ಶಿವಮೊಗ್ಗ

ನೀತಿ ಸಂಹಿತೆ: ಸಾಮೂಹಿಕ ವಿವಾಹ ರದ್ದು

Published On :

ಕ.ಪ್ರ.ವಾರ್ತೆ,  ಶಿರಾಳಕೊಪ್ಪ,   ಏ.21
ನೇರಲಗಿ ವೀರಭದ್ರೇಶ್ವರ ಸ್ವಾಮಿಯ ಶರಬಿಗುಗ್ಗಳ ಹಾಗೂ ಜಾತ್ರೆ ಅಂಗವಾಗಿ ಕಳೆದ 40 ವರ್ಷದಿಂದ  ನಡೆಯುತ್ತಿದ್ದ ಸಾಮೂಹಿಕ ವಿವಾಹ ಚುನಾವಣೆ ನೀತಿಸಂಹಿತೆ ಅಂಗವಾಗಿ ಈ ವರ್ಷ ಪರವಾನಗಿ ಸಿಗದಿದ್ದುದರಿಂದ ನಿಲ್ಲಿಸಲಾಗಿದೆ.
ಏ. 30 ರಂದು ಶಿರಾಳಕೊಪ್ಪ ಭಾಗದ ಕೊನೆಯ ಜಾತ್ರೆ ಎಂದು ಹೆಸರು ಪಡೆದಿರುವ ಕೆಳದಿ ಅರಸರ ಕಾಲದಲ್ಲಿ ಸ್ಥಾಪಿಸಲಾಗಿದ್ದ ವೀರಭದ್ರ ದೇವರ ಶರಬಿ ಗುಗ್ಗಳ ಬಸವೇಶ್ವರ ರಥೋತ್ಸವ ನಡೆಯಲಿದೆ. ಗುಗ್ಗಳ ಹಾಗೂ ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆ ನೀತಿ ಸಂಹಿತೆ ಅಂಗವಾಗಿ ವಿವಾಹ ಕಾರ್ಯಕ್ರಮ ರದ್ದಾಗಿದೆ.
ಈ ಬಾರಿ ಶರಬಿ ಗುಗ್ಗಳ ಹಾಗೂ ಬಸವೇಶ್ವರ ರಥೋತ್ಸವ ಮಾತ್ರ ನಡೆಯಲಿದೆ. ಶರಬಿಗುಗ್ಗಳ ಬೆಳಗ್ಗೆ 6-30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನದ ವೇಳೆಗೆ ನೇರಲಗಿ ವೀರಭದ್ರೇಶ್ವರ ದೇವಸ್ಥಾನ ತಲುಪಲಿದೆ. ರಸ್ತೆ ಮಧ್ಯದಲ್ಲಿ ಬಿಸಿಲಿನ ತಾಪ ಮತ್ತು ಸಮಯದ ಅಭಾವದಿಂದ ಸಮಿತಿ ಸೂಚಿಸಿದ 85ಕಡೆಗಳಲ್ಲಿ ಮಾತ್ರ ಗುಗ್ಗಳ ಕೊಡಗಳು ನಿಲ್ಲಲಿದ್ದು, ಭಕ್ತರು ಅಲ್ಲಿ ಪೂಜೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ನಂತರ ರಥೋತ್ಸವ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.