ಶಿವಮೊಗ್ಗ

ಮರದ ದಿಮ್ಮಿಗೆ ಬೈಕ್ ಡಿಕ್ಕಿ: ಸಾವು

Published On :

ಸಾಗರ: ತಾಲೂಕಿನ ಆನಂದಪುರಂ ಸಮೀಪದ ಡ್ಯಾಂ ಹೊಸೂರು ರಸ್ತೆಯ ತಿರುವಿನಲ್ಲಿದ್ದ ಮರದ ದಿಮ್ಮಿಗೆ ಬೈಕ್ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗೌತಮಪುರದಿಂದ ಶಿಕಾರಿಪುರಕ್ಕೆ ಯಮಹಾ ಬೈಕಿನಲ್ಲಿ ಹೊರಟಿದ್ದ ಶಿಕಾರಿಪುರದ ಹರಿಹರಪುರದ ನಿವಾಸಿ ಸುರೇಶ್ (26) ಮೃತಪಟ್ಟ ವ್ಯಕ್ತಿ. ಬೈಕಿನ ಹಿಂಬದಿ ಕುಳಿತಿದ್ದ ಮಂಜಪ್ಪ ಎಂಬುವವರು ಗಂಭೀರವಾಗಿ ಗಾಯಗೊಂಡು ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ಮಳೆ
ಸೊರಬ: ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣ ಜನಜೀವನ ಅಸ್ತವ್ಯಸ್ತವಾಗಿತ್ತು.ಸಂಜೆ 5-6 ಗಂಟೆಯಿಂದಲೇ ಮೋಡ ಕವಿದು, ಬಿರುಗಾಳಿ ಬೀಸಲಾರಂಬಿಸಿತ್ತು. ಪಟ್ಟಣದ ಕೆಲ ತಗಡಿನ ಚಾವಣಿಗಳು ಗಾಳಿಗೆ ಸಿಲುಕಿ ಹಾರಿಬಿದ್ದವು.  ಭಾರಿ ಗಾಳಿಯೊಂದಿಗೆ ಆಲಿಕಲ್ಲಿನ ಮಳೆ ಸುರಿದು, ಪಟ್ಟಣದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಸುಮಾರು 3 ತಾಸು ಸುರಿದ ಮಳೆಯಿಂದಾಗಿ ಸೊರಬ ಆನವಟ್ಟಿ, ಬನವಾಸಿ ರಸ್ತೆ ಸಂಪರ್ಕ ಮರ ಬಿದ್ದುದರಿಂದ ಕೆಲಕಾಲ ಕಡಿತಗೊಂಡಿತ್ತು. ಮಾವಲಿ ಗ್ರಾಮದ ಅಂಗಡಿಯೊಂದರ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.