'ಉಚಿತ ವಿದ್ಯುತ್ ಕೊಟ್ಟ ಸಿಎಂ ಬಿಎಸ್ವೈ'
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.28
ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಎರಡೂವರೆ ಕೋಟಿ ಜನರಿಗೆ ಒಂದಲ್ಲ ಒಂದು ಯೋಜನಯ ಪ್ರತಿಫಲ ದೊರಕಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಶಿರಾಳಕೊಪ್ಪ ಹತ್ತಿರದ ನಾಗಿಹಳ್ಳಿ, ಭೋಗಿ, ಕೋಡಿಕೊಪ್ಪ, ಹಿರೇಜಂಬೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ವೀಕ್ಷಿಸಿ ಗ್ರಾಮಸ್ಥರ ಕುಂದು ಕೊರತೆ ವಿಚಾರಿಸಿ ಮಾತನಾಡಿದ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಒಮ್ಮೆ ಹಾಗೂ ಮುಖ್ಯಮಂತ್ರಿ ಸ್ಥಾನದಿಂದ ಇಳಿದನಂತರ ಒಟ್ಟು ಎರಡು ಬಾರಿ ರೈತರ ಸಾಲ ಮನ್ನಾ ಮಾಡಿಸಿಕೊಟ್ಟರು ಎಂದರು.
ಉಚಿತ ವಿದ್ಯುತ್: ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ದೊರಕಿಸಿಕೊಟ್ಟರು. ಇಂದು ಒಬ್ಬ ರೈತರ ಪಂಪಸೆಟ್ಗೆ ವರ್ಷಕ್ಕೆ ರು. 10, 000 ಯುನಿಟ್ ವಿದ್ಯುತ್ ಬಳಕೆ ಆಗುತ್ತಿದೆ ಎಂದರು.
ರಾಜ್ಯದ ಜನರ ಆಶೀರ್ವಾದ ಇದ್ದ ಕಾರಣ ಇಂತಹ ಕೆಲಸ ಕಾರ್ಯ ಮಾಡಲಾಯಿತು. ಆದರೆ ಯಡಿಯೂರಪ್ಪನವರು ಅಧಿಕಾರದಲ್ಲಿ ಇದ್ದರೆ ಮುಂದಿನ 20ವರ್ಷ ಅಧಿಕಾರಕ್ಕೆ ಬರಲಾಗುವದಿಲ್ಲ ಎಂಬ ಹೆದರಿಕೆಯಿಂದ ಕಾಂಗ್ರೆಸ್ ಇಂದಿರಾಗಾಂಧಿ ಹೆಸರು ಹೇಳುತ್ತಾ ಅಪಪ್ರಚಾರ ಮಾಡುತ್ತಾ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಪದ್ಮನಾಭ ಭಟ್ಟ ತಾನು ನಿಷ್ಠಾವಂತ ಎಂದು ಹೇಳಿಕೊಳ್ಳುತ್ತಾ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಎಂದು ಹೇಳಿಕೊಳ್ಳುವ ಈ ವ್ಯಕ್ತಿ ಬಿಜೆಪಿ ಪರ ಮತ ಕೇಳದೇ ಕಾಂಗ್ರೆಸ್ ಪರಮತ ಕೇಳುವುದು ನಿಷ್ಠೆಯೇ ಎಂದು ಪ್ರಶ್ನಿಸಿದರು. ಮಾಜಿ ಶಾಸಕ ಮಹಲಿಂಗಪ್ಪ, ಅಗಡಿ ಅಶೋಕ, ಬಸವನಗೌಡ, ಜಿಪಂ ಸದಸ್ಯ ಬಂಗಾರನಾಯ್ಕ್, ಕೋಡಿಕೊಪ್ಪ ಮಂಜಣ್ಣ ಮೊದಲಾದವರು ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

