ಚುನಾವಣಾ ವೀಕ್ಷಕರ ಸಭೆ (ಸುದ್ದಿ ಸಂಕ್ಷೇಪ)
ಸೊರಬ: ಪಟ್ಟಣದ ತಾಲೂಕು ಕಚೇರಿಯಲ್ಲಿ ಪ್ರಸಕ್ತ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳೊಂದಿಗೆ ಚುನಾವಣಾ ಖರ್ಚುವೆಚ್ಚ ವೀಕ್ಷಕರು ಸಭೆ ನಡೆಸಿ, ಆಯಾ ಅವಧಿಯಲ್ಲಿ ಚುನಾವಣೆಗಾಗಿ ಮಾಡಿದ ಖರ್ಚು ವೆಚ್ಚವನ್ನು ಖಡ್ಡಾಯವಾಗಿ ನೀಡಬೇಕು. ನೀಡದಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು. ಅಧಿಕಾರಿಗಳಾದ ಪ್ರಮೋದ್, ತಹಸೀಲ್ದಾರ್ ತೇಜಸ್ ಕುಮಾರ್, ಪಕ್ಷೇತರ ಅಭ್ಯರ್ಥಿ ಗುರುಮೂರ್ತಿ ಓಟೂರು, ಜೆ.ಎಸ್. ಚಿದಾನಂದಗೌಡ ಹಾಗೂ ಕಾಂಗ್ರೆಸ್ ಪರ ನಜೀರ್, ಕೆಜೆಪಿ ಪರ ಮಂಜುನಾಥ್ ಇದ್ದರು.
ಕಾರ್ಯಕರ್ತರೊಂದಿಗೆ ಜೋಷಿ ಸಂವಾದ
ಶಿವಮೊಗ್ಗ: ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯವರು ಸೋಮವಾರ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಪ್ರವಾಸ ನಡೆಸಿ ಪ್ರಚಾರ ನಡೆಸಿದರು. ಬೆಳಿಗ್ಗೆ ಈಶ್ವರಪ್ಪನವರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿ, ನಂತರ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಜನಸಂಘದ ಕಾಲದ ಹಿರಿಯ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಸಂವಾದದಲ್ಲಿ ಹಿರಿಯರ ಅನುಭವ, ಆಲೋಚನೆ ಮತ್ತು ಮಾರ್ಗದರ್ಶನವನ್ನು ಪಡೆದ ಜೋಶಿಯವರು, ಆಗಿರುವ ಕೆಲವು ನಡವಳಿಗಳ ಬಗ್ಗೆ ಖೇದ ವ್ಯಕ್ತಪಡಿಸಿ ಸಂಘಟನಾತ್ಮಕ ಸಂದರ್ಭಗಳಲ್ಲಿ ಆಗಬಹುದಾದ ಕೆಲವು ಅನಿವಾರ್ಯತೆಗಳ ಬಗ್ಗೆ ವಿವರಣೆ ನೀಡಿದರು. ಪಕ್ಷದ ಸಿದ್ದಾಂತ, ರಾಷ್ಟ್ರೀಯ ವಿಚಾರ, ರಾಷ್ಟ್ರೀಯತೆಯ ಬಗ್ಗೆ ಯಾವುದೇ ಸಂಕೋಚವಿಲ್ಲದೆ, ಆ ವಿಚಾರದ ಗುರಿಯಲ್ಲಿಯೇ ಪಕ್ಷವನ್ನು ಸಂಘಟಿಸುವುದಾಗಿ ಅದಕ್ಕೆ ತಮ್ಮೆಲ್ಲರ ಸಲಹೆ, ಮಾರ್ಗದರ್ಶನ ಮತ್ತು ಆಶೀರ್ವಾದವಿರಲಿ ಎಂದು ತಿಳಿಸಿದರು. ಪ್ರಮುಖವಾಗಿ ಹಿರಿಯರಾದ ಟಿ.ಸಿ. ಶ್ರೀಧರರಾವ್, ರಂಗನಾಥ್, ರೇಣುಕಾ, ಪ್ರತಾಪಶಾಸ್ತ್ರಿ, ಆರ್.ಕೆ. ಸಿದ್ದರಾಮಣ್ಣ, ಅರವಿಂದ, ಸಿ.ಹಾ. ಜಯರಾಮ, ಎಂ.ಬಿ. ಭಾನುಪ್ರಕಾಶ್ ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
'ಕೈ'ಗೆ ಬಲಬಂತು
ಶಿವಮೊಗ್ಗ: ಇತ್ತೀಚೆಗೆ ಕಾಂಗ್ರೆಸ್ ತೊರೆದು ಭರ್ಜರಿ ಸಮಾರಂಭ ಏರ್ಪಡಿಸಿ ಕೆಜೆಪಿ ಸೇರಿದ್ದ ಮಾಜಿ ನಗರಸಭಾ ಅಧ್ಯಕ್ಷ ಎಲ್. ಸತ್ಯನಾರಾಯಣ ರಾವ್ ತಮ್ಮ ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ಪುನಃ ಮಾತೃಪಕ್ಷಕ್ಕೆ ಮರಳಿದಿದ್ದಾರೆ. ಸೋಮವಾರ ಪಕ್ಷದ ಕಚೇರಿಯಲ್ಲಿ ಸತ್ಯನಾರಾಯಣ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು. ಸತ್ಯನಾರಾಯಣ ಅವರ ಪುನರಾಗಮನದಿಂದಾಗಿ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಚುನಾವಣೆ ಸಂದರ್ಭದಲ್ಲಿ ಅವರ ತಂಡದ ಸೇರ್ಪಡೆಯಿಂದಾಗಿ ಹೆಚ್ಚಿನ ಬಲಬಂದಂತಾಗಿದೆ ಎಂದು ಕಾಂಗ್ರೆಸ್ ಮುಖಂಡರು ಇದೇ ಸಂದರ್ಭದಲ್ಲಿ ತಿಳಿಸಿದರು. ಖಾದರ್ ಖಾನ್, ಎಸ್.ಬಿ. ರಾಮಪ್ಪ, ಗಿರೀಶ್ ರಾವ್ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷದ ಜಿಲ್ಲಾ ವೀಕ್ಷಕ ಜಿತೇಂದ್ರ ದೇಶಪ್ರಭು, ರಾಜ್ಯ ವಕ್ತಾರ ಕೆ. ದಿವಾಕರ್, ಎಸ್.ಪಿ. ದಿನೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

