ಶಿವಮೊಗ್ಗ

ಜನ ಸಾಮಾನ್ಯರಿಗೂ ಹಣದ ವ್ಯಾಮೋಹ

Published On :

ಶಿವಮೊಗ್ಗ: ರಾಜಕಾರಣಿಗಳು ಕೋಟಿ ಲೆಕ್ಕದಲ್ಲಿ ಹಣ ಸಂಪಾದನೆ ಮಾಡುತ್ತಿರುವಾಗ ನಾವೇಕೆ ಸುಮ್ಮನಿರಬೇಕೆಂದು ಜನ ಸಾಮಾನ್ಯರಿಗೂ ಕೂಡ ಹಣದ ವ್ಯಾಮೋಹ ಹೆಚ್ಚಾಗಿದೆ ಎಂದು ಭಾಷಾ ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ ಅಭಿಪ್ರಾಯಪಟ್ಟರು.
 ಕರ್ನಾಟಕ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ವಚನಕಾರರು ಜಾತಿ ಎಂಬುದನ್ನು ಗೌಣವೆಂದು ಪರಿಗಣಿಸಿದ್ದು, ಸೇವೆಯೊಂದೇ ಕಾಯಕ- ಅದೇ ಜಂಗಮರ ತತ್ವವಾಗಿತ್ತು. ಆದರೆ, ಇಂದು ಸಮಾಜದಲ್ಲಿ ವಾತಾವರಣವೇ ಬದಲಾಗಿದೆ ಎಂದು ತಿಳಿಸಿದರು.
 ವಚನಗಳನ್ನು ಅರ್ಥೈಸುವ ಬಗೆ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದ ಅವರು, ವಚನಗಳನ್ನು ಅರ್ಥೈಸುವಾಗ ದೃಷ್ಟಿಕೋನ, ಸನ್ನಿವೇಶ ಮತ್ತು ಶಬ್ದಾರ್ಥಗಳನ್ನು ಅರಿಯುವುದು ಅವಶ್ಯಕ ಎಂದು ಹೇಳಿದರು. ವಚನಗಳನ್ನು ಅರ್ಥೈಸುವ ಬಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಶರಣರ ಕೆಲವು ವಚನಗಳನ್ನು ಅರ್ಥೈಸಿಕೊಳ್ಳುವಾಗ ವಿರೋಧಾಭಾಸವಾಗುವುದು ಸಾಮಾನ್ಯ. ಶರಣರ ವಚನಗಳ ಮೂಲ ಅರ್ಥವನ್ನು ತಿಳಿಯುವುದು ಅವಶ್ಯಕ. ಪ್ರತಿಯೊಬ್ಬ ವಚನಕಾರರ ವಚನಗಳಲ್ಲೂ ಸಾಕಷ್ಟು ಮಹತ್ವದ ಅಂಶಗಳನ್ನು ಗುರುತಿಸಬಹುದು ಎಂದು ಹೇಳಿದರು.
 63 ವಚನಕಾರರು 415 ವಚನ ಸಾಹಿತ್ಯದಲ್ಲಿ ಶೂನ್ಯ ಎಂಬ ಪದ ಬಳಕೆ ಮಾಡಿದ್ದಾರೆ. ಇವೆಲ್ಲಾ ವಚನ ಸಾಹಿತ್ಯದಲ್ಲಿನ ವಿಶೇಷತೆಗಳಾಗಿವೆ. ವಚನಕಾರರ ಕಾಲದಲ್ಲಿಯೇ ಅತೀ ಹೆಚ್ಚು ದೇವಾಲಯಗಳು ನಿರ್ಮಾಣವಾದವು ಎಂಬುದು ಮತ್ತೊಂದು ವಿಶೇಷತೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಮತ್ತಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.