ಬಹು ದಿನ ನಿಲ್ಲುವುದಿಲ್ಲ ಎಂದು ಮಾಜಿ ಶಾಸಕ ಎಚ್. ಹಾಲಪ್ಪ ತಿಳಿಸಿದರು.
ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಾರ ಸಭೆ ನಡೆಸುತ್ತಿರುವ ಅವರ, ಕ್ಷೇತ್ರಕ್ಕೆ ಸುಮಾರು 40 ವರ್ಷಗಳಿಂದ ಗ್ರಹಣ ಬಡಿದದ್ದನ್ನು ಅಭಿವೃದ್ಧಿ ಮೂಲಕ ಸರಿಪಡಿಸುವ ಶ್ರಮವಹಿಸಲಾಗಿದೆ. ಅದರ ಪರಿಣಾಮ ಇಂದು ಈ ಕ್ಷೇತ್ರದ ಚಿತ್ರಣ ಬದಲಾಗಿದೆ. ಇಲ್ಲಿ ಅಭಿವೃದ್ಧಿ ಬಯಸುವ ಜನತೆ ಈ ಬಾರಿಯೂ ನನ್ನನ್ನು ಬೆಂಬಲಿಸಲಿದ್ದು, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುತ್ತಾರೆ ಎಂದರು.
ನೀರಾವರಿ ಪೂರಕ: ಪ್ರಸ್ತುತ ನಾವೀಗ ಹೈಕಮಾಂಡ್ ಸಂಸ್ಕೃತಿಯಿಂದ ಆಚೆ ಬಂದಿದ್ದೇವೆ. ಈ ಹಿನ್ನೆಲೆಯಲ್ಲಿ ಜನತೆ ಕೆಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ದಂಡಾವತಿ ಯೋಜನೆಯೂ ಸೇರಿದಂತೆ ಇನ್ನೂ ಹತ್ತು ಹಲವು ನೀರಾವರಿ ಪೂರಕ ಕಾರ್ಯಗಳು ನಡೆಯಬೇಕಿದೆ. ಈಗಾಗಲೆ ಜನತೆಯ ಮೂಲ ಅವಶ್ಯಕತೆಗಳಾದ ಕುಡಿಯುವ ನೀರು, ರಸ್ತೆ ಮುಂತಾದ ಕಾರ್ಯಗಳನ್ನು ನೆರವೇರಿಸಿ, ಸಾಮಾನ್ಯ ಜನತೆಗೆ ತಲುಪಿಸಲಾಗಿದೆ. ಈ ನಾಲ್ಕೂವರೆ ವರ್ಷದಲ್ಲಿ ಸೊರಬ ಕ್ಷೇತ್ರಕ್ಕೆ 7 ಸೇತುವೆ ನಿರ್ಮಿಸಿಕೊಡಲಾಗಿದೆ. 5635 ಜನತೆ ಸಂಧ್ಯಾಸುರಕ್ಷ, 2000 ಅಂಗವಿಕಲರು, 2000 ವಿಧವೆಯರು ವೇತನ ಪಡೆಯುತ್ತಿದ್ದಾರೆ.
ಪ್ರತ್ಯೇಕ ಬ್ಯಾಂಕ್: ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬ್ಯಾಂಕ್ ತೆರೆದು ಅವರ ಸ್ವಾವಲಂಬನೆಯ ಬದುಕಿಗೆ ನೆರವಾಗುವಂತೆ ಬಡ್ಡಿ ರಹಿತ ಸಾಲ ನೀಡಿ, 1 ಲಕ್ಷ ರು.ಸಾಲವನ್ನು 3 ಲಕ್ಷಕ್ಕೆ ವಿಸ್ತರಿಸುವ ಆಲೋಚನೆ ಹೊಂದಿದ್ದೇವೆ. ಕೆಜೆಪಿ ಪಕ್ಷ ಬಡವರ, ಶ್ರಮಿಕರ, ಕೃಷಿಕರ ಪರ ಕೆಲಸ ಮಾಡಲು ನಮ್ಮನ್ನು ಬೆಂಬಲಿಸಬೇಕು ಎಂದು ಮತ ಯಾಚಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಎಂ.ಆರ್. ಪಾಟೀಲ್, ಜಿಪಂ ಸದಸ್ಯ ಗುರುಕುಮಾರ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಮಣ್ಣತ್ತಿ ಭಾಗಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

